More

    ಬೆಸ್ಕಾಂ ಇಂಜಿನಿಯರ್ ಕಳ್ಳಾಟ: ಅಕ್ರಮ ಆಸ್ತಿ ಶೋಧದ ವೇಳೆ ಎಸಿಬಿ ಬಲೆಗೆ ಬಿದ್ದ ಮತ್ತೊಬ್ಬ ಸರ್ಕಾರಿ ಅಧಿಕಾರಿ

    ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ (ರಸ್ತೆ ಸುರಕ್ಷತೆ) ಅಕ್ರಮ ಆಸ್ತಿ ಶೋಧದ ವೇಳೆ ಎಸಿಬಿ ಬಲೆಗೆ ಮತ್ತೊಬ್ಬ ಸರ್ಕಾರಿ ಅಧಿಕಾರಿ ಬಲೆಗೆ ಸಿಲುಕಿದ್ದಾರೆ.

    ನೆಲಮಂಗಲ ವಿಭಾಗದ ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಕುಮಾರ್ ನಾಯಕ್ ಸೆರೆಸಿಕ್ಕವರು. ನಾಯಕ್ ಮನೆ ಮೇಲೂ ದಾಳಿ ನಡೆಸಿ ಚಿನ್ನ, ಬೆಳ್ಳಿ ಸೇರಿದಂತೆ ಅಕ್ರಮ ಸಂಪತ್ತು ಸಂಬಂಧ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯದ ಎಲ್ಲೆಡೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಲಾಗಿತ್ತು. ಈ ವೇಳೆ ರಾಜ್ಯ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ರಸ್ತೆ ಸುರಕ್ಷತೆ) ಜ್ಞಾನೇಂದ್ರ ಕುಮಾರ್ ಸಂಬಂಧಿಸಿದ ಮಾನ್ಯತಾ ಟೆಕ್ ಪಾರ್ಕ್ ಸಮೀಪದ ಸ್ನೇಹಿತ ಮುನಾವರ್ ಪಾಷ ಫ್ಲಾೃಟ್ ಸಹ ಶೋಧ ನಡೆಸಲಾಗಿತ್ತು. ಪಾಷ ಫ್ಲಾೃಟ್‌ನಲ್ಲಿ ನೆಲಮಂಗಲದ ಬೆಸ್ಕಾಂ ಎಇ ಕುಮಾರ್ ನಾಯಕ್‌ಗೆ ಸಂಬಂಧಪಟ್ಟ ಕೆಲ ದಾಖಲೆಗಳು ಪತ್ತೆಯಾದವು. ದಾಖಲೆಗಳನ್ನು ಪರಿಶೀಲಿಸಿದಾಗ ಕುಮಾರ್ ನಾಯಕ್ ಅಕ್ರಮ ಆಸ್ತಿ ಗಳಿಗೆ ಬೆಳಕಿಗೆ ಬಂದಿದೆ. ಈ ಮಾಹಿತಿ ಮೇರೆಗೆ ಕುಮಾರ್ ನಾಯಕ್ ಮೇಲೆ ಕಾರ್ಯಾಚರಣೆ ಶೋಧ ನಡೆಸಲಾಗಿದೆ. ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ 1 ಫ್ಲಾೃಟ್, ಬೆಂಗಳೂರು ನಗರ ಜಾಲ ಹೋಬಳಿಯಲ್ಲಿ 20 ಗುಂಟೆ ಜಮೀನು, 1 ಕಾರು, 413 ಗ್ರಾಂ ಚಿನ್ನ, 5.5 ಗ್ರಾಂ ವಜ್ರ, 4.461 ಕೆಜಿ ಬೆಳ್ಳಿ, 2.08 ಲಕ್ಷ ರೂ., ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ 8 ಲಕ್ಷ ರೂ. ಹಾಗೂ 16.30 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ಬರೆದ ಜೇಮ್ಸ್​: ಮೊದಲ ದಿನವೇ ದಾಖಲೆ ಗಳಿಕೆ, KGF​ ರೆಕಾರ್ಡ್​ ಬ್ರೇಕ್​

    ಕೇಸ್‌ನಿಂದ ಮುಕ್ತ ಮಾಡಲು 50 ಸಾವಿರ ಲಂಚ ಸ್ವೀಕಾರ: ಎಸ್‌ಐ, ಗುತ್ತಿಗೆ ನೌಕರನಿಗೆ ಜೈಲು ಶಿಕ್ಷೆ

    ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಸಂಪತ್ತು: 18 ಸರ್ಕಾರಿ ಅಧಿಕಾರಿಗಳ ಕರಾಳ ಮುಖ ಬಿಚ್ಚಿಟ್ಟ ಎಸಿಬಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts