More

    ಮರಗಳನ್ನು ಕಡಿದು ಅಭಿವೃದ್ಧಿ ಮಾಡುವುದಾದ್ರೆ ಅಂತಾ ಅಭಿವೃದ್ಧಿ ನಮಗೆ ಬೇಕಿಲ್ಲ: ಪರಿಸರ ಪ್ರೇಮಿಯ ವಿನೂತನ ಜಾಗೃತಿ

    ರಾಯ್ಪುರ್​: ಕರೊನಾ ವೈರಸ್​ ಬಿಕ್ಕಟ್ಟು, ಪ್ರವಾಹ ಮತ್ತು ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳು ಮಾನವ ಕುಲವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದೆ. ಆಧುನಿಕತೆ ಹೆಸರಿನಲ್ಲಿ ನಗರೀಕರಣ ಮಾಡಲು ಅರಣ್ಯನಾಶದಂತಹ ಕ್ರಮಗಳಿಂದ ಇಂದು ಮನುಷ್ಯ ಪ್ರಕೃತಿಯಿಂದ ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಛತ್ತೀಸ್​ಗಢದ ಪರಿಸರ ಪ್ರೇಮಿಯೊಬ್ಬರು ಸಂದೇಶವೊಂದನ್ನು ಸಾರಿ ಮಾದರಿಯಾಗಿದ್ದಾರೆ.

    ರಸ್ತೆ ನಿರ್ಮಾಣಕ್ಕೆ ಮರಗಳನ್ನು ನಾಶ ಮಾಡುವುದನ್ನು ತಡೆಯಲು ಪರಿಸರ ಪ್ರೇಮಿಯೊಬ್ಬ ಪ್ರತಿ ಮರಗಳ ಮೇಲೆ ಶಿವನ ಫೋಟೋವನ್ನು ಅಂಟಿಸುತ್ತಿದ್ದಾರೆ. ಈ ವಿನೂತನ ಅಭಿಯಾನ ನಡೆಸುತ್ತಿರುವ ಪರಿಸರ ಪ್ರೇಮಿಯ ಹೆಸರು ವೀರೇಂದ್ರ ಸಿಂಗ್​. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಕಾಡುಗಳನ್ನು ನಾಶ ಮಾಡಿ ಅಭಿವೃದ್ಧಿ ಮಾಡುವುದಾದರೆ, ಅಂತಹ ಅಭಿವೃದ್ಧಿ ಕೆಲಸಗಳು ನಮ್ಮ ವಲಯದಲ್ಲಿ ಬೇಕಾಗಿಲ್ಲ ಎಂದು ಹೇಳಿದ್ದಾರೆ.

    ರಸ್ತೆ ಯೋಜನೆಗಾಗಿ ಕೇವಲ 2,900 ಮರಗಳನ್ನು ಕಡಿಯುತ್ತೇವೆಂದು ಅಧಿಕಾರಿಗಳು ಹೇಳುತ್ತಾರೆ. ಆದಾಗ್ಯೂ ಅವರು ಸಣ್ಣ ತೋಟವನ್ನು ಪರಿಗಣಿಸದ ಕಾರಣ, ನಿಜವಾದ ಸಂಖ್ಯೆ 20,000ಕ್ಕಿಂತ ಹೆಚ್ಚಾಗುತ್ತದೆ ಎಂದು ವೀರೇಂದ್ರ ಸಿಂಗ್​ ಕಳವಳ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ ಲೋಕೋಪಯೋಗಿ ಇಲಾಖೆಯು ಛತ್ತೀಸ್​ಗಢದ ಬಲೋಡ್​ ಜಿಲ್ಲೆಯ ತರೌಡ್​ನಿಂದ ದೈಹಾನ್​ವರೆಗೂ ಸುಮಾರು 8 ಕಿ.ಮೀ ದೂರದ ರಸ್ತೆ ಮಾಡಲು ಉದ್ದೇಶಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವೀರೇಂದ್ರ ಸಿಂಗ್​ ಪರಿಸರವನ್ನು ಉಳಿಸಿಕೊಳ್ಳಲು ನನ್ನೊಂದಿಗೆ ಬಂದು ಕೈಜೋಡಿಸಿ ಎಂದು ಗ್ರಾಮಸ್ಥರನ್ನು ಕೇಳಿಕೊಂಡಿದ್ದಾರೆ.

    ದೇಶದ ಹಲವಾರು ಭಾಗಗಳಲ್ಲಿ ನಿರಂತರ ಮಳೆ ಬರುತ್ತಿದ್ದರೂ, ಬಲೋಡ್ ತನ್ನ ಸರಿಯಾದ ಪಾಲನ್ನು ಸಹ ಪಡೆಯುತ್ತಿಲ್ಲ. ನಮ್ಮ ಭಾಗದಲ್ಲಿ ಉತ್ತಮವಾಗಿ ಮಳೆಯಾಗುತ್ತಿಲ್ಲ. ಇದೀಗ ಮರಗಳನ್ನು ಕಡಿದರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸಿಂಗ್​ ಹೇಳಿದ್ದಾರೆ.

    ಅವರು ಮೊದಲು ಚಿಪ್ಕೊ ಆಂದೋಲನವನ್ನು ಸಿಂಗ್​ ಪ್ರಾರಂಭಿಸಿದರು ಮತ್ತು ಬೀದಿಗಳಲ್ಲಿ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕುವ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಇದಾದ ಬಳಿಕ ರಾಕ್ಷಸೂತ್ರವನ್ನು ಮರಗಳ ಸುತ್ತಲೂ ಕಟ್ಟಿದರು ಮತ್ತು ಇದೀಗ ಮರಗಳನ್ನು ರಕ್ಷಿಸಿಕೊಳ್ಳು ದೇವರ ಫೋಟೋಗಳನ್ನು ಅಂಟಿಸಲು ಆರಂಭಿಸಿದ್ದಾರೆ.

    ಜಾಗತಿಕ ತಾಪಮಾನ ಮತ್ತು ಮಾಲಿನ್ಯ ಎರಡೂ ಅರಣ್ಯನಾಶಕ್ಕೆ ಕಾರಣಗಳಾಗಿವೆ. ಗ್ರಹವನ್ನು ಉಳಿಸಲು ನಾವು ಮರಗಳನ್ನು ಉಳಿಸಬೇಕು ”ಎಂದು ಸಿಂಗ್ ಮಾಧ್ಯಮ ಮೂಲಕ ಮನವಿ ಮಾಡಿಕೊಂಡರು. (ಏಜೆನ್ಸೀಸ್​)

    ಪ್ರಕೃತಿ ಮಾತೆ ಇಲ್ಲದ ಜೀವನ ಏನೂ ಅಲ್ಲ…ಹೀಗಂದ ಮರುಕ್ಷಣವೇ ಪ್ರಕೃತಿ ವಿಕೋಪಕ್ಕೆ ಯುವ ವೈದ್ಯೆ ಬಲಿ!

    ಮತ್ತೆ ಚಂದನವನಕ್ಕೆ ಬರ್ತಾರಾ ತ್ರಿಷಾ? ಪುನೀತ್ ‘ದ್ವಿತ್ವ’ಕ್ಕೆ ನಾಯಕಿಯಾಗ್ತಾರಾ?

    ಸಿಎಂ ಸೇಫ್… ಸಸ್ಪೆನ್ಸ್: ಬಿಎಸ್​ವೈ ಹೊಗಳಿದ ನಡ್ಡಾ | ಇಂದು ನಾಯಕತ್ವ ಕ್ಲೈಮ್ಯಾಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts