More

    ಕೇರಳ ನರಬಲಿ ಪ್ರಕರಣಕ್ಕೆ ಬೆಂಗಳೂರು ಲಿಂಕ್​: ಪೊಲೀಸರನ್ನೇ ದಂಗುಬಡಿಸಿದೆ ಆರೋಪಿ ಲೈಲಾ ಹೇಳಿಕೆ

    ತಿರುವನಂತಪುರ: ವಾಮಾಚಾರಕ್ಕಾಗಿ ಮಹಿಳೆಯರಿಬ್ಬರನ್ನು ಬಲಿ ಕೊಟ್ಟ ಪ್ರಕರಣದಲ್ಲಿ ಸಾಕಷ್ಟು ಸ್ಫೋಟಕ ಸಂಗತಿಗಳು ಬಯಲಾಗುತ್ತಿವೆ. ಕಳೆದ ಶನಿವಾರ ಆರೋಪಿ ಮನೆಯಲ್ಲಿ ನಡೆದ ತಪಾಸಣೆ ವೇಳೆ ತನಿಖಾ ತಂಡಕ್ಕೆ ಅನೇಕ ಸಂಗತಿಗಳು ಖಚಿತವಾಗಿದ್ದು, ಅವುಗಳಲ್ಲಿ ಮಾನವ ಶವದ ಮಾಂಸವನ್ನು ತಿಂದಿರುವುದು ಸಹ ಒಂದು. ಇದೀಗ ಇದೇ ಪ್ರಕರಣ ಬೆಂಗಳೂರು ಲಿಂಕ್​ ಪಡೆದುಕೊಂಡಿದೆ.

    ಶವದ ಮಾಂಸವನ್ನು ಮಾರಾಟ ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಬಹುದು ಎಂದು ಪ್ರಮುಖ ಆರೋಪಿ ಶಫಿ, ತನ್ನ ಸಹ ಆರೋಪಿಗಳಿಗೆ ಹೇಳಿದ್ದ ಎಂಬ ಸಂಗತಿ ಇದೀಗ ಬಯಲಾಗಿದೆ. ಸುಮಾರು 20 ಲಕ್ಷ ರೂ.ವರೆಗೂ ಸಂಪಾದನೆ ಮಾಡಬಹುದೆಂದು ಆರೋಪಿ ದಂಪತಿ ಭಗವಾಲ್​ ಸಿಂಗ್​ ಮತ್ತು ಲೈಲಾಗೆ ಶಫಿ ಹೇಳಿದ್ದನು ಎಂಬ ವಿಚಾರ ಆರೋಪಿಗಳ ವಿಚಾರಣೆಯಲ್ಲಿ ತಿಳಿದುಬಂದಿದೆ.

    ಕೊಲೆ ಮಾಡಿದ ಮಾರನೇ ದಿನವೇ ಬೆಂಗಳೂರಿನಿಂದ ವ್ಯಕ್ತಿಯೊಬ್ಬ ಶವದ ಮಾಂಸ ಖರೀದಿಸಲು ಬರುತ್ತಾನೆ ಎಂದು ಶಫಿ, ಸಹ ಆರೋಪಿಗಳನ್ನು ಹೇಳಿದ್ದನಂತೆ. ಯಕೃತ್ತು, ಸ್ತನ ಮತ್ತು ಹೃದಯಕ್ಕೆ ಹೆಚ್ಚಿನ ಹಣವನ್ನು ಪಡೆಯಲಾಗುವುದು ಎಂದು ಶಫಿ ಹೇಳಿದ್ದನಂತೆ. ಇದನ್ನು ನಂಬಿ ಭಗವಾಲ್​ ಸಿಂಗ್​ ಮತ್ತು ಲೈಲಾ ತಮ್ಮ ಮನೆಯ ಫ್ರಿಡ್ಜ್​ನಲ್ಲಿ 10 ಕೆಜಿ ಶವದ ಮಾಂಸವನ್ನು ಇಟ್ಟಿದ್ದರು ಎಂದು ಹೇಳಲಾಗಿದೆ.

    ಮೃತದೇಹದ ಅಂಗಗಳನ್ನು ಕೊಳ್ಳಲು ಯಾರು ಬರದಿದ್ದಾಗ ಅದನ್ನು ತೆಗೆದುಕೊಂಡು ಹೋಗಿ ಹೂತಿಟ್ಟಿದ್ದಾರೆ. ಹಲವು ಕಂತುಗಳಲ್ಲಿ ಆರೋಪಿ ಶಫಿ, ದಂಪತಿಯಿಂದ 6 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದ. ಅಲ್ಲದೆ, ಕೊಲೆ ಹೆಸರಿನಲ್ಲಿ ಭಗವಾಲ್​ ಸಿಂಗ್​ನನ್ನು ಬ್ಲಾಕ್​ಮೇಲ್​ ಮಾಡಲು ಶಫಿ ಮುಂದಾಗಿದ್ದಾ ಎಂದು ತಿಳಿದುಬಂದಿದೆ.

    ಮತ್ತೊಂದು ಕೊಲೆ
    ಆರೋಪಿ ಶಫಿ ಒಟ್ಟು ಮೂರು ಕೊಲೆಗಳನ್ನು ಮಾಡಿದ್ದಾನೆ ಎನ್ನಲಾಗಿದೆ. ಒಂದು ವರ್ಷದ ಹಿಂದೆ ಎರ್ನಾಕುಲಂನಲ್ಲಿ ನಡೆದ ಕೊಲೆಯ ಬಗ್ಗೆ ಶಫಿ, ಆರೋಪಿ ದಂಪತಿಗೆ ಹೇಳಿದ್ದನಂತೆ. ನಾವು ನರಬಲಿ ಕುರಿತು ಯೋಚಿಸುತ್ತಿದ್ದ ಕಾಲವದು. ಎಳಂತೂರಿನಲ್ಲಿರುವ ತನ್ನ ಮನೆಯ ಹೊರಗೆ ಕುಳಿತಿದ್ದಾಗ ಶಫಿ ಅಪರಾಧ ಮತ್ತು ಮಾಂಸವನ್ನು ಮಾರಾಟ ಮಾಡಿದ ಬಗ್ಗೆ ನಮಗೆ ಹೇಳಿದನು ಎಂದು ಆರೋಪಿ ಲೈಲಾ ವಿಚಾರಣೆ ಸಮಯದಲ್ಲಿ ಬಾಯ್ಬಿಟ್ಟಿದ್ದಾಳೆ.

    ಆದರೆ, ಭಗವಾಲ್ ಸಿಂಗ್ ಮತ್ತು ಲೈಲಾರನ್ನು ನಂಬಿಸಲು ಎರ್ನಾಕುಲಂನಲ್ಲಿ ನಡೆದ ಕೊಲೆಯ ಕತೆಯನ್ನು ಕಟ್ಟಲಾಯಿತು ಎಂದು ಶಫಿ ಹೇಳಿದ್ದಾನೆ. ಇದರ ಮಧ್ಯೆ ನರಬಲಿ ಹಿಂದೆ ಅಂಗಾಂಗ ಮಾಫಿಯಾ ಕೈವಾಡವಿದೆ ಎಂಬುದನ್ನು ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ತಳ್ಳಿ ಹಾಕಿದ್ದಾರೆ. ಈ ರೀತಿ ಮಾಡಿ ಅಂಗಾಂಗ ಕಸಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ನರಬಲಿಯ ಬಲಿಪಶುಗಳು ಹೆಚ್ಚಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದಾಗಿಯೂ ಆಯುಕ್ತರು ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಮಹಿಳೆಯರ ಶವದ ಮಾಂಸವನ್ನು ಬೇಯಿಸಿ ತಿಂದಿದ್ದೀರಾ? ಆರೋಪಿ ಕೊಟ್ಟ ಪ್ರತಿಕ್ರಿಯೆ ನೋಡಿ ದಂಗಾದ ಅಧಿಕಾರಿಗಳು

    ಕೇರಳ ನರಬಲಿ ಪ್ರಕರಣ: ಆರೋಪಿಗಳು ಶವದ ಮಾಂಸ ತಿಂದಿದ್ದಾರೆ ಎನ್ನುವುದಕ್ಕೆ ಪೊಲೀಸರಿಗೆ ಸಿಕ್ತು ಮಹತ್ವದ ಸಾಕ್ಷಿ

    ಕೇರಳ ನರಬಲಿ ಪ್ರಕರಣ: ವಯಸ್ಕರ ಸಿನಿಮಾದಲ್ಲಿ ನಟಿಸುವ ಆಸೆ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts