More

    ಹೊಳೆಯುವುದೆಲ್ಲ ಚಿನ್ನವಲ್ಲ! Instagram ರೀಲ್ಸ್ ಸ್ಟಾರ್​ ಬಂಧನದ ಬೆನ್ನಲ್ಲೇ ಪೊಲೀಸರ ಸಂದೇಶ ವೈರಲ್​​

    ತಿರುವನಂತಪುರ: ಇತ್ತೀಚೆಗೆ ಕೇರಳ ಪೊಲೀಸರು ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬನನ್ನು ಬಂಧಿಸಿದ ಬೆನ್ನಲ್ಲೇ ಎಚ್ಚರಿಕೆ ಸಂದೇಶ ಒಂದನ್ನು ರವಾನಿಸಿದೆ. ಜಾಲತಾಣದಲ್ಲಿ ಹೊಳೆಯುವುದೆಲ್ಲ ಚಿನ್ನವಲ್ಲ. ವೇಷ ಮತ್ತು ವ್ಯಕ್ತಿತ್ವದ ಮರೆಮಾಚಿದ ವಂಚಕರಿದ್ದಾರೆ, ಗಮನಹರಿಸಿ ಎಂದು ಸಲಹೆ ನೀಡಿದೆ.

    ಕೇರಳ ಪೊಲೀಸರು ಹೀಗೊಂದು ಸಲಹೆ ನೀಡಲು ಒಂದು ಕಾರಣವಿದೆ. ಇತ್ತೀಚೆಗೆ ವಿನೀತ್​ ಎಂಬಾತನನ್ನು ಬಂಧಿಸಿದ್ದಾರೆ. ಈತ ಇನ್​ಸ್ಟಾಗ್ರಾಂ ರೀಲ್ಸ್​ ಮೂಲಕವೇ ಕೊಂಚ ಖ್ಯಾತಿ ಪಡೆದುಕೊಂಡಿದ್ದ. ಹುಡುಗಿಯರನ್ನು ಮರಳು ಮಾಡುವುದೇ ಈತನ ಕೆಲಸ. ಈತ ಖ್ಯಾತ ಕೀಝಪೆರೂರ್​ ಕೃಷ್ಣ ದೇವಸ್ಥಾನದ ಸಮೀಪದ ಚಿರಾಯಿಂಕೀಜುವಿನ ನಿವಾಸಿ. ಕೇರಳದ ಥಂಪನೂರ್​ ಪೊಲೀಸರು ಈತನನ್ನು ಬಂಧಿಸಿದ್ದಾರೆ.

    ನಾನು ಪೊಲೀಸ್​ ಕೆಲಸಕ್ಕೆ ರಾಜೀನಾಮೆ ನೀಡಿ, ಚಾನೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದ. ಆದರೆ, ಆತ ಓದಿರುವುದು ದ್ವಿತೀಯ ಪಿಯುಸಿ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಯಿತು. ರೀಲ್ಸ್​ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿರುತ್ತಿದ್ದ ವಿನೀತ್​, ಜಾಲತಾಣ ಮೂಲಕ ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಪರಿಚಯ ಪ್ರೇಮಕ್ಕೆ ತಿರುಗಿದಾಗ ಹುಡಗಿಯರ ಮೇಲೆ ಅನುಮಾನ ಪಡುತ್ತಿದ್ದ. ಬೇರೊಬ್ಬರ ಜೊತೆ ನಿನಗೆ ಸಂಬಂಧ ಇದೆ ಎಂದು ಕತೆ ಕಟ್ಟುತ್ತಿದ್ದ. ಆತನನ್ನು ನಂಬಿಸಲು ಆತನ ಬಲೆಗೆ ಬಿದ್ದ ಹುಡುಗಿಯರು ತಮ್ಮ ಈಮೇಲ್​ ಮತ್ತು ಇನ್​ಸ್ಟಾಗ್ರಾಂ ಐಡಿ ಹಾಗೂ ಪಾಸ್​ವರ್ಡ್​ ನೀಡುತ್ತಿದ್ದರು. ನಂತರ ಹುಡುಗಿಯರು ಇನ್​ಸ್ಟಾಗ್ರಾಂ ಖಾತೆಗಳನ್ನು ವಿನೀತ್ ನಿರ್ವಹಿಸುತ್ತಿದ್ದ. ತನ್ನ ಸೂಚನೆಗಳನ್ನು ಅನುಸರಿಸಲು ಹುಡುಗಿಯರನ್ನು ಒತ್ತಾಯಿಸುತ್ತಿದ್ದ.

    ಹೊಸ ಕಾರು ಖರೀದಿ ಮಾಡಿದ್ದೇನೆ. ಒಂದು ಡ್ರೈವ್​ ಹೋಗೋಣ ನನಗೆ ಕಂಪನಿ ಕೊಡಿ ಎಂದು ಆಹ್ವಾನಿಸುತ್ತಿದ್ದ. ಆತನ ಆಹ್ವಾನವನ್ನು ನಂಬಿ ಆತನೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತಿರುವನಂತಪುರದಲ್ಲಿರುವ ಲಾಡ್ಜ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸುಗುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ತನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ ಬಳಿಕ ಆಕೆ ದೂರು ದಾಖಲಿಸಿದಳು. ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ವಿನೀತ್​ನನ್ನು ಬಂಧಿಸಿ, ಆತನ ಮೊಬೈಲ್​ ವಶಕ್ಕೆ ಪಡೆದಿದ್ದಾರೆ.

    ಇದೀಗ ಆತನ ಮುಖವಾಡ ಬಯಲಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕೇರಳ ಪೊಲೀಸರು ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಹೊಳೆಯುವುದೆಲ್ಲ ಚಿನ್ನವಲ್ಲ ಎಂಬ ಗಾದೆ ಮಾತಿನ ಮೂಲಕ ಜಾಲತಾಣದಲ್ಲಿ ಇರುವವರೆಲ್ಲ ಸಾಚರಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ವಂಚಕರಿರುತ್ತಾರೆ ಎಚ್ಚರಿಕೆ ವಹಿಸಿ, ಇಲ್ಲವಾದಲ್ಲಿ ನಿಮ್ಮ ಮಾನ ಮರ್ಯಾದೆ ಬೀದಿಗೆ ಬೀಳಬಹುದು. ಬಣ್ಣದ ವೇಷ ಹಾಕಿಕೊಂಡು, ವ್ಯಕ್ತಿತ್ವವನ್ನು ಕೊಂದು ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಕೆಲ ನಯವಂಚಕರು ಕಾದು ಕುಳಿತಿರುತ್ತಾರೆ. ಹೀಗಾಗಿ ಗೊತ್ತಿಲ್ಲದವರ ಫ್ರೆಂಡ್ ರಿಕ್ವೆಸ್ಟ್​ಗೆ ಓಕೆ ಅನ್ನಬೇಡ ಅಥವಾ ನಕಲಿ ಪ್ರೊಫೈಲ್​ಗನ್ನು ಅನುಸರಿಸಬೇಡಿ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ರವಿ ಬೋಪಣ್ಣ ಟ್ರೇಲರ್ ಬಿಡುಗಡೆ; ಹೊಸ ದಾಖಲೆ ಬರೆದ 7 ನಿಮಿಷದ ಟ್ರೇಲರ್..

    ವಿಶ್ವರೂಪಿಣಿ ಹುಲಿಗೆಮ್ಮನಾದ ಪ್ರಿಯಾಂಕಾ; ದೇವಿ ಮಹಾತ್ಮೆ ಸಾರುವ ಚಿತ್ರಕ್ಕೆ ಸಾಯಿಪ್ರಕಾಶ್ ನಿರ್ದೇಶನ

    ವೇತನ ಪರಿಷ್ಕರಣೆ ಆಯೋಗ ರಚನೆಗೆ ನೌಕರರ ಆಗ್ರಹ: ಸರ್ಕಾರದ ಮೇಲೆ ಹೆಚ್ಚಿದ ಒತ್ತಡ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts