More

    ಗುಮಾಸ್ತನ​ ಮನೆಯಲ್ಲಿ ಕಂತೆ ಕಂತೆ ಹಣ: ಅಧಿಕಾರಿಗಳು ದಾಳಿ ಮಾಡ್ತಿದ್ದಂತೆ ವಿಷ ಕುಡಿದ ಸರ್ಕಾರಿ ನೌಕರ!​

    ಭೋಪಾಲ್​: ಅಕ್ರಮ ಆಸ್ತಿ ಸಂಪಾದನೆ ದೂರು ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಎಕನಾಮಿಕ್ಸ್​ ಅಫೆನ್ಸ್​ ವಿಂಗ್​ (ಇಒಡಬ್ಲ್ಯು) ಪೊಲೀಸರು ಬುಧವಾರ ಸರ್ಕಾರಿ ಗುಮಾಸ್ತನ ಮನೆಯ ಮೇಲೆ ದಾಳಿ ನಡೆಸಿದಾಗ ಬರೋಬ್ಬರಿ 85 ಲಕ್ಷ ರೂಪಾಯಿಗೂ ಅಧಿಕ ನಗದು ಹಣ ಪತ್ತೆಯಾಗಿದೆ. ಪೊಲೀಸರ ಶೋಧದ ನಡುವೆ ಗುಮಾಸ್ತ ವಿಷ ಸೇವನೆ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಭೋಪಾಲ್​ನ ಬೈರಾಗರ್ ಏರಿಯಾದ​ ನಿವಾಸಿ ಹಾಗೂ ಉನ್ನತ ವಿಭಾದ ಗುಮಾಸ್ತನಾಗಿರುವ ಕೇಸ್ವಾನಿ ಪ್ರಸ್ತುತ 50 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದಾನೆ. ಆತನ ಮನೆಯ ಮೇಲೆ ನಡೆದ ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಒಡಬ್ಲ್ಯು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬುಧವಾರ ಮಧ್ಯರಾತ್ರಿಯವರೆಗೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಮನೆಯಲ್ಲಿ ಸಿಕ್ಕ ಹಣದ ನಿಖರವಾದ ಮೌಲ್ಯ ತಿಳಿಯಲು ಕೌಂಟಿಂಗ್​ ಯಂತ್ರವನ್ನು ತರಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೇಸ್ವಾನಿ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅಧಿಕಾರಿಗಳು ದಾಳಿ ನಡೆಸಲು ಕೇಸ್ವಾನಿ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಆತ ಬಾತ್​ರೂಮ್​ ಕ್ಲೀನರ್​ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ. ಅಲ್ಲದೆ, ತನ್ನ ಮನೆಯನ್ನು ಶೋಧಿಸದಂತೆ ಅಧಿಕಾರಿಗಳನ್ನು ತಡೆದ. ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಸರ್ಕಾರಿ ಒಡೆತನದ ಹಮೀಡಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಆತನ ಸ್ಥಿತಿ ಸದ್ಯ ಸ್ಥಿರವಾಗಿದೆ ಮತ್ತು ರಕ್ತದೊತ್ತಡ ಸಂಬಂಧಿತ ಸಮಸ್ಯೆಗಳಿಳೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಒಡಬ್ಲ್ಯು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್​ ಮಿಶ್ರಾ ತಿಳಿಸಿದ್ದಾರೆ.

    ಕೇಸ್ವಾನಿ ಮನೆಯಲ್ಲಿ ಸುಮಾರು 85 ಲಕ್ಷಕ್ಕೂ ಅಧಿಕ ನಗದು ಹಣ ದೊರೆತಿದೆ. ಅಲ್ಲದೆ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸ್ಥಿರ ಆಸ್ತಿಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಸಹ ಅಧಿಕಾರಿಗಳಿಗೆ ಸಿಕ್ಕಿವೆ. ಎಲ್ಲ ಆಸ್ತಿಗಳ ಮೌಲ್ಯ 4 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮನೆಯಲ್ಲೂ ದುಬಾರಿ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ. ಅವುಗಳ ಬೆಲೆ 1.5 ಕೋಟಿ ರೂಪಾಯಿ ಎಂದು ಮಿಶ್ರಾ ಅವರು ಹೇಳಿದ್ದಾರೆ.

    ಆರಂಭದಲ್ಲಿ 4000 ತಿಂಗಳ ವೇತನಕ್ಕೆ ಕೆಲಸಕ್ಕೆ ಸೇರಿದ ಕೇಸ್ವಾನಿ ಇಂದು ತಿಂಗಳಿಗೆ 50 ಸಾವಿರ ರೂಪಾಯಿ ಸಂಬಂಳ ಪಡೆಯುತ್ತಿದ್ದಾನೆ. ಕೇಶ್ವಾನಿ ಅವರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ ಲಕ್ಷ ಲಕ್ಷ ರೂ. ಡೆಪಾಸಿಟ್​ ಆಗಿದೆ. ಯಾವುದೇ ಆದಾಯದ ಮೂಲವಿಲ್ಲದ ತಮ್ಮ ಪತ್ನಿ ಹೆಸರಿನಲ್ಲಿ ಹೆಚ್ಚಿನ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾದ ಆಸ್ತಿಗಳ ಒಟ್ಟಾರೆ ಮೌಲ್ಯವು, ಮೌಲ್ಯಮಾಪನ ಕಾರ್ಯ ಮತ್ತು ದಾಖಲೆಗಳ ಪರಿಶೀಲನೆಯ ನಂತರವಷ್ಟೇ ತಿಳಿಯುತ್ತದೆ ಎಂದು ಮಿಶ್ರಾ ಹೇಳಿದರು. (ಏಜೆನ್ಸೀಸ್​)

    ದೇವಕನ್ಯೆಯಾದ ಆಶಿಕಾ: ಗತವೈಭವಕ್ಕೆ ನಾಯಕಿಯಾಗಿ ಆಯ್ಕೆ

    VIDEO: ಅಮ್ಮ-ಮಗಳ ಸೇರಿಸಿದ ಸಾಮಾಜಿಕ ಜಾಲತಾಣ! 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಾಕೆ ಪಾಕ್​ನಲ್ಲಿ ಪತ್ತೆ

    ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಕರಡು ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಕೆಗೆ ವಾರದ ಗಡುವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts