More

    ಭಾರತದ ಚೌಕಿ ಮೇಲಿನ ದಾಳಿಗೆ 30 ಸಾವಿರ ರೂ. ಇನಾಮು: ಚಿಕಿತ್ಸೆ ಪಡೆಯುತ್ತಿದ್ದ ಬಂಧಿತ ಉಗ್ರ ಸಾವು

    ಶ್ರೀನಗರ: ಭಾರತದ ಸೇನಾ ಚೌಕಿಯ ಮೇಲೆ ದಾಳಿ ಮಾಡಿದರೆ ಪಾಕ್ ಸೇನೆಯ ಕರ್ನಲ್​ವೊಬ್ಬರು 30 ಸಾವಿರ ರೂಪಾಯಿ (ಪಾಕ್ ಕರೆನ್ಸಿ) ನೀಡುವುದಾಗಿ ಹೇಳಿದ್ದರು ಎಂದು ಬಾಯ್ಬಿಟ್ಟಿದ್ದ ಬಂಧಿತ ಉಗ್ರ, ಚಿಕಿತ್ಸೆ ಫಲಿಸದೇ ಶನಿವಾರ (ಸೆ.3) ಮೃತಪಟ್ಟಿದ್ದಾನೆ.

    ಎರಡು ವಾರಗಳ ಹಿಂದೆ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಬಳಿ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ದಾಟಿ ಒಳನುಸುಳುತ್ತಿದ್ದ ಉಗ್ರನ ಕಾಲಿಗೆ ಗುಂಡಿಕ್ಕಿ ಬಂಧಿಸಲಾಗಿತ್ತು. ಗಾಯಗೊಂಡಿದ್ದ ಉಗ್ರನಿಗೆ ರಜೌರಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶನಿವಾರ ರಾತ್ರಿ ಹೃದಯ ಸ್ತಂಭ (ಕಾರ್ಡಿಯಕ್​ ಅರೆಸ್ಟ್​)ನದಿಂದ ಮೃತಪಟ್ಟಿದ್ದಾನೆ.

    ಮೃತ ಉಗ್ರನ ಹೆಸರು ತಬ್ರಕ್​ ಹುಸೇನ್​. ಈತ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್‌ಕೋಟ್ ಗ್ರಾಮದ ನಿವಾಸಿ. ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಎಂಬುವರು ನನ್ನನ್ನು ಕಳುಹಿಸಿದ್ದರು ಎಂದು ವಿಚಾರಣೆ ವೇಳೆ ಉಗ್ರ ಬಹಿರಂಗಪಡಿಸಿದ್ದ. ಕರ್ನಲ್ ನೀಡಿದ 30,000 ಪಾಕಿಸ್ತಾನಿ ರೂಪಾಯಿಗಳನ್ನು ಆತ ಒಯ್ಯುತ್ತಿದ್ದ.

    ಆಗಸ್ಟ್ 21 ರಂದು ಮುಂಜಾನೆ ನೌಶೇರಾ ಪ್ರದೇಶದ ಜಂಗರ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಸೈನಿಕರು, ಗಡಿ ನಿಯಂತ್ರಣ ರೇಖೆಯ ಬಳಿ ಮೂವರು ಭಯೋತ್ಪಾದಕರ ಚಲನಾವಲವನ್ನು ಗುರುತಿಸಿದರು. ಒಳನುಸುಳುಕೋರರಲ್ಲಿ ತಬ್ರಕ್​ ಹುಸೇನ್​ ಭಾರತೀಯ ಸೇನಾ ಚೌಕಿಯ ಸಮೀಪದಲ್ಲಿದ್ದನು ಮತ್ತು ಬೇಲಿಯನ್ನು ಕತ್ತರಿಸಲು ಪ್ರಯತ್ನಿಸಿದನು. ಈ ವೇಳೆ ಸೈನಿಕರನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದಾಗ, ಆತನಿಗೆ ಗುಂಡು ಹಾರಿಸಿ, ಸೆರೆಹಿಡಿಯಲಾಯಿತು.

    ಇನ್ನಿಬ್ಬರು ನುಸುಳುಕೋರರು ದಟ್ಟ ಕಾಡಿನಲ್ಲಿ ರಕ್ಷಣೆ ಪಡೆದು ಪಾಕಿಸ್ತಾನ ಆಕ್ರಮಿತ ಪ್ರದೇಶಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಪಾಕಿಸ್ತಾನಿ ಭಯೋತ್ಪಾದಕ ತಬ್ರಕ್​ ಹುಸೇನ್​ನನ್ನು ಜೀವಂತವಾಗಿ ಸೆರೆಹಿಡಿಯಲಾಯಿತು ಮತ್ತು ತಕ್ಷಣದ ವೈದ್ಯಕೀಯ ನೆರವು ಮತ್ತು ಜೀವರಕ್ಷಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಎರಡು ವಾರಗಳಿಂದ ಆಸ್ಪತ್ರೆಯಲ್ಲೇ ಇದ್ದ ತಬ್ರಕ್​, ಚಿಕಿತ್ಸೆ ಫಲಿಸದೇ ಹತನಾಗಿದ್ದಾನೆ. (ಏಜೆನ್ಸೀಸ್​)

    ಭಾರತದ ಚೌಕಿ ಮೇಲಿನ ದಾಳಿಗೆ 30 ಸಾವಿರ ರೂ. ಇನಾಮು: ಬಂಧಿತ ಉಗ್ರ ಬಿಚ್ಚಿಟ್ಟ ಭಯಾನಕ ರಹಸ್ಯವಿದು

    ಬಿಜೆಪಿ ನಾಯಕಿ ಸೊನಾಲಿ ಮನೆಯಲ್ಲಿ ಪತ್ತೆಯಾದ 3 ಡೈರಿಯಲ್ಲಿದೆ ಮಹತ್ವದ ಮಾಹಿತಿ! ಲಾಕರ್​ಗಳು ಸಹ ಸೀಜ್​

    ನೌಕರರಿಗೆ ಆರೋಗ್ಯ ಭಾಗ್ಯ: ಸರ್ಕಾರಿ ಉದ್ಯೋಗಿಗಳಿಗೆ ನಗದುರಹಿತ ಚಿಕಿತ್ಸೆ, 30 ಲಕ್ಷ ಜನರಿಗೆ ಅನುಕೂಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts