More

    ಮತ್ತೆ ಹಾಟ್​ ಫೋಟೋ ಹರಿಬಿಟ್ಟ ಮೀರಾ ಜಾಸ್ಮಿನ್: ಮಲಯಾಳಿ ಬ್ಯೂಟಿಯ ಮೈಮಾಟಕ್ಕೆ ನೆಟ್ಟಿಗರು ಫಿದಾ!

    ಕೊಚ್ಚಿ: ಮಲಯಾಳಂ ಬ್ಯೂಟಿ ಮೀರಾ ಜಾಸ್ಮಿನ್​ ಯಾರಿಗೆ ತಾನೇ ಗೊತ್ತಿಲ್ಲ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಜಾಸ್ಮಿನ್​ ಕಾಲಾನಂತರದಲ್ಲಿ ಕಣ್ಮರೆಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಅವರ ಉಪಸ್ಥಿತಿ ಇರಲಿಲ್ಲ. ಜಾಸ್ಮಿನ್​ ಎಲ್ಲಿ ಹೋದರು ಎಂದು ಬಹುತೇಕರು ಹುಡುಕಾಟ ನಡೆಸುತ್ತಿದ್ದರು. ಮದುವೆ ಬಳಿಕ ಚಿತ್ರರಂಗದಿಂದ ದೂರಾಗಿದ್ದ ಜಾಸ್ಮಿನ್​ ಕೆಲ ದಿನಗಳ ಹಿಂದಷ್ಟೇ ಇನ್​ಸ್ಟಾಗ್ರಾಂಗೆ ಎಂಟ್ರಿ ನೀಡಿದ್ದರು.

    ಜ.20ರಂದು ಇನ್​ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದ ಮೀರಾ ಜಾಸ್ಮಿನ್​ ಇನ್ನು ಮುಂದೆ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿದ್ದರು. ಅಭಿಮಾನಿಗಳಿಗೂ ಇದು ಖುಷಿಯಾಗಿತ್ತು. ಅಂದಿನಿಂದ ನಿರಂತರವಾಗಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

    ಈ ಹಿಂದೊಮ್ಮೆ ಜಾಸ್ಮಿನ್​ ಅವರು ಶಾಪಿಂಗ್​ ಮಾಡುವ ವೇಳೆ ದಿಢೀರ್​ ಪ್ರತ್ಯಕ್ಷರಾಗಿದ್ದರು. ಆ ವೇಳೆ ಅವರು ತುಂಬಾ ದಪ್ಪವಾಗಿದ್ದರು. ಇದೀಗ ಸ್ಲಿಮ್​ ಆಗಿ ಕಾಣುತ್ತಿರುವ ಜಾಸ್ಮಿನ್​ ಮತ್ತೆ ತಮ್ಮ ಮಾದಕ ನೋಟವನ್ನು ಬೀರಿದ್ದಾರೆ. ನಿನ್ನೆಯಷ್ಟೇ ಮೀರಾ ಜಾಸ್ಮೀನ್​ 40ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ ತಮ್ಮ ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ ಪೇಜ್​ನಲ್ಲಿ ಜಾಸ್ಮಿನ್​ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೇರಳೆ ಬಣ್ಣದ ಗೌನ್​ನಲ್ಲಿ ಎದೆ ಸೀಳು ಕಾಣುವಂತೆ ಕ್ಯಾಮೆರಾಗೆ ಪೋಸ್​​ ನೀಡಿದ್ದಾರೆ. ಈ ಫೋಟೋಗೆ 1 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಬಂದಿದೆ. ಅಲ್ಲದೆ, ಜಾಸ್ಮಿನ್​ ಬೋಲ್ಡ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.

    ಇನ್ನು ಜಾಸ್ಮಿನ್​ ಇನ್​ಸ್ಟಾಗ್ರಾಂ ಖಾತೆ ತೆರೆದ ಮೊದಲ ದಿನವೇ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದರು. ಇದೀಗ ಫಾಲೋವರ್ಸ್​ ಸಂಖ್ಯೆ 2 ಲಕ್ಷ ದಾಟಿದೆ. ಅಂದಹಾಗೆ ಜಾಸ್ಮಿನ್​ ಅವರು 2014ರಲ್ಲಿ ಅನಿಲ್​ ಜಾನ್​ ಟಿಟನ್​ ಎಂಬುವರನ್ನು ಮದುವೆಯಾಗಿದ್ದಾರೆ. ಅವರ ಪತಿ ದುಬೈನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲೇ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡರು. ಮದುವೆಯಾಗಿದ್ದರೂ ಮಾನಸಿಕ ಸಮಸ್ಯೆಯಿಂದ ಜಾಸ್ಮಿನ್​ ತಮ್ಮ ಪತಿಯಿಂದ ಬೇರೆಯಾಗಿದ್ದಾರೆ. ಮತ್ತೆ ಸಿನಿಮಾ ಕಡೆ ಒಲವು ತೋರಿಸಿರುವ ಜಾಸ್ಮಿನ್​ ಇತ್ತೀಚೆಗಷ್ಟೇ ಮಲಯಾಳಂ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಆಫರ್​ಗಳು ಬಂದರೆ ಎಲ್ಲ ಭಾಷೆಯಲ್ಲೂ ನಟಿಸುವುದಾಗಿ ಹೇಳಿಕೊಂಡಿದ್ದಾರೆ.

    ಜಾಸ್ಮಿನ್​ ಕನ್ನಡಿಗರಿಗೂ ಚಿರಪರಿಚಿತರು. ಏಕೆಂದರೆ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ದಿವಂಗತ ನಟ ಪುನೀತ್​ ಜತೆ ಮೌರ್ಯ ಮತ್ತು ಅರಸು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಶಿವಣ್ಣನ ಜತೆ ದೇವರ ಕೊಟ್ಟ ತಂಗಿ ಚಿತ್ರ ಮತ್ತು ರವಿಚಂದ್ರನ್​ ಜತೆ ಹೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನದಲ್ಲೂ ಜಾಸ್ಮಿನ್​ ಮನೆ ಮಾಡಿದ್ದು, ಅವರ ಮುಂದಿನ ಪಯಣ ಸುಗಮವಾಗಿರಲಿ. (ಏಜೆನ್ಸೀಸ್​)

    ಜಾಲತಾಣದಲ್ಲಿ ಬೋಲ್ಡ್​ ಫೋಟೋ ಹರಿಬಿಟ್ಟ ಮಲಯಾಳಿ ಬ್ಯೂಟಿ ಮೀರಾ ಜಾಸ್ಮಿನ್​..!

    ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಮೀರಾ ಜಾಸ್ಮಿನ್​: ಮೊದಲ ದಿನದ ಫಾಲೋವರ್ಸ್​ ಸಂಖ್ಯೆ ಕೇಳಿದ್ರೆ ಬೆರಗಾಗ್ತೀರಾ!

    ಕೇವಲ ನಟಿ ರಮ್ಯಾ ಕೊಟ್ಟ ಗಿಫ್ಟ್ ಬಗ್ಗೆ ಹಂಚಿಕೊಂಡ ಅಮೂಲ್ಯ! ಏನದರ ಸ್ಪೆಷಾಲಿಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts