More

    ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ ಹಿನ್ನಲೆ ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ‌ಬಿಗಿ ಪೊಲೀಸ್ ಭದ್ರತೆ

    ಬೆಂಗಳೂರು: ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ‌ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

    ಷಾ‌ ವಾಸ್ತವ್ಯ ಹೂಡಿರುವ ತಾಜ್ ವೆಸ್ಟೆಂಡ್ ಹೋಟೆಲ್ ಸಭಾಂಗಣದಲ್ಲಿ ಬೆಳಗ್ಗೆ 11 ರಿಂದ 12.30 ರವರೆಗೆ ಕಾರ್ಯಕ್ರಮ, ಮಧ್ಯಾಹ್ನದ ಭೋಜನಕ್ಕೂ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಹಿನ್ನಲೆ ಎಚ್ಚೆತ್ತಿರುವ ಬೆಂಗಳೂರು ‌ಪೊಲೀಸ್ ಅಧಿಕಾರಿಗಳು ಭಾರಿ ಭದ್ರತೆ ನಿಯೋಜನೆ ಮಾಡಿದ್ದಾರೆ.

    ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಅಮಿತ್ ಷಾ ಅವರಿಗೆ ಝಡ್ ಫ್ಲಸ್ ಭದ್ರತೆ ಇದ್ದರೂ ಕೂಡ ಬೆಂಗಳೂರು ಪೊಲೀಸರಿಂದ ತಾಜ್ ವೆಸ್ಟೆಂಡ್ ಸುತ್ತಾಮುತ್ತಾ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

    ಹೋಟೆಲ್​ ಸುತ್ತಮುತ್ತ 2500 ಪೊಲೀಸರ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲಿನಲ್ಲಿದೆ. 7 ಮಂದಿ ಡಿಸಿಪಿ ನೇತೃತ್ವದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 18 ಎಸಿಪಿ, 53 ಇನ್ಸ್​ಪೆಕ್ಟರ್, 147 ಸಬ್ ಇನ್ಸ್​ಪೆಕ್ಟರ್, 180 ಎಎಸ್​ಐ, 1162 ಹೆಡ್ ಕಾನ್ಸ್​ಟೇಬಲ್, 15 ಕೆಎಸ್​ಆರ್​ಪಿ ಬೆಟಾಲಿಯನ್ ನಿಯೋಜಿಸಲಾಗಿದೆ.

    ಸಿಎಂ ಬೊಮ್ಮಾಯಿ‌ ಭೇಟಿ
    ಆರ್​ಟಿ ನಗರದ ತಮ್ಮ ನಿವಾಸದಿಂದ ಹೊರಟು ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಖಾಸಗಿ ಹೋಟೆಲ್​​ನಲ್ಲಿ ಷಾ ಅವರನ್ನು ಭೇಟಿ ಮಾಡಿ ಅನೌಪಚಾರಿಕ ಮಾತುಕತೆ ನಡೆಸಿದರು.

    ರಷ್ಯಾ-ಯೂಕ್ರೇನ್​ ಬೆನ್ನಲ್ಲೇ ಚೀನಾ-ತೈವಾನ್​ ಯುದ್ಧ ಭೀತಿ: ತೈವಾನ್​ ಸುತ್ತ ಸೇನಾ ಚಟುವಟಿಕೆ ಆರಂಭಿಸಿದ ಚೀನಾ

    ಸ್ವಾತಂತ್ರ್ಯ ಸಂಭ್ರಮಕ್ಕೆ ಉಗ್ರರ ಕರಿನೆರಳು: ಇಂಟೆಲಿಜೆನ್ಸ್​ ಬ್ಯೂರೋದಿಂದ ದೆಹಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ

    ಜಾಲತಾಣದಲ್ಲಿ ವಿದ್ಯಾರ್ಥಿ ಹಾಕಿದ್ದ ಪೋಸ್ಟ್​ ಓದುತ್ತಾ ಕಾಲೇಜು ವೇದಿಕೆಯಲ್ಲೇ ಕಣ್ಣೀರಾಕಿದ ಶಾಸಕ ಸಾರಾ ಮಹೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts