More

    ಓ ವಿಧಿಯೇ… ನೀನೆಷ್ಟು ಕ್ರೂರಿ: ಹಸುಗೂಸನ್ನು ಮನೆಯಲ್ಲೇ ಬಿಟ್ಟು ಹೋದ ಪ್ರಖ್ಯಾತ ಕಿರುತೆರೆ ಕಲಾವಿದನ ಪತ್ನಿ!

    ಭೋಪಾಲ್ (ಮಧ್ಯಪ್ರದೇಶ)​: ಕರೊನಾ ಪಾಸಿಟಿವ್​ ಆದ ಒಂದು ವಾರದ ಬೆನ್ನಲ್ಲೇ ಪ್ರಖ್ಯಾತ ಕಿರುತೆರೆ ಕಲಾವಿದ ಅನಿರುದ್ಧ್​ ದೇವ್​ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಶೀಘ್ರ ಚೇತರಿಕೆ ಹಾರೈಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅನಿರುದ್ಧ್​​ ಪತ್ನಿ ಶುಭಿ ಅಹುಜಾ ಮನವಿ ಮಾಡಿಕೊಂಡಿದ್ದು, ಸದ್ಯ ಚಿಕಿತ್ಸೆಗೆಂದು ಭೋಪಾಲ್​ನ ಆಸ್ಪತ್ರೆಗೆ ಅನಿರುದ್ಧ ದಾಖಲಾಗಿದ್ದು, ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರೆಂದು ಅಹುಜಾ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಇಷ್ಟೇ ಅಲ್ಲದೆ, ಓ ವಿಧಿಯೇ… ನೀನೆಷ್ಟು ಕ್ರೂರಿ ಎನ್ನುವಂತಿದೆ ಕರೊನಾ ಸೃಷ್ಟಿಸಿರುವ ಭಯ. ಏಕೆಂದರೆ, ತನ್ನ ಗಂಡನನ್ನು ನೋಡಿಕೊಂಡು ಬರಲು ತನ್ನ ಎರಡು ತಿಂಗಳ ಹಸುಗೂಸನ್ನು ಮನೆಯಲ್ಲಿ ಬಿಟ್ಟು ಹೋಗಿದ್ದಾಗಿ ಅಹುಜಾ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ನನ್ನ ಜೀವನದಲ್ಲೇ ಇದು ಅತಿ ದೊಡ್ಡ ಸವಾಲೆಂದು ಬರೆದಿರುವ ಅಹುಜಾ, ಕರೊನಾ ಸೃಷ್ಟಿಸಿರುವ ಭೀಕರತೆ ತೆರೆದಿಟ್ಟರು.

    ಒಂದು ಕಡೆ ಆಸ್ಪತ್ರೆಯಲ್ಲಿ ಕರೊನಾದಿಂದ ಬಳಲುತ್ತಿರುವ ನನ್ನ ಪತ್ನಿಯ ಪಾಲನೆ ಮುಖ್ಯವಾದರೆ, ಇನ್ನೊಂದೆಡೆ 2 ತಿಂಗಳ ಮಗುವಿನ ಪೋಷಣೆಯನ್ನು ಮಾಡಬೇಕಿದೆ. ಇದು ನನ್ನ ಜೀವನದ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ. ದಯವಿಟ್ಟು ನನ್ನ ಪತಿಯ ಆರೋಗ್ಯಕ್ಕಾಗಿ ಎಲ್ಲರು ಪ್ರಾರ್ಥಿಸಿ. ಈ ಸಮಯದಲ್ಲಿ ನನ್ನ ಪತಿಗೆ ಇದು ಮುಖ್ಯವಾಗಿದೆ ಎಂದು ಅಹುಜಾ ಕೇಳಿಕೊಂಡಿದ್ದಾರೆ.

    ಸದ್ಯ ಅನಿರುದ್ಧ ಆರೋಗ್ಯ ಸ್ಥಿರವಾಗಿದ್ದು, ಮುಂದಿನ ಎರಡು ದಿನ ಪರಿವೀಕ್ಷಣೆಯಲ್ಲಿ ಇರಿಸಿದ್ದಾರೆ. ಇದೀಗ ಅಹುಜಾ ಅವರ ಮನವಿಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದು, ನಿಮ್ಮ ಪತಿಗೆ ಯಾವ ತೊಂದರೆಯು ಆಗುವುದಿಲ್ಲ. ಅವರು ಶೀಘ್ರದಲ್ಲಿ ಗುಣಮುಖರಾಗಿ ಬರುತ್ತಾರೆ. ನೀವು ನಿಶ್ಚಿಂತೆಯಿಂದ ಇರಿ. ಮಗುವಿನ ಬಗ್ಗೆ ಗಮನ ಕೊಡಿ ಎಂದು ಧೈರ್ಯ ತುಂಬಿದ್ದಾರೆ. (ಏಜೆನ್ಸೀಸ್​)

    View this post on Instagram

    A post shared by SHUBHHI (@shubhiahuja)

    ಸಂಶಯದಿಂದ ಆಪತ್ತು: ‘ಆ ಕ್ಷಣ..’ ಅಂಕಣ

    ಮುಂದುವರಿದಿದೆ ಅಣ್ಣಾತ್ತೆ; 20 ದಿನಗಳಿಂದ ಹೈದರಾಬಾದ್​ನಲ್ಲಿ ಸತತ ಚಿತ್ರೀಕರಣ

    ಬಾಲ್ಯ ವಿವಾಹ ತಡೆಯಲು ಹೊಸ ಪ್ಲಾನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts