More

    ಕೆಪಿಸಿಸಿ​ ಕೆಎಸ್​ಆರ್​ಟಿಸಿಗೆ ಕೊಟ್ಟ 1 ಕೋಟಿ ರೂ.ಚೆಕ್​ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಸಚಿವ ಆರ್.ಅಶೋಕ್​…!

    ಬೆಂಗಳೂರು: ನಿನ್ನೆ ಮೆಜೆಸ್ಟಿಕ್​ನಲ್ಲಿ ಕಾಂಗ್ರೆಸ್ ನಾಯಕರು ಸೃಷ್ಟಿ ಮಾಡಿದ್ದ ಅವಾಂತರಕ್ಕೆ ಕಂದಾಯ ಸಚಿವ ಆರ್​. ಅಶೋಕ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವುದೇ ರಾಜಕಾರಣಗಳು ಇಂತಹ ಸಂದರ್ಭದಲ್ಲಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. 150 ವರ್ಷದ ಇತಿಹಾಸ ಇರುವ ಕಾಂಗ್ರೆಸ್​ ಕರೊನಾ ವೈರಸ್​ ಸಂದರ್ಭದಲ್ಲಿ ಇಷ್ಟು ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

    ಕಾಂಗ್ರೆಸ್​ ನಾಯಕರು ಉತ್ತರಕುಮಾರನ ಪೌರುಷವನ್ನು ತೋರಿಸುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು. ನಮ್ಮ ಬಳಿ ಕೋಟ್ಯಂತರ ರೂಪಾಯಿ ಇದೆ ಎಂದು ಹೋದಲ್ಲಿ, ಬಂದಲ್ಲಿ ಹೇಳಿಕೊಳ್ತಿದ್ದಾರೆ. ಈ ಮೂಲಕ ನೊಂದ ಜನರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದರು.

    ಇದನ್ನೂ ಓದಿ: ಬಿಜೆಪಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಮಹಿಳಾ ಘಟಕ; ಕಣ್ಣಿಗೆ ಬಟ್ಟೆಕಟ್ಟಿಕೊಂಡು ‘ನಾನು ಗಾಂಧಾರಿ’ ಎಂದ್ರು ಡಿ.ಕೆ.ಶಿವಕುಮಾರ್​

    ಇನ್ನು ಡಿ.ಕೆ.ಶಿವಕುಮಾರ್ ಅವರು ಕೂಲಿ ಕಾರ್ಮಿಕರನ್ನು ಉಚಿತವಾಗಿ ಕರೆದುಕೊಂಡು ಹೋಗಿ ಅವರ ಊರಿಗೆ ಬಿಡಲು ಕೆಪಿಸಿಸಿಯಿಂದ ಕೆಎಸ್​ಆರ್​ಟಿಸಿಗೆ 1 ಕೋಟಿ ರೂಪಾಯಿ ಚೆಕ್​ ನೀಡಿದ್ದಾಗಿ ಹೇಳಿಕೊಂಡಿದ್ದರು. ಈ ಬಗ್ಗೆ ಕೂಡ ಆರ್​. ಅಶೋಕ್ ಮಾತನಾಡಿದ್ದಾರೆ.

    ಹಿಂದೆ ದಿನೇಶ್​ ಗುಂಡೂರಾವ್​ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಯಾವುದಕ್ಕೂ ದೇಣಿಗೆ ನೀಡಿರಲಿಲ್ಲ. ಈಗ ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗುತ್ತಿದ್ದಂತೆ ಏಕಾಏಕಿ ದುಡ್ಡು ಬರ್ತಿದೆ. ಅದು ನಮಗೆ ತೀವ್ರ ಆಶ್ಚರ್ಯವನ್ನುಂಟು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್​ ಅಧ್ಯಕ್ಷರು ನೀಡಿದ ಚೆಕ್​ ಮೇಲೆ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೆಸರು ಇದೆ. ಆದರೆ ಡಿ.ಕೆ.ಶಿವಕುಮಾರ್​ ತಾವು ಚೆಕ್​ ಕೊಟ್ಟಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದರ ಮೇಲೆ ಡಿಕೆಶಿ ಸಹಿ ಇಲ್ಲ. ಇವರಿಗೆ ಅಕೌಂಟ್​ ಚೇಂಜ್​ ಮಾಡುವ ಜ್ಞಾನ ಕೂಡ ಇಲ್ಲ. ಹಾಗಾಗಿ ಚೆಕ್​ ನಕಲಿ. ನಾವದನ್ನು ತೆಗೆದುಕೊಂಡಿಲ್ಲ ಎಂದು ಆರ್​. ಅಶೋಕ್​ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕೆಎಸ್​ಆರ್​ಟಿಸಿಗೆ 1 ಕೋಟಿ ರೂ. ದೇಣಿಗೆ ಕೊಟ್ಟ ಕೆಪಿಸಿಸಿ, ಕಾರ್ಮಿಕರ ಕಷ್ಟ ಆಲಿಸಿದ ಕಾಂಗ್ರೆಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts