More

    ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದ ಬಿಜೆಪಿ ಸಂಸದರಿಬ್ಬರ ರಾಜೀನಾಮೆ

    ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಬಲ 77 ರಿಂದ 75ಕ್ಕೆ ಕುಸಿದಿದೆ. ಬಂಗಾಳದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ದಾಖಲಿಸಿರುವ ಬಿಜೆಪಿ ಸಂಸದರಿಬ್ಬರು ತಮ್ಮ ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

    ಬಿಜೆಪಿ ಹೈಕಮಾಂಡ್​ ಆದೇಶದ ಮೇರೆಗೆ ಇಬ್ಬರು ರಾಜೀನಾಮೆ ನೀಡಿದ್ದಾರೆ. ಇದನ್ನು ಗೇಲಿ ಮಾಡಿರುವ ತೃಣಮೂಲ ಕಾಂಗ್ರೆಸ್​, ಲೋಕಸಭೆಯಲ್ಲಿ ಸೇಫ್​ ಆಗಿರಲು ಬಿಜೆಪಿ ಈ ಆಟವಾಡುತ್ತಿದೆ ಎಂದಿದೆ. ಅಲ್ಲದೆ, ಬಂಗಾಳದ ಎಲ್ಲಾ ಬಿಜೆಪಿ ಶಾಸಕರಿಗೆ ಸೆಕ್ಯುರಿಟಿ ನೀಡುವ ಮೂಲಕ ಬಿಜೆಪಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.

    ಬಂಗಾಳದಲ್ಲಿ ಸರ್ಕಾರ ರಚಿಸುವ ಭರವಸೆಯೊಂದಿಗೆ ಪಕ್ಷದ ಆದೇಶದಂತೆ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಿದ ಐವರು ಸಂಸದರಲ್ಲಿ ನಿಶಿತ್​ ಪ್ರಾಮಾಣಿಕ್​ ಮತ್ತು ಜಗನ್ನಾಥ್​ ಸರ್ಕಾರ ಸಹ ಒಳಗೊಂಡಿದ್ದರು. ನಿಶಿತ್ ಮತ್ತು ಜಗನ್ನಾಥ್​ ವಿಜಯಶಾಲಿ ಸಹ ಆದರು. ಆದರೆ, ಕೇವಲ 77 ಸ್ಥಾನಗಳು ಬಂದಿದ್ದರಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಿಶಿತ್​ ಮತ್ತು ಜಗನ್ನಾತ್​ ಸಂಸತ್ತಿಗೆ ಹೆಚ್ಚು ಉಪಯುಕ್ತ ಎಂದು ಹೇಳಿ ಬಿಜೆಪಿ ಹೈಕಮಾಂಡ್​ ರಾಜೀನಾಮೆ ಕೊಡಿಸಿದೆ.

    ಸಂಸದರಾಗಿ ನಿಶಿತ್​ ಮತ್ತು ಸರ್ಕಾರ್ ಇಬ್ಬರೂ ಕೇಂದ್ರ ಭದ್ರತಾ ವ್ಯಾಪ್ತಿಯನ್ನು ಹೊಂದಿದ್ದಾರೆ. ಬಿಜೆಪಿಯ ನಂದಿಗ್ರಾಮ ಶಾಸಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿಗೆ ಝಡ್​ ಪ್ಲಸ್ ಭದ್ರತೆ ಕೊಡಲಾಗಿದೆ.

    ಚುನಾವಣಾ ಫಲಿತಾಂಶ ಬಂದಾಗಿನಿಂದ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಲೇ ಇದೆ. ಹೀಗಾಗಿ ಬಿಜೆಪಿ ಶಾಸಕರಿಗೆ ಭದ್ರತೆಯನ್ನು ನೀಡಲಾಗಿದೆ. ಹಿಂಸಾಚಾರದ ಹಿಂದೆ ಟಿಎಂಸಿ ಕೈವಾಡ ಇದೆ ಎಂದು ಬಿಜೆಪಿ ಆರೋಪ ಮಾಡಿದೆ. (ಏಜೆನ್ಸೀಸ್​)

    ವೈರಲ್​ ಆಗ್ತಿದೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​-ನಟಿ ರೇಖಾ ಕುರಿತ ಸ್ವಾರಸ್ಯಕರ ಸುದ್ದಿ!

    ಇದನ್ನು ನೋಡಿ ಅಳಬೇಕೋ ಅಥವಾ ನಗಬೇಕೋ ಎಂದು ಗೊತ್ತಾಗ್ತಿಲ್ಲ ಎಂದ ಯುಪಿ ಮಾಜಿ ಸಿಎಂ!

    ಹಳ್ಳಿಗಳಿಗೆ ಕರೊನಾ ಕಾಳ್ಗಿಚ್ಚು! ಸೋಂಕು ವ್ಯಾಪಿಸುವ ಬಗ್ಗೆ ಕೇಂದ್ರದಿಂದ ರಾಜ್ಯಗಳಿಗೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts