More

    ಗಂಡನ ಜತೆ ಮೌಖಿಕ ಸಂಭೋಗ ನಡೆಸಲು ಬಾಲಕಿಯ ದುರ್ಬಳಕೆ: ಖ್ಯಾತ ನಟಿಗೆ ಶಾಕ್​ ಕೊಟ್ಟ ಕೋರ್ಟ್​!

    ಲಂಡನ್​: ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಹಾಲಿವುಡ್​ನ ಪ್ರಖ್ಯಾತ ನಟಿ ಮತ್ತು ಆಕೆಯ ಪತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ತಪ್ಪಿತಸ್ಥರೆಂದು ತಿಳಿದುಬಂದಿದೆ.

    2016ರಲ್ಲಿ ಜಾಗತಿಕವಾಗಿ ತೆರೆಕಂಡು ಅತ್ಯದ್ಭುತ ಯಶಸ್ಸು ಗಳಿಸಿದ ನಟ ಬೆನೆಡಿಕ್ಟ್ ಕಂಬರ್ಬ್ಯಾಚ್ ಅಭಿನಯದ ಡಾಕ್ಟರ್​ ಸ್ಟ್ರೇಂಜ್​ ಚಿತ್ರದಲ್ಲಿ ನಟಿಸಿರುವ ಝರಾ ಪೈಥಿಯನ್​ ಮತ್ತು ಆಕೆಯ ಗಂಡ ವಿಕ್ಟರ್​ ಮಾರ್ಕ್​ (59) ವಿರುದ್ಧ ಆರೋಪ ಕೇಳಿಬಂದಿದೆ.

    ಗಂಡನ ಜತೆ ಮೌಖಿಕ ಸಂಭೋಗ ನಡೆಸಲು ಬಾಲಕಿಯ ದುರ್ಬಳಕೆ: ಖ್ಯಾತ ನಟಿಗೆ ಶಾಕ್​ ಕೊಟ್ಟ ಕೋರ್ಟ್​!

    ಝರಾ ಪೈಥಿಯನ್ ಓರ್ವ ಮಾರ್ಷಲ್​ ಆರ್ಟಿಸ್ಟ್​. ಡಾಕ್ಟರ್​ ಸ್ಟ್ರೇಂಜ್​ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದಾರೆ. 2002 ಮತ್ತು 2003ರಲ್ಲಿ ನಾನು 13ನೇ ವಯಸ್ಸಿನವಳಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ಟಾರ್​ ನಟಿ ಹಾಗೂ ಆಕೆಯ ಗಂಡನ ವಿರುದ್ಧ ಹುಡುಗಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ.

    ಗಂಡನ ಜತೆ ಮೌಖಿಕ ಸಂಭೋಗ ನಡೆಸಲು ಬಾಲಕಿಯ ದುರ್ಬಳಕೆ: ಖ್ಯಾತ ನಟಿಗೆ ಶಾಕ್​ ಕೊಟ್ಟ ಕೋರ್ಟ್​!

    ನ್ಯಾಯಾಲಯದ ಮುಂದೆ ಹಾಜರಾಗಿ ಸಂತ್ರಸ್ತೆ ಕ್ಯಾಮೆರಾ ಮುಂದೆಯೇ ಹೇಳಿಕೆ ನೀಡಿದ್ದಾಳೆ. ನಾನು ಮಾಡುತ್ತಿರುವುದು ತಪ್ಪು ಎಂದು ನನಗೆ ಅನಿಸಿತು. ಆದರೆ, ಆ ಪರಿಸ್ಥಿತಿಯಿಂದ ಹೊರಬರಲು ಹಾಗೂ ಏನಾದರೂ ಹೇಳಲು ನನಗೆ ಗೊತ್ತಾಗಲಿಲ್ಲ. ನಟಿ ಐರಾ ತನ್ನ ಗಂಡನ ಜತೆ ಓರಲ್​ ಸೆಕ್ಸ್​ ನಡೆಸುವಂತೆ ಒತ್ತಾಯಿಸಿದಳು ಮತ್ತು ತದನಂತರ ಇಬ್ಬರೊಂದಿಗೂ ಝರಾ ಪತಿ ದೈಹಿಕ ಸಂಭೋಗವನ್ನು ನಡೆಸಿದರು ಎಂದು ಹುಡುಗಿ ಹೇಳಿದ್ದಾಳೆ.

    ಗಂಡನ ಜತೆ ಮೌಖಿಕ ಸಂಭೋಗ ನಡೆಸಲು ಬಾಲಕಿಯ ದುರ್ಬಳಕೆ: ಖ್ಯಾತ ನಟಿಗೆ ಶಾಕ್​ ಕೊಟ್ಟ ಕೋರ್ಟ್​!

    ಬಾಲಕಿಯ ಮೇಲಿನ 14 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನಟಿ ಮತ್ತು ಆಕೆಯ ಪತಿ ತಪ್ಪಿತಸ್ಥರೆಂದು ನ್ಯಾಯಾಲಯ ಇದೀಗ ತೀರ್ಪು ನೀಡಿದೆ. ಇದಿಷ್ಟೇ ಅಲ್ಲದೆ, 2005 ಮತ್ತು 2008ರ ನಡುವೆ ಮತ್ತೊಂದು ಹುಡುಗಿಯ ಮೇಲೆಯೂ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

    ಇನ್ನೇನು ಟೇಕಾಫ್​ ಆಗಬೇಕೆನ್ನುವಷ್ಟರಲ್ಲಿ ಹೊತ್ತಿ ಉರಿದ ವಿಮಾನ: ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ!

    ಆಟೋಗೆ ಬೈಕ್​ ಟಚ್​ ಆಗಿದ್ದಕ್ಕೆ ಕೊಲೆ: ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದು ಪೊಲೀಸರಿಗೆ ಶರಣು!

    ಬೋಗಿಯಿಂದ ಬೇರ್ಪಟ್ಟ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಇಂಜಿನ್​: ಸ್ವಲ್ಪದರಲ್ಲೇ ತಪ್ಪಿದ ಅನಾಹುತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts