More

    ಚಾಮರಾಜನಗರ ದುರಂತ ಬೆನ್ನಲ್ಲೇ ಮತ್ತೊಂದು ದುರ್ಘಟನೆ: ಆಕ್ಸಿಜನ್​ ಕೊರತೆಯಿಂದ 11 ರೋಗಿಗಳ ಸಾವು

    ವಿಜಯವಾಡ: ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ ಮಾಸುವ ಮುನ್ನವೇ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಅನಾಹುತ ಸಂಭವಿಸಿದ್ದು, ಆಕ್ಸಿಜನ್ ಪೂರೈಕೆಗೆ ಅಡ್ಡಿ ಉಂಟಾಗಿ​ 11 ರೋಗಿಗಳು ಮೃತಪಟ್ಟಿರುವ ಘಟನೆ ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.

    ತಿರುಪತಿಯ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ಆಕ್ಸಿಜನ್​ ಸಿಲಿಂಡರ್​ ಮರುಭರ್ತಿ ಮಾಡಲು ಕೇವಲ 5 ನಿಮಿಷ ತಡವಾಗಿದ್ದಕ್ಕೆ ಆಕ್ಸಿಜನ್​ ಒತ್ತಡ ಕಡಿಮೆಯಾಗಿ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ವೈದ್ಯರಾದ ಹರಿ ನಾರಾಯಣ್​ ತಿಳಿಸಿದ್ದಾರೆ.

    ಐದು ನಿಮಿಷಗಳಲ್ಲಿ ಆಮ್ಲಜನಕದ ಪೂರೈಕೆಯನ್ನು ಪುನಃಸ್ಥಾಪಿಸಲಾಯಿತು. ಇದೀಗ ಎಲ್ಲವೂ ಸಾಮಾನ್ಯವಾಗಿದೆ. ಈ ಕಾರಣದಿಂದಾಗಿ ಹೆಚ್ಚಿನ ಸಾವುನೋವುಗಳನ್ನು ತಡೆಯಬಹುದು ಎಂದು ವೈದ್ಯರು ಹೇಳಿದ್ದಾರೆ.

    ಆಕ್ಸಿಜನ್​ ಕೊರತೆಯಾದ ಬೆನ್ನಲ್ಲೇ ಸುಮಾರು 30 ವೈದ್ಯರು ಐಸಿಯು ಧಾವಿಸಿ ಬಂದು ಮುಂದಾಗುತ್ತಿದ್ದ ಬಹುದೊಡ್ಡ ಅನಾಹುತವನ್ನು ತಪ್ಪಿಸಿದರು. ಇಲ್ಲದಿದ್ದಲ್ಲಿ ಇನ್ನು ಹೆಚ್ಚಿನ ಸಾವಾಗುವ ಸಾಧ್ಯತೆ ಇತ್ತು.

    ಈ ಘಟನೆ ಬಗ್ಗೆ ತನಿಖೆ ನಡೆಸಿ, ಬಹು ಬೇಗ ವರದಿ ನೀಡುವಂತೆ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಆದೇಶ ನೀಡಿದ್ದಾರೆ. ಅಲ್ಲದೆ, ತಕ್ಷಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಕಳೆದ ವಾರವಷ್ಟೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದಾಗಿ 24 ಕರೊನಾ ರೋಗಿಗಳು ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಲಸಿಕೆಗೆ ಇನ್ನೂ 3 ತಿಂಗಳು ಕಾಯಬೇಕು! ಕೋವಿನ್ ಪೋರ್ಟಲ್​ನಲ್ಲಿ ಹೆಸರು ನೋಂದಾಯಿಸಿದವರ ಸಂಖ್ಯೆ 19 ಕೋಟಿಗೂ ಅಧಿಕ

    ಪಶ್ಚಿಮ ಬಂಗಾಳದ 63 ಬಿಜೆಪಿ ಶಾಸಕರಿಗೆ ‘X’ ಕೆಟಗರಿ ಭದ್ರತೆ; ದಿನದ 24 ಗಂಟೆ ಸಿಐಎಸ್ಎಫ್ ಯೋಧರಿಂದ ಕಾವಲು

    ಅಗತ್ಯ ವಸ್ತುಗಳನ್ನು ತರಲು ವಾಹನ ಬಳಸಬಹುದು, ಅನಗತ್ಯ ಓಡಾಟಕ್ಕೆ ಅವಕಾಶ ಇಲ್ಲ; ಡಿಜಿಪಿ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts