More

    ಮಾರ್ಗ ಮಧ್ಯೆ ಲೈಂಗಿಕ ಬಯಕೆ ಈಡೇರಿಸಿ! ಅಮಲಾ​ರನ್ನು ಮಂಚಕ್ಕೆ ಕರೆದವರಿಗೆ ಬಿಗ್​ ಶಾಕ್​

    ಚೆನ್ನೈ: ಸ್ಟಾರ್​ ನಟಿಯರಲ್ಲಿ ಒಬ್ಬರಾದ ಅಮಲಾ ಪೌಲ್​ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಿತ್ರಗಳಲ್ಲೂ ನಟಿಸಿದ್ದಾರೆ. ಸ್ಟಾರ್​ ನಟರಿಂದಿಡಿದು ಮಹಿಳಾ ಪ್ರಧಾನ ಸಿನಿಮಾದಲ್ಲೂ ಅಮಲಾ ಪೌಲ್​ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಸಿನಿಮಾ ‘ಹೆಬ್ಬುಲಿ’ ಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

    ಆದೈ ಸಿನಿಮಾದಲ್ಲಿ ಬೆತ್ತಲಾಗಿ ನಟಿಸುವ ಮೂಲಕ ಅಮಲಾ ಪೌಲ್​ ಭಾರೀ ಸುದ್ದಿಯಾಗಿದ್ದರು. ಅಲ್ಲದೆ, ಪಿಟ್ಟ ಕಥಾಲು ಸಿನಿಮಾದಲ್ಲಿ ವಿಲನ್​ ಪಾತ್ರವನ್ನು ಮಾಡುವ ಮೂಲಕ ಎಲ್ಲ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ. ಎಲ್ಲ ಓಕೆ, ಹೀಗ್ಯಾಕೆ ಅಮಲಾ ಪೌಲ್​ ವಿಚಾರ ನಮಗೆ ಹೇಳುತ್ತೀದ್ದೀರಾ ಅಂತಾ ನೀವು ಅಂದುಕೊಂಡರೆ ಅದಕ್ಕೆ ಉತ್ತರ ಮುಂದಿದೆ.

    ಮೊದಲು ಒಂದು ಫ್ಲ್ಯಾಶ್​ಬ್ಯಾಕ್ ಸ್ಟೋರಿ ಹೇಳಿಬಿಡುತ್ತೇನೆ. 2018ರಲ್ಲಿ ಅಮಲಾ ಪೌಲ್​ ಮಲೇಶಿಯಾದಲ್ಲಿ ಒಂದು ಡಾನ್ಸ್​ ಶೋ ನಡೆಸಿಕೊಡಲು ಒಪ್ಪಿಕೊಂಡಿದ್ದರು. ಹೀಗಾಗಿ ಚೆನ್ನೈನ ಟಿ.ನಗರದಲ್ಲಿರುವ ಶ್ರೀಧರ್​ ಮಾಲೀಕತ್ವದ ಸ್ಟುಡಿಯೋದಲ್ಲಿ ಡಾನ್ಸ್​ ರಿಹರ್ಸಲ್​ ಮಾಡುತ್ತಿದ್ದರು. ಈ ವೇಳೆ ಶ್ರೀಧರ್​ ಪರಿಚಿತರಾದ ಅಳಗೇಶನ್​ ಎಂಬಾತ ಅಮಲಾ ಅವರನ್ನು ಭೇಟಿ ಮಾಡಿ ಮಲೇಶಿಯಾ ಹೋಗುವ ಮಾರ್ಗ ಮಧ್ಯೆ ಮಲೇಶಿಯಾ ಮೂಲದ ಉದ್ಯಮಿ ಇಬ್ರಾಹಿಂ ಜತೆ ಡಿನ್ನರ್​ ಪಾರ್ಟಿ ಮಾಡುತ್ತೀರಾ ಮತ್ತು ಅವರ ಲೈಂಗಿಕ ಆಸೆ ತೀರಿಸುತ್ತೀರಾ ಎಂದು ಕೇಳಿದ್ದರು.

    ಮಂಚಕ್ಕೆ ಕರೆಯುತ್ತಿದ್ದಾರೆ ಮತ್ತು ಶ್ರೀಧರ್​, ಅಳಗೇಶ್​ ಅವರದ್ದು ಸೆಕ್ಸ್​ ರಾಕೆಟ್​ ತಂಡ ಎಂಬುದು ಗೊತ್ತಾಗುತ್ತಿದ್ದಂತೆ ಅಮಲಾ ಪೌಲ್​, ಶ್ರೀಧರ್​, ಅಳಗೇಶ್​, ಭಾಸ್ಕರನ್​ ಮತ್ತು ಉದ್ಯಮಿ ಇಬ್ರಾಹಿಂ ವಿರುದ್ಧ 2018ರ ಜನವರಿಯಲ್ಲಿ ಟಿ.ನಗರದ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಈ ಪ್ರಕರಣದಲ್ಲಿ ಶ್ರೀಧರ್​ ಮತ್ತು ಭಾಸ್ಕರ್​ ಎಂಬುವರನ್ನು ಬಂಧಿಸಲಾಗಿತ್ತು.

    ಈ ಪ್ರಕರಣ ತಾಜಾ ಬೆಳವಣಿಗೆ ಏನೆಂದರೆ, ಅಮಲಾ ಪೌಲ್ ಅವರ ದೂರಿನಲ್ಲಿ ಹೆಸರಿಸಲಾದ ಇಬ್ಬರು ಉದ್ಯಮಿಗಳಾದ ಭಾಸ್ಕರನ್ ಮತ್ತು ಶ್ರೀಧರ್ ಅವರು ಬಾಕಿ ಉಳಿದಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ತಡೆಯಾಜ್ಞೆ ಕೋರಿ ಚೆನ್ನೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವಾದ್ದರಿಂದ ಪ್ರಕರಣವನ್ನು ವಜಾಗೊಳಿಸಬೇಕು ಮತ್ತು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣವನ್ನು ವಜಾಗೊಳಿಸುವುದಿಲ್ಲ ಎಂದು ಹೇಳಿ ಇಬ್ಬರು ಉದ್ಯಮಿಗಳ ಅರ್ಜಿಯನ್ನು ವಜಾಗೊಳಿಸಿದರು. (ಏಜೆನ್ಸೀಸ್​)

    ಬಿಕಿನಿ ಫೋಟೋ-ವಿಡಿಯೋ ಹರಿಬಿಟ್ಟ ನಟಿ ಶ್ವೇತಾ ಪ್ರಸಾದ್​! ನೆಟ್ಟಿಗರ ಕಾಮೆಂಟ್ ಹೀಗಿದೆ ನೋಡಿ

    ಟಾಯ್ಲೆಟ್​ ತೊಳೆಯುವುದಕ್ಕೂ ನಾನು ರೆಡಿ! ಬೀದಿಯಲ್ಲಿ ಸಾಬೂನು ಮಾರುವ ಸ್ಟಾರ್​ ನಟಿಯ ಕಣ್ಣೀರ ಕತೆಯಿದು

    ದಂತ ಚಿಕಿತ್ಸೆಗೆ ಹೋದ ಸ್ಯಾಂಡಲ್​ವುಡ್​ ನಟಿಯ ಮುಖವೇ ವಿರೂಪ! ವೈದ್ಯೆ ಎಡವಟ್ಟಿಗೆ ನಲುಗಿದ ನಟಿಯ ಕಷ್ಟ ಹೇಳತೀರದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts