More

    ಪಂಜಾಬ್​ ಜನತೆಗೆ ಬಂಪರ್​ ಆಫರ್​: ಜುಲೈ 1ರಿಂದ ಪ್ರತಿ ಮನೆಗೆ 300 ಯೂನಿಟ್​ ಉಚಿತ ವಿದ್ಯುತ್​

    ಚಂಡೀಗಢ: ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಭಗಂವತ್​ ಮಾನ್​ ಅವರು ಬಂಪರ್​ ಆಫರ್​ ನೀಡಿದ್ದಾರೆ. ಜುಲೈ 1ರಿಂದ ಪ್ರತಿ ಮನೆಗೆ 300 ಯೂನಿಟ್​ ಉಚಿತ ವಿದ್ಯುತ್​ ಪೂರೈಕೆ ಮಾಡುವುದಾಗಿ ಆಪ್​ ಸರ್ಕಾರ ಘೋಷಣೆ ಮಾಡಿರುವುದಾಗಿ ಪಂಜಾಬ್​ನ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

    ಪಂಜಾಬ್​ನಲ್ಲಿ ಭಗವಂತ್​ ಮಾನ್​ ನೇತೃತ್ವದ ಆಪ್​ ಸರ್ಕಾರ ಇಂದಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದೆ. ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವುದು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಪಂಜಾಬ್​ ಜನತೆಗೆ AAP ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.

    ಹಳ್ಳಿಗಳಲ್ಲಿ ಅನೇಕ ಜನರು “ತಪ್ಪಾದ” ಬಿಲ್‌ಗಳನ್ನು ಪಡೆದಿದ್ದಾರೆ ಮತ್ತು ಬಿಲ್​ ಪಾವತಿಸದ ಕಾರಣ ಅವರ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದ್ದು, ಇದರಿಂದ ಜನರು ವಿದ್ಯುತ್ ಕದಿಯಲು ಆಶ್ರಯಿಸಿದ್ದಾರೆ ಎಂದು ಕೇಜ್ರಿವಾಲ್ ಈ ಹಿಂದೆ ಭರವಸೆ ನೀಡುವ ಸಂದರ್ಭದಲ್ಲಿ ಹೇಳಿದ್ದರು. ಅಲ್ಲದೆ, ಪಂಜಾಬ್​ನಲ್ಲಿ ಹೆಚ್ಚುವರಿ ವಿದ್ಯುತ್​ ಉತ್ಪಾದನೆ ಇದ್ದರು ಅನಗತ್ಯ ವಿದ್ಯುತ್​ ಸಂಪರ್ಕ ಕಡಿತಗೊಳಿಸಲಾಗುತ್ತಿತ್ತು ಎಂದಿದ್ದರು.

    ದೆಹಲಿಯಲ್ಲೂ ಎಎಪಿ ಸರ್ಕಾರ 200 ಯೂನಿಟ್​ ವಿದ್ಯುತ್​ ಅನ್ನು ಉಚಿತವಾಗಿ ನೀಡುತ್ತಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕಳೆದ ತಿಂಗಳು ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯನ್ನು ಘೋಷಿಸಿದರು, ಇದು ಚುನಾವಣೆಯಲ್ಲಿ ಎಎಪಿಯ ಪ್ರಮುಖ ಪ್ರಚಾರದ ಕಾರ್ಯಸೂಚಿಯು ಆಗಿತ್ತು.

    ಮಾರ್ಚ್ 19 ರಂದು ಮಾನ್ ಅವರು ತಮ್ಮ ಮೊದಲ ಕ್ಯಾಬಿನೆಟ್ ಸಭೆಯ ಮೊದಲ ನಿರ್ಧಾರ ತೆಗೆದುಕೊಂಡರು. ಈ ವೇಳೆ ಪೊಲೀಸ್ ಇಲಾಖೆಯಲ್ಲಿ 10,000 ಸೇರಿದಂತೆ ವಿವಿಧ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ 25,000 ಉದ್ಯೋಗಗಳ ನೇಮಕಾತಿಯನ್ನು ಘೋಷಣೆ ಮಾಡಿದರು. (ಏಜೆನ್ಸೀಸ್​)

    ಕೆಜಿಎಫ್​-2 ಮಾಡಿದ ನಿಮ್ಗೆ ನಾಚಿಕೆಯಾಗ್ಬೇಕು, ಟಾಪ್ ಕ್ಲಾಸ್ ಲದ್ದಿ ಚಿತ್ರ, 3 ಗಂಟೆಯ ಟಾರ್ಚರ್​ ಎಂದ ವಿಮರ್ಶಕ

    ಅಸಭ್ಯ ವರ್ತನೆ ಆರೋಪ: ಉಪನ್ಯಾಸಕನಿಗೆ ಸ್ಟಾಫ್​ರೂಮ್​ನಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಉಪನ್ಯಾಸಕಿಯರು

    ಒಂದು ಹಾಡಿಗೆ 1.25 ಕೋಟಿ ರೂ.; ಎಫ್ 2 ಚಿತ್ರತಂಡದಿಂದ ಪೂಜಾಗೆ ಭರ್ಜರಿ ಆಫರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts