More

    ಐದು ತಿಂಗಳ ಮಗು ಉಳಿಸಲು 16 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ದಂಪತಿ!

    ಲುನಾವಾಡಾ: ಗುಜರಾತಿನ ಲುನಾವಾಡಾದ ದಂಪತಿ ತಮ್ಮ ಐದು ತಿಂಗಳ ಮಗನ ಜೀವ ಉಳಿಸುವುದಕ್ಕೆ ಬೇಕಾದ ಒಂದು ಇಂಜೆಕ್ಷನ್ ತರಿಸಲು ಕ್ರೌಡ್ ಫಂಡಿಂಗ್ ಮೂಲಕ 16 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.

    ಮಗುವಿಗೆ ವಿರಳ ಜೆನೆಟಿಕ್ ಡಿಸಾರ್ಡರ್ ಆಗಿರುವ ಸ್ಪೈನಲ್ ಮಸ್ಕುಲರ್ ಅಟ್ರೋಫಿ ಕಾಯಿಲೆ ಇದ್ದು, ಮುಂಬೈನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಂದೆ ರಾಜ್​ದೀಪ್​ಸಿನ್ಹ ರಾಥೋಡ್ ಮತ್ತು ತಾಯಿ ಜಿನಾಲ್​ಬಾ ತಿಳಿಸಿದ್ದಾರೆ.

    ಸ್ಪೈನಲ್ ಮಸ್ಕುಲರ್ ಅಟ್ರೋಫಿ ಕಾಯಿಲೆ ಇರುವವರಿಗೆ ಮಾಂಸಖಂಡಗಳ ಚಲನೆಯ ಮೇಲೆ ಹಿಡಿತ ಇರುವುದಿಲ್ಲ. ಬೆನ್ನುಹುರಿ ಮತ್ತು ಬ್ರೇನ್ ಸ್ಟೆಮ್ಳ ನರಕೋಶಗಳ ನಷ್ಟದಿಂದಾಗಿ ಈ ಕಾಯಿಲೆ ಉಂಟಾಗುತ್ತದೆ. ಇದು ಮಾಂಸಖಂಡಗಳ ದುರ್ಬಲತೆ ಮತ್ತು ಅಂಗಾಂಗಳ ಚಲನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉಸಿರಾಟಕ್ಕೂ ಅಡ್ಡಿ ಉಂಟುಮಾಡುತ್ತದೆ.

    ಈ ರೋಗಕ್ಕೆ ತುತ್ತಾಗಿರುವ ಮಗುವಿನ ಹೆಸರು ಧೈರ್ಯರಾಜ್. ಸ್ವಿಸ್ ಫಾರ್ವ ಕಂಪನಿ ನೊವಾರ್ಟಿಸ್ ಉತ್ಪಾದಿಸುವ ಒಂದು ಜೀನ್ ಥೆರಪಿ ಇಂಜೆಕ್ಷನ್ ಇದಕ್ಕೆ ಅಗತ್ಯವಿದ್ದು, ಅದನ್ನು ಭಾರತಕ್ಕೆ ತರಿಸಲು 16 ಕೋಟಿ ರೂಪಾಯಿ ಬೇಕಾಗಿತ್ತು. ಇದರಲ್ಲಿ ಇಂಜೆಕ್ಷನ್​ನ ಕಸ್ಟಮ್್ಸ ಸುಂಕವೇ 6.5 ಕೋಟಿ ರೂಪಾಯಿ. ಮಾನವೀಯ ನೆಲೆಯಲ್ಲಿ ಕೇಂದ್ರ ಸರ್ಕಾರ ಇದನ್ನು ಮಾಫಿ ಮಾಡಿತ್ತು. ಮಾರ್ಚ್ ತಿಂಗಳಲ್ಲಿ ಕ್ರೌಡ್ ಫಂಡಿಂಗ್ ಮೊರೆ ಹೋದ ರಾಥೋಡ್ ದಂಪತಿ 42 ದಿನಗಳ ಅವಧಿಯಲ್ಲಿ 16 ಕೋಟಿ ರೂಪಾಯಿ ಸಂಗ್ರಹಿಸುವಲ್ಲಿ ಯಶಕಂಡಿದ್ದಾರೆ. ಚಿಕಿತ್ಸೆ ಬಳಿಕ ಮಗನ ಆರೋಗ್ಯದಲ್ಲಿ ಸುಧಾರಣೆ ಕಾಣುವ ವಿಶ್ವಾಸದಲ್ಲಿದ್ದಾರೆ ರಾಥೋಡ್ ದಂಪತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts