More

    ಅಸ್ಸಾಂನಲ್ಲಿ ನಡೆದ ಟಿ20 ಪಂದ್ಯದ ವೇಳೆ ಹಾವು ಮೈದಾನ ಪ್ರವೇಶಿಸಿದ್ದಕ್ಕೆ ವಿಚಿತ್ರ ವಿವರಣೆ ಕೊಟ್ಟ ಎಸಿಎ ಸೆಕ್ರೆಟರಿ!

    ಗುವಾಹಟಿ: ಆತಿಥೇಯ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿನ ಬರ್ಸಪರ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಕಳೆದ ಭಾನುವಾರ (ಅ.2) ನಡೆದ ಎರಡನೇ ಟಿ20 ಪಂದ್ಯದ​ ಸಂದರ್ಭದಲ್ಲಿ ಹಾವೊಂದು ಮೈದಾನಕ್ಕೆ ನುಗ್ಗಿ ಕೆಲಕಾಲ ಪಂದ್ಯವನ್ನು ನಿಲ್ಲಿಸಿತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಈ ಬಗ್ಗೆ ಅಸ್ಸಾಂ ಕ್ರಿಕೆಟ್​ ಅಸೋಸಿಯೇಷನ್​ (ಎಸಿಎ) ಸೆಕ್ರೆಟರಿ ದೇವಜಿತ್ ಸೈಕಿಯಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಇನಿಂಗ್ಸ್‌ನ ಎಂಟನೇ ಓವರ್‌ನ ಆರಂಭಕ್ಕೂ ಮುನ್ನ ಹಾವು ಮೈದಾನಕ್ಕೆ ಪ್ರವೇಶಿಸಿತು. ಹಾವನ್ನು ಗಮನಿಸಿದ ದಕ್ಷಿಣ ಆಫ್ರಿಕದ ಕೆಲವು ಆಟಗಾರರು ಕೂಡಲೇ ಕೆ.ಎಲ್.ರಾಹುಲ್ ಮತ್ತು ಫೀಲ್ಡ್​ನಲ್ಲಿದ್ದ ಅಂಪೈರ್​ ಗಮನಕ್ಕೆ ತಂದರು. ತಕ್ಷಣ ಅಗತ್ಯ ಉಪಕರಣಗಳನ್ನು ಹಿಡಿದು ಬಂದ ಪರಿಣತರು ಅದನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಆಟಗಾರರು ಪಾನೀಯ ವಿರಾಮ ಪಡೆದರು.

    ಈ ಬಗ್ಗೆ ಮಾತನಾಡಿರುವ ದೇವಜಿತ್ ಸೈಕಿಯಾ, ಹಾವು ಪಂದ್ಯವನ್ನು ನೋಡಿ ಆನಂದಿಸಿದೆ ಎಂದು ನನಗೆ ಖಾತ್ರಿಯಾಗಿದೆ. ಬಹುಶಃ ಆಟಗಾರರನ್ನನ್ನು ಹತ್ತಿರದಿಂದ ನೋಡುವ ಪ್ರಯತ್ನವನ್ನು ಹಾವು ಮಾಡಿರಬಹುದು ಮತ್ತು ನಮ್ಮ ಪಿಚ್ ಕ್ಯುರೇಟರ್‌ಗಳಲ್ಲಿ ಒಬ್ಬರು ಹಾವನ್ನು ಹಿಡಿದಾಗ, ಅದು ತುಂಬಾ ಅಸಮಾಧಾನಗೊಂಡಿರಬೇಕು ಎನ್ನುವ ಮೂಲಕ ಸೈಕಿಯಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.

    ಸೈಕಿಯಾ ಅವರ ಮಾತಿಗೆ ಇದೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೈದಾನಕ್ಕೆ ಹಾವು ನುಗ್ಗುವುದೆಂದರೆ, ತಮಾಷೆ ಮಾತಲ್ಲ. ಗಂಭೀರವಾಗಿ ಪರಿಗಣಿಸಿ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಲಹೆ ನೀಡಿದ್ದಾರೆ.

    ಅಂದಹಾಗೆ ಮೂರು ವರ್ಷಗಳ ನಂತರ ಅಸ್ಸಾಂ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಭಾನುವಾರ ಆಯೋಜಿಸಿತ್ತು. (ಏಜೆನ್ಸೀಸ್​)

    ಕಿತ್ತಳೆ ಹಣ್ಣಿನ ಆಮದು ಸೋಗಿನಲ್ಲಿ ಡ್ರಗ್ಸ್ ಸಾಗಾಟ: ಬರೋಬ್ಬರಿ 1470 ಕೋಟಿ ರೂ. ಮೌಲ್ಯದ ಡ್ರಗ್ಸ್​ ಸೀಜ್​

    RRR ಸಿನಿಮಾ ಬಗ್ಗೆ ನಿಕೇಶಾ ಪಟೇಲ್​ ಮಾಡಿದ ಟ್ವೀಟ್​ ನೋಡಿ ಜೂ. ಎನ್​ಟಿಆರ್-ರಾಮ್​ಚರಣ್ ಫ್ಯಾನ್ಸ್​​ ಗರಂ!

    ಅಪಘಾತಕ್ಕೀಡಾದವರನ್ನು ರಕ್ಷಿಸಲು ಬಂದ ಆಂಬ್ಯುಲೆನ್ಸ್​ಗೆ ಕಾರು ಡಿಕ್ಕಿ: ಐವರು ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts