More

    ಮಧ್ಯರಾತ್ರಿ ಮನೆ ಎದುರು ಮಾತಾಡ್ತಾ ನಿಂತಿದ್ದ ಪಿಯು ಪ್ರೇಮಿಗಳಿಗೆ ಬೆಳ್ಳಂಬೆಳಗ್ಗೆಯೇ ಕಾದಿತ್ತು ಆಘಾತ!

    ಚೆನ್ನೈ: ಬಲವಂತವಾಗಿ ಹದಿಹರೆಯದ ಪ್ರೇಮಿಗಳಿಬ್ಬರ ಬಾಲ್ಯ ವಿವಾಹ ಮಾಡಿಸುತ್ತಿದ್ದ ಆರು ಮಂದಿಯನ್ನು ತಮಿಳುನಾಡು ಪೊಲೀಸರು ಬಂಧಿಸಿರುವ ಘಟನೆ ತಂಜಾವೂರು ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಪ್ರೀತಿಸುತ್ತಿರುವುದನ್ನು ಕಂಡುಕೊಂಡ ಬಳಿಕ ಗ್ರಾಮದ ಒಂದಿಷ್ಟು ಮಂದಿ ಸೇರಿಕೊಂಡು ಬಲವಂತವಾಗಿ ವಿವಾಹ ಮಾಡುತ್ತಿದ್ದರು.

    ತಂಜಾವೂರಿನ ಥಿರುವೊಣಂ ಗ್ರಾಮದಲ್ಲಿ ಘಟನೆ ನಡೆದಿದೆ. ಒಂದೇ ಶಾಲೆಯಲ್ಲಿ 17 ವರ್ಷದ ಬಾಲಕ ಮತ್ತು 16 ವರ್ಷದ ಬಾಲಕಿ 12ನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ಸೋಮವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಬಾಲಕ ಹುಡುಗಿ ಮನೆಗೆ ಹೋಗಿದ್ದ. ಇದನ್ನು ಗ್ರಾಮದ ಕೆಲವು ನೋಡಿದ್ದರು. ಹುಡುಗ ಮತ್ತು ಹುಡುಗಿ ಮಧ್ಯರಾತ್ರಿ 12.30ರವರೆಗೆ ಮಾತನಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು.

    ಇಬ್ಬರು ಪ್ರೀತಿಸುತ್ತಿರುವುದನ್ನು ತಿಳಿದುಕೊಂಡ ಗ್ರಾಮಸ್ಥರು, ಈ ವಿಚಾರವನ್ನು ಇಬ್ಬರ ಪಾಲಕರಿಗೂ ತಿಳಿಸಿದ್ದಾರೆ. ತಕ್ಷಣ ಹುಡುಗನ ಪಾಲಕರು ಅಲ್ಲಿಗೆ ಬಂದಿದ್ದಾರೆ. ನಂತರ ಗ್ರಾಮಸ್ಥರು ಪೋಷಕರನ್ನು ಒತ್ತಾಯಿಸಿ ಮದುವೆ ಮಾಡಿಸಿದ್ದಾರೆ. ಗ್ರಾಮಸ್ಥರು ತುಂಬಾ ಒತ್ತಾಯ ಮಾಡಿದ್ದರಿಂದ ಹುಡುಗ ಮತ್ತು ಹುಡುಗಿಯ ಪಾಲಕರು ಒಪ್ಪಿಕೊಂಡಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದ್ದರಿಂದ ಯಾರಿಗೂ ಗೊತ್ತಾಗದಂತೆ ಮಂಗಳವಾರ ಮುಂಜಾನೆ 3 ಗಂಟೆಗೆ ದೇವಸ್ಥಾನದಲ್ಲಿ ಮದುವೆ ಮಾಡಿ ಮುಗಿಸಿದ್ದಾರೆ.

    ಇದಾದ ಬಳಿಕ ಮದುವೆ ನಡೆದಿರುವ ವಿಚಾರ ಥಿರುವೊಣಂ ಪಂಚಾಯತ್ ಯೂನಿಯನ್ ಕಲ್ಯಾಣ ಅಧಿಕಾರಿ ಕಮಲಾ ದೇವಿಗೆ ತಿಳಿದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಚಾರಣೆ ನಡೆಸಿದ ಪೊಲೀಸರು ಬಲವಂತವಾಗಿ ಮದುವೆ ಮಾಡಿಸಿದ 6 ಮಂದಿಯನ್ನು ಬಂಧಿಸಿದ್ದಾರೆ.

    ಬಂಧಿತರನ್ನು ರಾಜಾ (51), ಅಯ್ಯವು (55), ರಮನ್​ (62) ಗೋಪು (38) ನಡಿಮಥು (40) ಮತ್ತು ಕಣ್ಣಿಯನ್​ (50) ಎಂದು ಗುರುತಿಸಲಾಗಿದೆ. ಮದುವೆಯಾದ ಬಾಲಕನನ್ನು ತಂಜಾವೂರಿನ ಬಾಲಾಪರಾಧಿ ಕೇಂದ್ರಕ್ಕೆ ಸ್ಥಳಾಂತರಿಸಿದರೆ, ಬಾಲಕಿಯನ್ನು ಸರ್ಕಾರಿ ಬಾಲಕಿಯರ ಕೇಂದ್ರಕ್ಕೆ ರವಾನಿಸಲಾಗಿದೆ.

    ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 147 (ಗಲಭೆಗೆ ಶಿಕ್ಷೆ), 341 (ತಪ್ಪು ತಡೆಗೆ ಶಿಕ್ಷೆ) ಮತ್ತು ಬಾಲ್ಯ ವಿವಾಹ ನಿಷೇಧ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ರಿಂಗ್​​ರೋಡ್​ ಬಳಿಯಿದ್ದ ಕಾರಿನಲ್ಲಿ ಓರ್ವ ಯುವತಿ, ಇಬ್ಬರು ಯುವಕರು: ವಿಚಾರಿಸಿದ ಪೊಲೀಸರಿಗೆ ಕಾದಿತ್ತು ಶಾಕ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts