ಇನ್ನೇನು ಟೇಕಾಫ್​ ಆಗಬೇಕೆನ್ನುವಷ್ಟರಲ್ಲಿ ಹೊತ್ತಿ ಉರಿದ ವಿಮಾನ: ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ!

ಚಾಂಗ್ಕಿಂಗ್: ಚೀನಾದ ವಿಮಾನ ನಿಲ್ದಾಣದ ರನ್​ವೇನಲ್ಲಿ ದಿಢೀರ್​ ತಿರುವು ಪಡೆದುಕೊಂಡ ಬೆನ್ನಲ್ಲೇ ಟಿಬೆಟ್​ ಏರ್​ಲೈನ್ಸ್​ ವಿಮಾನವೊಂದರಲ್ಲಿ ಬೆಂಕಿ ಹೊತ್ತಿ ಉರಿದಿರುವ ಆತಂಕಕಾರಿ ಘಟನೆ ನಡೆದಿದೆ. ಆದರೆ, ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಟಿಬೆಟ್​ ಏರ್​ಲೈನ್ಸ್​ ತಿಳಿಸಿದೆ. ವಿಮಾನವು 9 ಸಿಬ್ಬಂದಿ ಹಾಗೂ 113 ಪ್ರಯಾಣಿಕರನ್ನು ಹೊತ್ತು ಚೀನಾದ ನೈಋತ್ಯ ನಗರವಾದ ಚಾಂಗ್ಕಿಂಗ್​ನಿಂದ ಟಿಬೆಟ್‌ನ ನೈಂಗ್‌ಚಿಗೆ ಪ್ರಯಾಣ ಆರಂಭಿಸಿತ್ತು. ಆದರೆ, ವಿಮಾನದಲ್ಲಿನ ದೋಷವನ್ನು ಪತ್ತೆ ಹಚ್ಚಿದ ಸಿಬ್ಬಂದಿ ದಿಢೀರನೇ ಟೇಕಾಫ್​ ರದ್ದು ಮಾಡಿದರು. ಇದರಿಂದ … Continue reading ಇನ್ನೇನು ಟೇಕಾಫ್​ ಆಗಬೇಕೆನ್ನುವಷ್ಟರಲ್ಲಿ ಹೊತ್ತಿ ಉರಿದ ವಿಮಾನ: ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ!