More

    ಬದಲಾವಣೆ ಆಗಲಿದೆ ಅಮ್ಮಾ ಕ್ಯಾಂಟೀನ್​ ಹೆಸರು: ನೂತನ ಹೆಸರು ಹೀಗಿದೆ ನೋಡಿ…

    ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರು ಸ್ಥಾಪಿಸಿರುವ “ಅಮ್ಮಾ ಕ್ಯಾಂಟೀನ್​” ಹೆಸರು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೆಳಲಾಗುತ್ತಿದೆ.

    ಮೇ 2ರಂದು ಹೊರಬಿದ್ದ ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಡಿಎಂಕೆ ಪಕ್ಷವು ಪ್ರಚಂಡ ಜಯಭೇರಿ ಬಾರಿಸಿದ್ದು, ರಾಜ್ಯದ ಅಧಿಕಾರದ ಗದ್ದುಗೆಯನ್ನು ಏರಿದೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್​ ನೇತೃತ್ವದ ಸರ್ಕಾರ ಅಮ್ಮಾ ಕ್ಯಾಂಟೀನ್​ ಹೆಸರನ್ನು ಅಣ್ಣಾ ಕ್ಯಾಂಟೀನ್​ ಎಂದು ಬದಲಾಯಿಸಲು ಮುಂದಾಗಿದೆ.

    2013ರಲ್ಲಿ ಜಯಲಲಿತಾ ಅವರ ಸಿಎಂ ಆಗಿದ್ದಾಗ ಅಮ್ಮಾ ಕ್ಯಾಂಟೀನ್​ ಸ್ಥಾಪಿಸಿದ್ದು, ಸದ್ಯ 407 ಕ್ಯಾಂಟೀನ್​ಗಳು ಕಾರ್ಯನಿರ್ವಹಿಸುತ್ತಿವೆ. ಕ್ಯಾಂಟೀನ್​ಗಳನ್ನು ಗ್ರೇಟರ್​ ಚೆನ್ನೈ ಕಾರ್ಪೊರೇಷನ್​ ನಿರ್ಮಾಣ ಮಾಡಿದೆ. ಈ ಕ್ಯಾಂಟೀನ್​ನಲ್ಲಿ ಒಂದು ಇಡ್ಲಿಗೆ ಕೇವಲ ಒಂದು ರೂಪಾಯಿ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ, ಕೇವಲ 3 ರೂಪಾಯಿಗೆ ಅನ್ನ ಮತ್ತು ದಾಲ್ ಅಥವಾ ಚಪಾತಿ ಮತ್ತು ದಾಲ್​ ದೊರೆಯುತ್ತದೆ.

    ಚುನಾವಣೆಯಲ್ಲಿ ಡಿಎಂಕೆ ಗೆದ್ದ ಖುಷಿಯಲ್ಲಿ ಮಂಗಳವಾರ ಡಿಎಂಕೆ ಕಾರ್ಯಕರ್ತರು ಅಮ್ಮಾ ಕ್ಯಾಂಟೀನ್​ ನಾಮಫಲಕ ಕಿತ್ತೆಸೆದು ದಾಂಧಲೆ ನಡೆಸಿದ್ದರು. ಈ ವೇಳೆ ಡಿಎಂಕೆ ಮತ್ತು ಎಐಎಡಿಎಂಕೆ ಕಾರ್ಯಕರ್ತರ ನಡುವೆ ಕಲಹ ಉಂಟಾಗುವ ಸಾಧ್ಯತೆಯು ಇತ್ತು. ಈ ಘಟನೆ ನಡೆದ ಬೆನ್ನಲ್ಲೇ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್​ ನಾಮಫಲಕ ಕಿತ್ತೆಸೆದ ತನ್ನ ಕಾರ್ಯಕರ್ತರಿಬ್ಬರನ್ನು ಪಕ್ಷದಿಂದ ವಜಾ ಮಾಡಿದರು. ಅವರ ವಿರುದ್ಧ ದೂರು ಸಹ ನೀಡಲಾಗಿದ್ದು, ಇಬ್ಬರು ಬಂಧನಕ್ಕೆ ಒಳಗಾಗಿದ್ದಾರೆ.

    ಇನ್ನು ಡಿಎಂಕೆ ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಸಿಎಂ ಸಿ.ಎನ್​. ಅಣ್ಣಾದೊರೈ ಹೆಸರನ್ನು ಕ್ಯಾಂಟೀನ್​ಗೆ ಇಡಲು ಡಿಎಂಕೆ ನಿರ್ಧರಿಸಿದೆ. ಅಮ್ಮಾ ಕ್ಯಾಂಟೀನ್​​ನಲ್ಲಿ ಕಳಪೆ ಆಹಾರ ನೀಡಲಾಗುತ್ತದೆ ಎಂದು ಡಿಎಂಕೆ ಆರೋಪ ಮಾಡಿ, ಅಧಿಕಾರಕ್ಕೆ ಬಂದರೆ ಕಲೈನಗರ ಹೆಸರಿನಲ್ಲಿ 500 ಕ್ಯಾಂಟೀನ್​ಗಳನ್ನು ತೆರೆದು ಗುಣಮಟ್ಟದ ಆಹಾರ ನೀಡುವುದಾಗಿ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

    ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಡಿಎಂಕೆ ನಾಯಕ ದುರೈಮುರುಗನ್, “ರಾಜ್ಯಾದ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರವನ್ನು ಒದಗಿಸಲು ಕ್ಯಾಂಟೀನ್‌ಗಳನ್ನು ತೆರೆಯುವುದಾಗಿ ಡಿಎಂಕೆ ಭರವಸೆ ನೀಡಿದೆ ಮತ್ತು ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ಅದನ್ನು ಮೊದಲ ಕ್ರಮವಾಗಿ ಜಾರಿಗೊಳಿಸುತ್ತೇವೆ” ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಚಾಮರಾಜನಗರ ಆಕ್ಸಿಜನ್​ ದುರಂತ ಬೆನ್ನಲ್ಲೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಾಸಕ ಪುಟ್ಟರಂಗಶೆಟ್ಟಿ!

    ಪ. ಬಂಗಾಳ ಚುನಾವಣಾ ಬೆನ್ನಲ್ಲೇ ಯುವತಿಯ ಅತ್ಯಾಚಾರ, ಕೊಲೆ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!

    ಐದು ತಿಂಗಳ ಮಗು ಉಳಿಸಲು 16 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts