More

    ಆರ್​ಟಿ ನಗರದ ಬ್ರೋಕರ್​ ಮೋಹನ್ ಮನೆಯಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತು ಪತ್ತೆ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ 9 ಕಡೆ ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪದ ಮೇಲೆ 9 ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ.

    ಬಿಡಿಎ ಭ್ರಷ್ಟಾಚಾರದ ಮೂಲವೇ ಈ ಮಧ್ಯವರ್ತಿಗಳು. ಬಿಡಿಎಗೆ ಬರುವ ಪ್ರತಿಯೊಬ್ಬ ಅಧಿಕಾರಿಯನ್ನು ಮಧ್ಯವರ್ತಿಗಳು ಸಂಪರ್ಕಿಸುತ್ತಿದ್ದರು. ನಿವೇಶನ ಹಂಚಿಕೆ, ಸರ್ಕಾರಿ ನಿವೇಶನ ಅಭಿವೃದ್ದಿ ಸೇರಿ ಬಿಡಿಎನ‌ ಪ್ರತಿಯೊಂದು ಪ್ರಕ್ರಿಯೆಯಲ್ಲೂ ಮಧ್ಯವರ್ತಿಗಳ ಒಡನಾಟ ಪತ್ತೆಯಾಗಿದ್ದು, ಇದೆ ಹಿನ್ನೆಲೆಯಲ್ಲಿ ಬಿಡಿಎ ಮಧ್ಯವರ್ತಿಗಳ ಮೇಲೆ ಎಸಿಬಿ ದಾಳಿ ಮಾಡಿದೆ.

    ಆರ್​ಟಿ ನಗರದ ಮೋಹನ್ ನಿವಾಸದಲ್ಲಿ ಭಾರಿ ಪ್ರಮಾಣ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿದೆ. ಮನೆಯ ಲಾಕರ್​ಗಳಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಶೋಧಿಸಿ ಅವುಗಳನ್ನು ಸೋಫಾದ ಮೇಲೆ ಅಧಿಕಾರಿಗಳು ಜೋಡಿಸಿ ಇಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್​ ಆಗುತ್ತಿದೆ. ಬ್ರೋಕರ್​ಗಳ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಅಕ್ರಮ ಸಂಪತ್ತು ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ.

    ಬಿಡಿಎ ಕಚೇರಿಗಳಲ್ಲಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಚಾಮರಾಜಪೇಟೆಯ ರಘು ಬಿ.ಎನ್., ಆರ್.ಟಿ.ನಗರದ ಮನೋರಾಯನಪಾಳ್ಯದ ಮೋಹನ್, ದೊಮ್ಮಲೂರಿನ ಮನೋಜ್, ಮಲ್ತಳ್ಳಿಯ ಕೆನಗುಂಟೆ ಮುನಿರತ್ನ(ರತ್ನವೇಲು), ಆರ್.ಆರ್.ನಗರದ ತೇಜಸ್ವಿ, ಮುದ್ದಿನಪಾಳ್ಯದ ಕೆ.ಜಿ. ಸರ್ಕಲ್​ನ ಅಶ್ವತ್, ಬಿಡಿಎ ಬಡಾವಣೆಯ ಚಾಮುಂಡೇಶ್ವರಿನಗರದ ರಾಮ, ಲಕ್ಷ್ಮಣ, ಮುದ್ದಿನಪಾಳ್ಯದ ಚಿಕ್ಕಹನುಮ್ಮಯ್ಯ ಅವರ ಮನೆಗಳ ಮೇಲೆ ಎಸಿಬಿ ದಾಳಿಯಾಗಿದೆ. ಅಧಿಕಾರಿಗಳು ಮತಹತ್ವದ ದಾಖಲೆಗಳಿಗಾಗಿ ಶೋಧ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪಿಯುಸಿ ನಂತ್ರ ತೆಗೆದಿದ್ದು ಜೆರಾಕ್ಸ್ ಅಂಗಡಿ​: ಬ್ರೋಕರ್​ ಆದ ಬಳಿಕ ಮಾಜಿ ಮಂತ್ರಿಯ ಲಕ್ಷುರಿ ಬಂಗಲೆ

    ಪಾವಗಡ ಖಾಸಗಿ ಬಸ್​ ದುರಂತ, ನಾಲ್ವರು ಅಧಿಕಾರಿಗಳ ಅಮಾನತು: ಶೀರಾಮುಲು

    ಪದ್ಮಶ್ರೀ ಪುರಸ್ಕೃತ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದರ ಬದುಕಿನ ಸ್ಫೂರ್ತಿದಾಯಕ ಪಯಣವಿದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts