More

    ಇಬ್ಬರು ವಿದ್ಯಾರ್ಥಿಗಳೊಂದಿಗೆ ಸೇರಿ 55 ಲಕ್ಷ ರೂ. ಎಗರಿಸಿದ ಮೆಕಾನಿಕ್​ ಸಿಕ್ಕಿಬಿದ್ದಿದ್ದೇ ರೋಚಕ!

    ಹೈದರಾಬಾದ್​: ಮಧಪುರ್​ ಕಾರು ಸರ್ವೀಸ್​ ಕೇಂದ್ರದಿಂದ ಬರೋಬ್ಬರಿ 55 ಲಕ್ಷ ರೂಪಾಯಿ ನಗದ ಹಣವನ್ನು ಕದ್ದು ಪರಾರಿಯಾಗಿದ್ದ ಮೂವರು ಖದೀಮರನ್ನು ವಿಶೇಷ ಕಾರ್ಯಾಚರಣೆ ತಂಡದ ಸಹಾಯದಿಂದ ಮಧಪುರ್​ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಕದ್ದ ಎಲ್ಲ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಂಧಿತರನ್ನು ಮೆಕಾನಿಕ್​ ಮೊಹಮ್ಮದ್​ ತಾಹೆರ್​ (20) ಮತ್ತು 19 ವರ್ಷದ ಇಬ್ಬರು ವಿದ್ಯಾರ್ಥಿಗಳಾದ ಸೈಯೆದ್​ ಜಾವೇದ್​ ಮತ್ತು ಸೈಫ್​ ಮೊಹಿದ್ದೀನ್​ ಎಂದು ಗುರುತಿಸಲಾಗಿದೆ. ಎಲ್ಲರೂ ಕೂಡ ನಗರದ ಆಸೀಫ್​ ನಗರದ ನಿವಾಸಿಗಳು.

    ಆಗಿದ್ದೇನು?
    ಡಿಸೆಂಬರ್​ 10ರಂದು ಮಧಪುರ್​ನ ನೂರು ಅಡಿ ರಸ್ತೆಯ ಬಳಿಯಿರುವ ಮಲ್ಟಿ ಬ್ರ್ಯಾಂಡ್​ ಲಕ್ಷುರಿ ಕಾರ್​ ಸರ್ವೀಸ್ ಶ್ರೀ ಮೋಟರ್ಸ್​ ಮಾಲೀಕ ಅಲ್ಲಾಂ ಶ್ರೀಕಾಂತ್​ರಿಂದ ಪೊಲೀಸರು ದೂರು ಒಂದನ್ನು ಸ್ವೀಕರಿಸುತ್ತಾರೆ. ಡಿ.9ರಂದು ತನ್ನ ಕಚೇರಿಯಲ್ಲಿ ಲಾಕರ್​ನಲ್ಲಿ 55 ಲಕ್ಷ ರೂ. ನಗದು ಇಟ್ಟಿದೆ. ಅಂದು ವಾಚ್​ಮನ್​ ಬಾಲರಾಜು ಎಂಬುವರು ರಾತ್ರಿ ಪಾಳಿ ಕೆಲಸದಲ್ಲಿದ್ದರು. ಡಿ.10ರ ಬೆಳಗ್ಗೆ ಕಚೇರಿಗೆ ಬಂದು ನೋಡಿದಾಗ ಲಾಕರ್​ ಮುರಿದಿರುವುದು ಕಣ್ಣಿಗೆ ಬಿತ್ತು. ಅದರಲ್ಲಿ ಹಣವೂ ಕೂಡ ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ವ್ಯಕ್ತಿಯೊಬ್ಬ ಹಿಂಬಾಗಿಲಿನ ಸ್ಕ್ರೀವ್​ ಬಿಚ್ಚಿ, ರೂಮಿನೊಳಗೆ ಪ್ರವೇಶಿಸಿ, ಲಾಕರ್ ಹೊಡೆದು, ಹಣ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮಧಪುರ್​ ಪೊಲೀಸರು ಮೊದಲು ಕಾರು ಸರ್ವೀಸ್​ ಕೇಂದ್ರದಲ್ಲಿದ್ದ 35 ಕೆಲಸಗಾರರನ್ನು ವಿಚಾರಣೆ ನಡೆಸಿದ್ದಾರೆ. ತೀವ್ರ ವಿಚಾರಣೆ ನಡೆಸಿದ ಬಳಿಕ ತಾಹೇರ್​ ಎಂಬಾತ ತನ್ನ ಇಬ್ಬರು ಸ್ನೇಹಿತರಾದ ಸೈಯೆದ್​ ಜಾವೇದ್​ ಮತ್ತು ಸೈಫ್​ ಮೊಹಿದ್ದೀನ್​ ನೆರವಿನಿಂದ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

    ಆರೋಪಿಗಳಾದ ತಾಹೇರ್​ ಮತ್ತು ಜಾವೇದ್​ ಬಳಿಯಿಂದ ಪೊಲೀಸರು ತಲಾ 20 ಲಕ್ಷ ರೂ. ವಶಕ್ಕೆ ಪಡೆದುಕೊಂಡರೆ, ಮೊಹಿದ್ದೀನ್​ ಮನೆಯಲ್ಲಿ 15 ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್​)

    VIDEO| ಬಟ್ಟೆ ಜಾರಿ ಕೆಳಗೆ ಬೀಳ್ತಿದ್ರು ಗಮನಿಸದ ನಟಿ ಪಾಯಲ್: ಮತ್ತೊಮ್ಮೆ ಟ್ರೋಲ್​ ಆದ ಹಾಟ್​ ಬ್ಯೂಟಿ​

    ಗ್ಯಾಂಗ್‌ರೇಪ್‌ ಆಯ್ತೆಂದು ಯುವತಿ ದೂರು: ಇದ್ದ ಕೆಲಸವೆಲ್ಲಾ ಬಿಟ್ಟು ತನಿಖೆ ಮಾಡಿದ ಪೊಲೀಸರಿಗೆ ಕಾದಿತ್ತು ಭಾರಿ ಶಾಕ್‌

    ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡವೆಂದ ಮಾಜಿ ಸಿಎಂ ಎಚ್​ಡಿಕೆ ಕೊಟ್ಟ ಕಾರಣ ಹೇಗಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts