More

    ಪುರುಷರ ಲೈಂಗಿಕ ಸಾಮರ್ಥ್ಯವನ್ನು ಅಣಕಿಸಿದ ನಟಿ ರೆಜಿನಾಗೆ ನಟ ಅಡವಿ ಶೇಷ್​ ಕೊಟ್ಟ ತಿರುಗೇಟು ಹೀಗಿತ್ತು…

    ಹೈದರಾಬಾದ್​: ಕೆಲವು ದಿನಗಳ ಹಿಂದೆ ನಟಿ ರೆಜಿನಾ ಕ್ಯಾಸ್ಸಂದ್ರ ಅವರು ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಾ, ಮ್ಯಾಗಿ ಮತ್ತು ಪುರುಷರು ಎರಡು ಒಂದೇ, ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಭಾರಿ ಚರ್ಚೆ ನಡೆದಿತ್ತು.

    ಈ ವಿಚಾರವಾಗಿ ಕಾಲಿವುಡ್​ ನಟ ಅಡವಿ ಶೇಷ್ ತುಂಬಾ ಆಸಕ್ತಿಕರ ಕಾಮೆಂಟ್​ ಮಾಡಿದ್ದಾರೆ. ಶಾಕಿನಿ ಡಾಕಿನಿ ಚಿತ್ರದ ಪ್ರಚಾರದ ಭಾಗವಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರೆಜಿನಾ ಮತ್ತು ನಿವೇತಾ ಥಾಮಸ್ ಜೊತೆ ಅಡವಿ ಶೇಷ್​ ವೇದಿಕೆ ಹಂಚಿಕೊಂಡರು. ಈ ವೇಳೆ ರೆಜಿನಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

    ರೆಜಿನಾ ಅವರೇ ಇತ್ತೀಚೆಗೆ ನೀವು ಮ್ಯಾಗಿ ಮತ್ತು ಪುರುಷರ ಬಗ್ಗೆ ಒಂದು ಕಾಮೆಂಟ್​ ಮಾಡಿದಿರಿ. ಅದು ನನ್ನ ಗಮನಕ್ಕೂ ಬಂದಿದೆ. ಕತೆ ಏನೆಂದರೆ, ನಾನು ದೀರ್ಘಾವಧಿಯವರೆಗೆ ಚಲನಚಿತ್ರಗಳನ್ನು ಮಾಡುತ್ತೇನೆ ಮತ್ತು ನನಗೆ ಹೆಚ್ಚು ತಾಕತ್ತು ಇದೆ ಎಂದು ನಾನು ಕೇಳಿದ್ದೇನೆ. ನನಗೆ ಸ್ವಲ್ಪ ತಾಕತ್ತು ಜಾಸ್ತಿಯೇ ಇದೆ. ಮ್ಯಾಗಿ ಕಾಮೆಂಟ್‌ ಹಿಂದಿನ ನಿಮ್ಮ ಉದ್ದೇಶ ಏನಿದೆ ಎಂದು ರೆಜಿನಾ ಅವರನ್ನು ಶೇಷ್​ ಪ್ರಶ್ನೆ ಮಾಡಿದರು.

    ಶೇಷ್ ಅವರು ಹಾಸ್ಯ ಚಟಾಕಿ ಹಾರಿಸುವ ಸಲುವಾಗಿ ಈ ಕಾಮೆಂಟ್ ಮಾಡಿದರು. ಅವರು ಮಾಡಿದ ಕಾಮೆಂಟ್​ನಲ್ಲಿ ಗಂಭೀರವಾದದ್ದೇನೂ ಇಲ್ಲ. ಆದರೆ, ರೆಜಿನಾ ಅವರ 2 ನಿಮಿಷಗಳ ಕಾಮೆಂಟ್‌ಗೆ ಅವರು ಹೆಚ್ಚು ತಾಕತ್ತು ಹೊಂದಿದ್ದೇನೆ ಎಂದು ಹೇಳಿದ್ದು, ಇದೀಗ ನೆಟ್ಟಿಗರ ಗಮನ ಸೆಳೆದಿದಿದೆ.

    ಘಟನೆ ಹಿನ್ನೆಲೆ ಏನು?
    ಇತ್ತೀಚೆಗೆ ಬಿಡಗಡೆಯಾದ ಶಾಕಿನಿ ಡಾಕಿನಿ ಸಿನಿಮಾದಲ್ಲಿ ರೆಜಿನಾ ಕ್ಯಾಸ್ಸಂದ್ರ ಮತ್ತು ನಿವೇತಾ ಥಾಮಸ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ನಟಿಯರಿಬ್ಬರು ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವೇಳೆ ರಜಿನಾ ಅವರು ವಯಸ್ಕರ ಜೋಕ್ಸ್​ ಮಾಡಿದ್ದರು. ನನ್ನ ಬಳಿ ಹೇಳಲು ಒಂದು ಜೋಕ್ಸ್​ ಇದೆ. ಅದನ್ನು ನೀವು ಅರ್ಥ ಮಾಡಿಕೊಳ್ತೀರೋ? ಇಲ್ಲವೋ? ನನಗೆ ಗೊತ್ತಿಲ್ಲ, ಅದೇನೇ ಇರಲಿ, ಪುರುಷರು ಮತ್ತು ಮ್ಯಾಗಿ ಎರಡು ಕೂಡ ಒಂದೆ. ಏಕೆಂದರೆ, ಎರಡು ಕೂಡ ಎರಡೇ ನಿಮಿಷದಲ್ಲಿ ಮುಗಿಯುತ್ತದೆ ಎಂದಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿ, ಭಾರೀ ಚರ್ಚೆಯಾಗಿತ್ತು. ಈ ವಿಚಾರವಾಗಿ ಅಡವಿ ಶೇಷ್​ ಹಾಸ್ಯಮಯವಾಗಿಯೇ ತಿರುಗೇಟು ನೀಡಿದ್ದಾರೆ.

    ಅಂದಹಾಗೆ ರೆಜಿನಾ ಅವರು ಕನ್ನಡಿಗರಿಗೂ ಪರಿಚಿತರು. ಏಕೆಂದರೆ, ನಟ ಚೇತನ್​ ಅಭಿನಯದ ಸೂರ್ಯಕಾಂತಿ ಸಿನಿಮಾದಲ್ಲಿರ ರೆಜಿನಾ ನಾಯಕಿಯಾಗಿ ನಟಿಸಿದ್ದಾರೆ. (ಏಜೆನ್ಸೀಸ್​)

    ಎರಡೇ ನಿಮಿಷದಲ್ಲಿ ಮುಗಿಯುತ್ತದೆ! ನಟಿ ರೆಜಿನಾ ಹೇಳಿದ ಅಶ್ಲೀಲ ಜೋಕ್ಸ್​ ಕೇಳಿ ಆ್ಯಂಕರ್​ ಶಾಕ್​, ವಿಡಿಯೋ ವೈರಲ್​

    ಸಹ ಶಿಕ್ಷಕರ ನೇಮಕಾತಿ ಅಕ್ರಮ ಬಗೆದಷ್ಟೂ ಆಳ… ಬೇನಾಮಿಗಳಿಗೆ ಟೀಚರ್ ಭಾಗ್ಯ!

    ಗೋಡೆ ಜತೆಗೆ ಮಾತಾಡೋ ಅಜ್ಜಿ… ‘ಮರೆತು ಹೋದವರು’ದಲ್ಲೊಂದು ನೆನಪಿನಲ್ಲಿ ಉಳಿಯುವ ಟ್ರಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts