More

    ಪಾಕ್​ನಲ್ಲಿ ಐವರು ಕಾಮುಕರಿಂದ ಮೇಕೆ ಮೇಲೆ ಗ್ಯಾಂಗ್​ರೇಪ್​: ಸಿಕ್ಕಾಪಟ್ಟೆ ಟ್ರೋಲ್​ ಆದ ಪ್ರಧಾನಿ ಇಮ್ರಾನ್​ ಖಾನ್​!

    ಇಸ್ಲಮಾಬಾದ್​: ಅಮಾಯಕ ಮೂಕಪ್ರಾಣಿ ಮೇಕೆಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಇತ್ತೀಚೆಗೆ ಪಾಕ್​ನಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ವದರಿಗಳ ಪ್ರಕಾರ ಐವರು ಆರೋಪಿಗಳು ಮೇಕೆಯನ್ನು ಹತ್ತಿರದ ಕಾಂಪೌಂಡ್​ ಬಳಿ ಕೊಂಡೊಯ್ಡು ಅತ್ಯಾಚಾರ ಎಸಗಿ, ಕಿರುಕುಳ ನೀಡಿ ಕೊನೆಗೆ ಅದನ್ನು ಹತ್ಯೆ ಮಾಡಿದ್ದಾರೆ. ಈ ಘಟನೆ ಪಾಕಿಸ್ತಾನದ ಒಕ್ರಾದಲ್ಲಿ ನಡೆದಿದ್ದು. ಹೀನ ಕೃತ್ಯದ ಬಳಿಕ ಕಾಮುಕರು ಪರಾರಿಯಾದದ್ದನ್ನು ಸ್ಥಳೀಯರು ನೋಡಿದ್ದು, ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

    ಈ ಘಟನೆಯಿಂದ ಪಾಕಿಸ್ತಾನದಲ್ಲಿ ಜನರ ಆಕ್ರೋಶ ತೀವ್ರವಾಗಿದ್ದು, ಒಂದು ವೇಳೆ ಮೇಕೆಯು ಕೂಡ ತನ್ನ ನೋಟದಲ್ಲಿ ಸಾಧಾರಣವಾಗಿರಬೇಕಿತ್ತೇ ಎಂದು ಪ್ರಶ್ನಿಸುವ ಮೂಲಕ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ರನ್ನು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಾಕಿಸ್ತಾನದ ನಟಿ ಮಥಿರಾ ಕೂಡ ಸುದ್ದಿಯನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಪ್ರಾಣಿಗಳು ಸಹ ಬುರ್ಖಾ ಧರಿಸುವ ಅಗತ್ಯವಿದೆ ಎನ್ನುವ ಮೂಲಕ ಪ್ರಧಾನಿ ಇಮ್ರಾನ್​ ಖಾನ್​ ಕಾಲೆಳೆದಿದ್ದಾರೆ.

    ಬೆತ್ತಲೆ ಪ್ರಾಣಿಗಳು ಸಹ ಪುರುಷರ ಮೇಲೆ ಪ್ರಭಾವ ಬೀರುತ್ತದೆಯೇ? ಇದೀಗ ನಮ್ಮ ಹ್ಯಾಂಡ್​​ಸಮ್​ ಪ್ರಧಾನಿ ಸಹ ಸಂಪೂರ್ಣ ಮುಚ್ಚಿಕೊಳ್ಳುವಂತೆ ಮೇಕೆಗಳನ್ನು ಸಹ ಕೇಳುತ್ತಾರೆ. ಏಕೆಂದರೆ, ಕೆಲ ಅಮಾಯಕರು ಅದರಿಂದ ಪ್ರಚೋದನೆಗೆ ಒಳಗಾಗಬಹುದು ಎಂದು ಟ್ವಿಟರ್​ ಬಳಕೆದಾರರೊಬ್ಬರು ಪ್ರಧಾನಿ ಹೇಳಿಕೆಗೆ ವ್ಯಂಗ್ಯವಾಗಿವಾಡಿದ್ದಾರೆ.

    ಹಿಂದೊಮ್ಮೆ ಎಚ್​​ಬಿಒ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಪಾಕಿಸ್ತಾನದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವ ಕುರಿತು ಮಾತನಾಡಿದ್ದ ಇಮ್ರಾನ್​ ಖಾನ್​, ಮಹಿಳೆಯರು ಧರಿಸುವ ಉಡುಗೆಯೇ ಕಾರಣ ಎಂದಿದ್ದರು. ಮಹಿಳೆಯರು ತುಂಡುಡುಗೆ ತೊಡುತ್ತಾರೆ. ಇದು ಪುರಷರ ಮೇಲೆ ಪ್ರಭಾವ ಬೀರುತ್ತದೆ. ಏಕೆಂದರೆ ಮಾನವರು ರೋಬೋಟ್​ಗಳಲ್ಲ. ಬಟ್ಟೆ ಧರಿಸುವ ಸಾಮಾನ್ಯ ತಿಳುವಳಿಕೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಮ್ರಾನ್​ ಹೇಳಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. (ಏಜೆನ್ಸೀಸ್​)

    Tokyo Olympic 2020: ಕಾಂಡೋಮ್​ ಬಳಸಿ ಪದಕ ಗೆದ್ದೆ ಎಂದ ಒಲಿಂಪಿಕ್ಸ್​ ಸ್ಪರ್ಧಿ! ಹೀಗಿದೆ ಆಕೆ ಕೊಟ್ಟ ವಿವರಣೆ

    ಹಿರಿಯ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದ್ರೂ ನಿಲ್ಲದ ಲಂಚದ ವ್ಯಾಮೋಹ: ಮತ್ತೆ ಸಿಕ್ಕಿಬಿದ್ದ ಮಹಿಳಾ ಇನ್ಸ್​ಪೆಕ್ಟರ್​!

    ಸಚಿವ ಸಂಪುಟ ವಿಳಂಬ: ದೆಹಲಿ ತಲುಪದ ಪ್ರಾಶಸ್ತ್ಯ ಪಟ್ಟಿ; ಆ ಬಳಿಕವಷ್ಟೇ ಸ್ಥಾನ ಗಟ್ಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts