More

    ಹುಡುಗಿಯನ್ನು ಕಾಪಾಡಲು ಹೋಗಿ ಬಾವಿಗೆ ಬಿದ್ದ 30 ಮಂದಿ: ನಾಲ್ವರು ಸಾವು, ಮುಂದುವರಿದ ರಕ್ಷಣಾ ಕಾರ್ಯ

    ವಿದಿಶಾ: ಬಾವಿಗೆ ಬಿದ್ದ ಹುಡುಗಿಯನ್ನು ಕಾಪಾಡಲು ಹೋಗಿ 30 ಮಂದಿ ಬಾವಿಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಗುರುವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳು ಹೊರತುಪಡಿಸಿದರೆ,​ ಎಲ್ಲರೂ ಸುರಕ್ಷಿತವಾಗಿದೆ.

    ಬಾವಿಗೆ ಹುಡುಗಿಯನ್ನು ರಕ್ಷಿಸಲು ಗ್ರಾಮಸ್ಥರು ಪ್ರಯತ್ನ ಮಾಡುವಾಗ ಭಾರದಿಂದ ಬಾವಿಯ ಮೇಲ್ಛಾವಣಿ ಕುಸಿದು ಗ್ರಾಮದ ಜನರು ಬಾವಿ ಒಳಗೆ ಬಿದ್ದಿದ್ದಾರೆ. ಘಟನೆ ವಿದಿಶಾ ಜಿಲ್ಲೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗಂಜ್​ ಬಸೋಡಾದಲ್ಲಿ ನಡೆದಿದೆ. ತಕ್ಷಣವೇ 20 ಮಂದಿಯನ್ನು ರಕ್ಷಿಸಲಾಯಿತು. ಇದಾದ ಕೆಲವೇ ಕ್ಷಣಗಳ ಬಳಿಕ ಇನ್ನೂ 10 ಮಂದಿಯ ಜೀವ ಕಾಪಾಡಲಾಗಿದೆ. ಘಟನೆಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ. ರಕ್ಷಣೆಗೆ ಒಳಗಾದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದರಲ್ಲಿ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿರಿ: ಮಹಿಳೆಯರು ಒಬ್ಬಂಟಿಯಾಗಿ ಸುತ್ತಾಡುವಂತಿಲ್ಲ, ಗಂಡಸರು ಗಡ್ಡ ತೆಗೆಯುವಂತಿಲ್ಲ! ಹೇಗಿರಲಿದೆ ಗೊತ್ತಾ ಅಫ್ಘಾನ್​ನಲ್ಲಿ ತಾಲಿಬಾನ್ ಆಡಳಿತ?

    ಘಟನೆಯು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್​ ಗಮನಕ್ಕೂ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ಬಗ್ಗೆ ತಿಳಿದಿದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆಯಲ್ಲಿ ಸಂಪರ್ಕದಲ್ಲಿದ್ದೇನೆಂದು ತಿಳಿಸಿದ್ದಾರೆ.

    ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಸ್ಥಳೀಯರೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿವೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಗೆಗೂ ಸಿಎಂ ಆದೇಶ ಮಾಡಿದ್ದಾರೆ. ಅಲ್ಲದೆ, ಸಂತ್ರಸ್ತರಿಗೆ ಉತ್ತಮವಾದ ಚಿಕಿತ್ಸೆ ಕೊಡಿಸುವಂತೆಯೂ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

    ಪೆಟ್ರೋಲ್​-ಡೀಸೆಲ್​ ದರವನ್ನು ಏಕೆ ಕಡಿತಗೊಳಿಸಲಾಗದು?: ನೀತಿ ಆಯೋಗದ ಸಿಇಒ ಹೇಳಿದ್ದು ಹೀಗೆ

    ಗಾಂಧಿ-ತಿಲಕರ ವಿರುದ್ಧ ಬಳಕೆಯಾದ ಕಾನೂನು ಈಗೇಕೆ?: ದೇಶದ್ರೋಹ ಕಾಯ್ದೆ ದುರ್ಬಳಕೆ ವಿರುದ್ಧ ಸುಪ್ರೀಂಕೋರ್ಟ್ ಗರಂ

    ಅತಿಥಿಯಾದ ಹರ್ಷಿಕಾ ಪೂಣಚ್ಚ; ಕಟ್ಲೆ ಬಳಗಕ್ಕೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts