More

    ತಮಿಳುನಾಡಲ್ಲಿ ಮುಂದುವರಿದ ವಿದ್ಯಾರ್ಥಿನಿಯರ ಸಾವಿನ ಸರಣಿ: ಮತ್ತೊಂದು ಸಾವು​, ಎರಡೇ ವಾರದಲ್ಲಿ 4ನೇ ಪ್ರಕರಣ

    ಚೆನ್ನೈ: ತಮಿಳುನಾಡಿನಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, 17 ವರ್ಷದ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಎರಡೇ ವಾರದಲ್ಲಿ ನಡೆದ 4ನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.

    ಶಿವಕಾಸಿಯ ಅಯ್ಯಂಬತ್ತಿಯ ನಿವಾಸದಲ್ಲಿ 11ನೇ ತಗತಿಯ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಮೃತ ವಿದ್ಯಾರ್ಥಿನಿ ಕಣ್ಣನ್​ ಮತ್ತು ಮೀನಾ ದಂಪತಿಯ ಪುತ್ರಿ. ದಂಪತಿ ಪಟಾಕಿ ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಅಪ್ಪ-ಅಮ್ಮ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಾವಿನ ಹಾದಿ ಹಿಡಿದಿದ್ದಾಳೆ.

    ಶಾಲೆಯಿಂದ ಮನೆಯಿಂದ ಬಂದ ಕೂಡಲೇ ನೇಣಿಗೆ ಶರಣಾಗಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಯ ಅಜ್ಜಿ ಮನೆಯಿಂದ ಹೊರಹೋಗಿದ್ದರು. ಮತ್ತೆ ಮನೆಗೆ ಬಂದಾಗ ಮೊಮ್ಮಗಳ ನೇಣು ಬಿಗಿದುಕೊಂಡಿರುವುದನ್ನು ನೋಡಿ ಸಹಾಯಕ್ಕಾಗಿ ಕೂಗಿಕೊಂಡರು. ಆದರೆ, ಅಷ್ಟರಲ್ಲಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಬಳಿಕ ನೆರೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.

    ಘಟನಾ ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿನಿಯ ಮೃತದೇಹವನ್ನು ವಶಕ್ಕೆ ಪಡೆದು, ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ವಿದ್ಯಾರ್ಥಿನಿಯ ಈ ನಡೆಗೆ ಕಾರಣ ಏನು ಎಂಬುದು ಇನ್ನೂ ಖಚಿತವಾಗಿಲ್ಲ ಮತ್ತು ಆಕೆಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

    ಸೋಮವಾರ ಕುಡಲೂರು ಜಿಲ್ಲೆಯಲ್ಲಿ 12ನೇ ತರಗತಿಯ ಮತ್ತೊರ್ವ ವಿದ್ಯಾರ್ಥಿನಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತ್ತೆಯಾದ ಸೂಸೈಡ್​ ನೋಟ್​ನಲ್ಲಿ ಆಕೆಯ ಪೋಷಕರು ಐಎಎಸ್​​ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕೆಂದು ಬಯಸಿದ್ದರು, ಇದು ನನ್ನನ್ನು ಅಪಾರ ಒತ್ತಡಕ್ಕೆ ಸಿಲುಕಿಸಿತ್ತು ಎಂದು ಬರೆದಿದ್ದಾಳೆ ಎನ್ನಲಾಗಿದೆ. ಅದಕ್ಕೂ ಒಂದು ದಿನದ ಹಿಂದೆಯಷ್ಟೇ ತಿರುವಳ್ಳುರು ತಿರುಟ್ಟಣಿ ಮೂಲದ ಸೇಕ್ರೆಡ್​ ಹಾರ್ಟ್​ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ತನ್ನ ಹಾಸ್ಟೆಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಸದ್ಯ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ.

    ಇನ್ನ ಕಳೆದ ಜುಲೈ 13ರಂದು ಕಲ್ಲಕುರಿಚಿ ಜಿಲ್ಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿನಿಯ ಸಾವಿನ ಬಗ್ಗೆಯೂ ಸಿಐಡಿ ತನಿಖೆ ನಡೆಸುತ್ತಿದೆ. ಸದ್ಯ ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಸದ್ಯ ವಿದ್ಯಾರ್ಥಿನಿಯರ ಸಾವು ಪ್ರಕರಣ ಸಂಬಂಧ ಈಗಾಗಲೇ ಕ್ರಮ ಕೈಗೊಳ್ಳಲು ಸೂಚಿಸಿರುವ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​, ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ಆಲೋಚನೆಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ತಮಿಳುನಾಡಿನಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ: ಎರಡು ವಾರದಲ್ಲಿ 3ನೇ ಪ್ರಕರಣ

    ಸಾಲದ ಸುಳಿಗೆ ಸಿಲುಕಿ ಇನ್ನೇನು ಮನೆ ಮಾರುವಷ್ಟರಲ್ಲಿ 1 ಕೋಟಿ ರೂ.ನೊಂದಿಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮಿ!

    ಅನೈತಿಕ ತಾಣವಾದ ಕುಮಾರವ್ಯಾಸ ಮೈದಾನ; ಮಂಟಪದ ಜಾಗದಲ್ಲಿ ವಾಹನ ನಿಲುಗಡೆ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts