More

    ನಾನೇನು ಅವಳಿಗೆ ರೇಪ್​ ಮಾಡಿದೀನಾ? ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ಅರವಿಂದ ಲಿಂಬಾವಳಿ

    ಬೆಂಗಳೂರು: ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಮಹಿಳೆಯೊಬ್ಬರ ಮೇಲೆ ದರ್ಪ ತೋರಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟೇ ಅಲ್ಲದೆ, ಘಟನೆಯ ಬಗ್ಗೆ ದಿಗ್ವಿಜಯ ನ್ಯೂಸ್​ ಪ್ರತಿಕ್ರಿಯೆ ಕೇಳಲು ಹೋದಾಗ ನಾನೇನು ಅವಳನ್ನು ರೇಪ್​ ಮಾಡಿದ್ದೀನಾ? ಎಂದು ನಾಲಿಗೆ ಹರಿಬಿಡುವ ಮೂಲಕ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದುಕೊಂಡಿದ್ದಾರೆ.

    ದಿಗ್ವಿಜಯ ನ್ಯೂಸ್​ ಪ್ರತಿನಿಧಿಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಲಿಂಬಾವಳಿ, ನಿಮ್ಮನ್ನು ಮಹಿಳೆಯರ ಪರ ಮಾತನಾಡುವುದಕ್ಕೆ ಕರೆಸಿರೋದಾ? ಜನರ ಪರ ಮಾತನಾಡಿ, ಅವರು ಒತ್ತುವರಿ ಮಾಡಿದ್ದಾರೆ. ಅದನ್ನು ಬಿಟ್ಟು ಮಹಿಳೆಗೆ ಹಾಗೆ ಮಾಡಿದ್ರಿ ಅಂತೀರಿ, ನಾನೇನು ರೇಪ್​ ಮಾಡಿದ್ದೀನಾ ಅವಳಿಗೆ? ಎನ್ನುವ ಮೂಲಕ ಶಾಸಕರು ಮತ್ತೆ ನಾಲಿಗೆ ಹರಿಬಿಟ್ಟರು.

    ಕಾಂಗ್ರೆಸ್​ ಆಕ್ರೋಶ
    ನಾನೇನು ರೇಪ್​ ಮಾಡಿದ್ದೀನಾ ಎಂಬ ಶಾಸಕರ ಹೇಳಿಕೆಗೆ ಕಾಂಗ್ರೆಸ್​ ತೀವ್ರ ಆಕ್ರೋಶ ಹೊರಹಾಕುತ್ತಿದೆ. ಕಾಂಗ್ರೆಸ್​ನ ಮಹಿಳಾ ಸದಸ್ಯೆಯರು ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಲಿಂಬಾವಳಿ ಹೇಳಿಕೆಯನ್ನು ವಿರೋಧಿಸಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

    ಘಟನೆ ಹಿನ್ನೆಲೆ ಏನು?
    ಇತ್ತಿಚೀಗೆ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಗೆ ಹಲೆವಡೆ ಸಮಸ್ಯೆ ಉಂಟಾಗಿದೆ. ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಗುರುವಾರ ನಲ್ಲೂರಹಳ್ಳಿಯ ವೈಟ್​ಫೀಲ್ಡ್​​ ಕೋಡಿ ಸರ್ಕಲ್​ ಬಳಿ ರಾಜಕಾಲುವೆ ಒತ್ತುವರಿ ಆಗಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಕೈಯಲ್ಲಿ ಕೆಲ ಪತ್ರಗಳನ್ನು ಹಿಡಿದುಕೊಂಡು ಆಗಮಿಸಿ ಅಳಲು ತೋಡಿಕೊಳ್ಳಲು ಯತ್ನಿಸುತ್ತಿದ್ದರು. ‘ಸರ್..​ ಸರ್..’ ಎನ್ನುತ್ತಾ ಸಮಸ್ಯೆ ಹೇಳಿಕೊಳ್ಳಲು ಮುಂದಾದ ಮಹಿಳೆ ಅವಾಜ್​ ಹಾಕಿದ ಶಾಸಕರು, ಆಕೆಯ ಕೈಯಿಂದ ದಾಖಲೆ ಪತ್ರ ಕಸಿದುಕೊಳ್ಳಲು ಯತ್ನಿಸಿದ್ದಲ್ಲದೆ, ‘ಪೊಲೀಸ್​ ಸ್ಟೇಷನ್​ಗೆ ಕರೆದುಕೊಂಡು ಹೋಗಿ ಕೂರಿಸಿ’ ಎಂದಿದ್ದಾರೆ.

    ‘ಒತ್ತುವರಿ ಮಾಡ್ಕೊಂಡು ನ್ಯಾಯ ಕೇಳೋಕೆ ಬರ್ತೀಯಾ? ನಿಂಗೆ ಮಾನ ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ? ಒತ್ತುವರಿ ಮಾಡಿಕೊಳ್ವಾಗ ಚಂದೋ… ನನಗೂ ಬೇರೆ ಭಾಷೆ ಬರುತ್ತೆ…’ ಎಂದು ಜೋರು ಧ್ವನಿಯಲ್ಲೇ ಶಾಸಕರು ದರ್ಪದಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲ ಮಹಿಳೆಯ ಕೈಯಲ್ಲಿ ಕಾಗದ ಪತ್ರಗಳನ್ನು ಕಿತ್ತುಕೊಳ್ಳೋಕು ಯತ್ನಿಸಿದ್ದಾರೆ. ‘ಸರ್​, ಮರ್ಯಾದೆಯಿಂದ ಮಾತಾಡಿ. ಹೆಣ್ಣುಮಕ್ಕಳು ಅನ್ನುವ ಗೌರವ ಇರಲಿ. ನೀವು ನನಗೂ ಎಂಎಲ್​ಎ. ಎಲ್ಲರಿಗೂ ಶಾಸಕರು. ನಾನು ಒತ್ತುವರಿ ಮಾಡಿಕೊಂಡಿಲ್ಲ. ದಾಖಲೆ ಇದೆ ನೋಡಿ’ ಎಂದು ಮಹಿಳೆ ಹೇಳಿದರೂ ‘ಇವಳಿಗೆ ಮರ್ಯಾದೆ ಬೇರೆ ಕೇಡು ಒಳಗೆ ಹಾಕಿ’ ಎಂದು ಪೊಲೀಸರಿಗೆ ಶಾಸಕರು ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಆ ಪತ್ರವನ್ನೂ ಮಹಿಳೆ ಕೈಯಿಂದ ಕಿತ್ತುಕೊಂಡಿದ್ದಾರೆ.

    ಈ ವಿಡಿಯೋ ವೈರಲ್​ ಆಗಿದ್ದು, ಸಾರ್ವಜನಿಕರು ಶಾಸಕರ ನಡೆಯನ್ನ ಖಂಡಿಸಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಬಳಿ ಅರವಿಂದ್ ಲಿಂಬಾವಳಿ ತೋರಿದ ದರ್ಪವನ್ನು ಟೀಕಿಸಿದ್ದಾರೆ. ಇವ್ರೇನಾ ನಮ್ಮ ಜನಪತ್ರಿನಿಧಿಗಳು? ಅದ್ಹೇನೆ ಇರಲಿ ಮೊದಲು ಸಮಸ್ಯೆ ಆಲಿಸಿ ನಂತರ ತಪ್ಪಿದ್ದರೆ ಕಾನೂಕು ಕ್ರಮ ಕೈಗೊಳ್ಳಬಹುದು. ಆದರೆ ಅಧಿಕಾರ ಇದೆ ಎಂದು ಮನವಿ ಕೊಡಲು ಬಂದವರನ್ನೂ ಪೊಲೀಸ್​ ಸ್ಟೇಷನ್​ನಲ್ಲಿ ಕೂರಿಸ್ತಾರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ನಿನ್ಗೆ ಮಾನ-ಮರ್ಯಾದೆ ಇದ್ಯಾ? ನಾಚಿಕೆ ಆಗಲ್ವಾ?… ಮಹಿಳೆ ವಿರುದ್ಧ ಅರವಿಂದ ಲಿಂಬಾವಳಿ ಗರಂ, ವಿಡಿಯೋ ವೈರಲ್​

    ಹಳ್ಳಿಯಲ್ಲಿ ಫಾರ್ಮ್​ಹೌಸ್​ ಖರೀದಿಸಿದ ವಿರುಷ್ಕಾ ದಂಪತಿ: 8 ಎಕರೆ ಫಾರ್ಮ್​ಹೌಸ್​ನ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಮಹಿಳೆಯನ್ನು ಡ್ರೈವಿಂಗ್ ಟೆಸ್ಟ್​ಗೆ ಕರೆದೊಯ್ದ RTO ಅಧಿಕಾರಿಯಿಂದ ಮಾರ್ಗ ಮಧ್ಯೆ ನಡೆಯಿತು ನೀಚ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts