More

    ಹಲ್ಲೆಕೋರರ ವಿರುದ್ಧ ಗೂಂಡಾ ಕಾಯ್ದೆಯಡಿ ದಾವೆ; ಆರ್. ಅಶೋಕ ಆಗ್ರಹ

    ಬೆಂಗಳೂರು: ಜೈಶ್ರೀರಾಮ್ ಘೋಷಣೆ ಕೂಗಿದರೆಂದು ಹಿಂದು ಕಾರ್ಯಕರ್ತರ ಹಲ್ಲೆ ಮಾಡಿದ ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ಗೂಂಡಾ, ದೇಶದ್ರೋಹ ಕಾಯ್ದೆಯಡಿ ದಾವೆ ಹೂಡದಿದ್ದರೆ, ಸರ್ವ ಜನಾಂಗದ ಶಾಂತಿಯ ತೋಟ ರಕ್ಷಣೆಗಾಗಿ ರಾಜ್ಯಾದ್ಯಂತ ಚಳವಳಿ ಹೂಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಸಿದರು.

    ಇದನ್ನೂ ಓದಿ: ಸಿನಿಮಾಗಳಿಗಿಂತ ಹೆಚ್ಚಾಗಿ ಈ ವಿಷಯದಲ್ಲೇ ಸಿಕ್ಕಾಪಟ್ಟೆ ಬ್ಯುಸಿಯಾದ್ರಾ ಸೌತ್ ಬ್ಯೂಟಿ ಪೂಜಾ ಹೆಗ್ಡೆ?

    ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಫಿಟ್ಟಿಂಗ್ ಇಡುವುದರಲ್ಲಿ, ಸಣ್ಣ ಘಟನೆಯೆಂದು ತೇಲಿಸಿಬಿಡಲು, ವಿಷಯಾಂತರ ಮಾಡುವಲ್ಲಿ ಕಾಂಗ್ರೆಸ್​ನವರು ನಿಸ್ಸೀಮರು. ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ಕ್ರಮಕೈಗೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಖಡಕ್ ಆಗಿ ಹೇಳಿದರು.

    ವೋಟಿಗಾಗಿ ಮೂಲಭೂತವಾದಿ ದುಷ್ಕರ್ಮಿಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ. ದುಷ್ಕೃತ್ಯ ಎಸಗಿದವರ ವಿರುದ್ಧ ಸಣ್ಣ, ಪುಟ್ಟ ಕೇಸ್ ಹಾಕಿ ಬಿರಿಯಾನಿ ತಿನ್ನಿಸುತ್ತಾ ಬಂದಿದ್ದರ ಪರಿಣಾಮ ಸರ್ವಜನಾಂಗದ ತೋಟವಾಗಿರುವ ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದೆ. ಹಿಂದುಗಳಲ್ಲಿ ಭಯ, ಭೀತಿ ಉಂಟಾಗಿದೆ. ಈ ಘಟನೆಯನ್ನು ಬಿಜೆಪಿ ವೈಭವೀಕರಣ ಮಾಡುತ್ತಿಲ್ಲ. ವೋಟಿಗಾಗಿ ಓಲೈಕೆ ರಾಜಕಾರಣ ಮಾಡುತ್ತಿಲ್ಲವೆಂದು ಆರ್.ಅಶೋಕ್ ಸಮಜಾಯಿಷಿ ನೀಡಿದರು.

    ಇದನ್ನೂ ಓದಿ: ಪೋಸ್ಟ್ ಆಫೀಸ್ ಯೋಜನೆ: ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್.. ತಿಂಗಳಿಗೆ 20,500ರೂ. ಪಡೆಯಬಹುದು!

    ರಕ್ಷಿಸುವ ಧಾವಂತ:  ಬಹುಸಂಖ್ಯಾತರ ಸ್ಥಿತಿಗತಿ ಏನಾದರಾಗಲಿ, ಅಲ್ಪಸಂಖ್ಯಾತರ ವೋಟುಗಳ ಬಂದರೆ ಸಾಕು ಎಂಬ ಕಾಂಗ್ರೆಸ್ ಧೋರಣೆ ವಾತಾವರಣ ಹದಗೆಡಿಸಿದೆ. ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರು ನಶೆಯಲ್ಲಿದ್ದರು, ಹುಚ್ಚರು ಎಂದು ಬಿಂಬಿಸಿ ರಕ್ಷಿಸುವ ಧಾವಂತ ತೋರಿದರೂ ಅಚ್ಚರಿಯಿಲ್ಲವೆಂದು ಕಿಡಿಕಾರಿದರು.

    ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದಾಗ ಹೊಗೆ ಆರುವ ಮುನ್ನ ಹೋಟೆಲ್ ಉದ್ಯಮಗಳ ನಡುವೆ ಪೈಪೋಟಿ ಎಂಬ ಹೇಳಿಕೆ ನೀಡಿ, ತನಿಖೆಯ ದಿಕ್ಕು ತಪ್ಪಿಸಲು ಹವಣಿಸಿದ್ದರು. ಹಿಂದು ಕಾರ್ಯಕರ್ತರ ಮೇಲೆ ಮೂಲಭೂತವಾದಿ ದುಷ್ಕರ್ಮಿಗಳ ಹಲ್ಲೆಗೂ ಬೇರೊಂದು ಸಂಬಂಧ ಕಲ್ಪಿಸಿ, ಸಾಮಾನ್ಯ ಪ್ರಕರಣ ದಾಖಲಿಸದರೂ ಅಚ್ಚರಿಯಿಲ್ಲವೆಂದು ಆರ್.ಅಶೋಕ್ ಅನುಮಾನ ವ್ಯಕ್ತಪಡಿಸಿದರು.

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts