More

  ಮಗು ಜತೆ 18ನೇ ವಯಸ್ಸಲ್ಲೆ ಬೀದಿಪಾಲಾದ ಯುವತಿ: ಗಂಡ, ತವರು ಮನೆ ಕೈಕೊಟ್ರೂ ಪುಟಿದೆದ್ದವಳ ಕತೆ ರೋಚಕ!

  ತಿರುವನಂತಪುರಂ: ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಅಥವಾ ತುಂಬಾ ನಂಬಿರುವಂತಹ ವ್ಯಕ್ತಿ ಮೋಸ ಮಾಡಿ, ಜೀವನವೇ ಸಾಕು ಎಂದೆನಿಸಿದಾಗ, ಯಾವುದೇ ಆತುರದ ಹೆಜ್ಜೆಯನ್ನು ಇಡುವ ಬದಲು ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಫಲಿತಾಂಶ ಯಾವ ರೀತಿ ಇರುತ್ತದೆ ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

  ಹದಿನೆಂಟನೇ ವಯಸ್ಸಿನಲ್ಲಿ 6 ತಿಂಗಳ ಮಗುವಿನೊಂದಿಗೆ ಗಂಡ ಮತ್ತು ಆತನ ಕುಟುಂಬದಿಂದಲೇ ಬೀದಿಗೆ ಬಿದ್ದ ಯುವತಿ, ಆಶ್ರಯ ಕೋರಿ ತವರು ಮನೆಗೆ ಹೋಗುತ್ತಾಳೆ. ಆದರೆ, ಅವರ ಇಷ್ಟದ ವಿರುದ್ಧವಾಗಿ ಮದುವೆ ಆದ್ದರಿಂದ ಅಲ್ಲಿಯೂ ಆಕೆಗೆ ಯಾವುದೇ ಭರವಸೆ ಸಿಗುವುದಿಲ್ಲ. ಕೊನೆಗೆ ಅಜ್ಜಿಯ ನೆರವಿನಲ್ಲಿ ಬೆಳೆಯುವ ಯುವತಿ ಜೀವನದಲ್ಲಿ ನಾನು ಮತ್ತೆ ಎದ್ದು ನಿಲ್ಲಬೇಕೆಂಬ ಗುರಿಯೊಂದಿಗೆ ಮುನ್ನಡೆದು ಇಂದು ಕೇರಳದ ವರ್ಕಲಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಆಗಿ ನೇಮಕವಾಗಿದ್ದಾರೆ.​ ಆಕೆಯ ಹೆಸರೇ ಆನಿ ಶಿವ. ಕಂಜಿರಮ್​ಕುಲಮ್​ ನಿವಾಸಿಯಾಗಿರುವ ಆನಿ ಕೇವಲ 14 ವರ್ಷಗಳಲ್ಲೇ ತಮ್ಮ ಜೀವನವನ್ನು ಬದಲಾಯಿಸಿಕೊಂಡು ಆತ್ಮವಿಶ್ವಾಸ ಮತ್ತು ಮನೋಬಲದ ನಿಜವಾದ ಮಾದರಿಯಾಗಿ ನಮ್ಮೆಲ್ಲರ ಎದುರು ನಿಂತಿದ್ದಾರೆ.

  ಆನಿ ಶಿವ, ಕಂಜಿರಕುಲಮ್​ನ ಕೆಎನ್​ಎಮ್​ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಡಿಗ್ರಿ ವಿದ್ಯಾರ್ಥಿನಿಯಾಗಿರುವಾಗಲೇ ಕುಟುಂಬದ ವಿರೋಧದ ನಡುವೆಯೂ ತನ್ನ ಬಾಯ್​ಫ್ರೆಂಡ್​ ಜತೆಯಲ್ಲಿ ಜೀವಿಸಲು ಆರಂಭಿಸುತ್ತಾಳೆ. ಇದಾದ ಬಳಿಕ ಆನಿಗೆ ಮಗುವಾದಾಗ ಬಾಯ್​ಫ್ರೆಂಡ್​ ಆಕೆಯನ್ನು ಮಗುವಿನ ಜತೆಯಲ್ಲಿ ಬೀದಿಯಲ್ಲಿ ಬಿಟ್ಟು ಹೋಗುತ್ತಾನೆ. ಈ ವೇಳೆ ದಿಕ್ಕುತೋಚದ ಆನಿ ತವರು ಮನೆಗೆ ಬರುತ್ತಾಳೆ. ಆದರೆ, ಆಕೆಯ ಕುಟುಂಬ ಅವಳನ್ನು ಒಪ್ಪಿಕೊಳ್ಳುವುದಿಲ್ಲ.

  ಇದಾದ ಬಳಿಕ ಆನಿ ತನ್ನ ಮಗನೊಂದಿಗೆ ಅಜ್ಜಿ ಮನೆಯ ಹಿಂದಿನ ಶೆಡ್​ ಒಂದರಲ್ಲಿ ವಾಸಿಸಲು ಆರಂಭಿಸುತ್ತಾರೆ. ಇಲ್ಲಿಂದಾಚೆಗೆ ಜೀವನ ನಿರ್ವಹಿಸಲು ಎಲ್ಲ ರೀತಿಯ ಕೆಲಸವನ್ನು ಆನಿ ಆರಂಭಿಸುತ್ತಾರೆ. ಮಸಾಲೆ ಪುಡಿ ಮತ್ತು ಸಾಬೂನು ಮಾರುತ್ತಾರೆ, ಇನ್ಶುರೆನ್ಸ್​ ಏಜೆಂಟ್​ ಆಗಿ ಕೆಲಸ ಮಾಡುತ್ತಾರೆ, ಮನೆಗಳಿಗೆ ಅಗತ್ಯ ವಸ್ತುಗಳನ್ನು ರವಾನಿಸುತ್ತಾರೆ, ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್​ ಮತ್ತು ರೆಕಾರ್ಡ್ಸ್​ಗಳನ್ನು ಮಾಡಿಕೊಡುತ್ತಾರೆ ಮತ್ತು ಹಬ್ಬದ ದಿನ ಮೈದಾನಗಳಲ್ಲಿ ನಿಂಬೆ ರಸ ಮತ್ತು ಐಸ್ ಕ್ರೀಮ್ ಮಾರಾಟ ಮಾಡುವ ಮಾರಾಟಗಾರರಿಗೆ ಸಹಾಯ ಮಾಡುತ್ತಾರೆ.

  ಈ ರೀತಿಯ ಬಿಜಿ ಜೀವನದ ನಡುವೆ ಆನಿ ಸಮಾಜಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸುತ್ತಾರೆ. ತನ್ನ ಪುಟ್ಟ ಮಗ ಶಿವಸೂರ್ಯನೊಂದಿಗೆ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತಲೇ ಇದ್ದರು. ತನ್ನ ಕೇಶರಾಶಿಗೆ ಕತ್ತರಿ ಹಾಕಿ ಪುರಷರಂತೆ ಕಾಣುತ್ತಿದ್ದರು. ಆದ್ದರಿಂದ, ಜನರು ಆನಿ ಅವರು ಶಿವಸೂರ್ಯನಿಗೆ ತಂದೆ ಅಥವಾ ಸಹೋದರ ಎಂದು ಭಾವಿಸಿದ್ದರು.

  ಮಹಿಳಾ ಎಸ್​ಎ ಪರೀಕ್ಷೆ ತೆಗೆದುಕೊಳ್ಳುವಂತೆ ಫ್ರೆಂಡ್​​ ಒಬ್ಬರು ನೀಡಿದ ಸಲಹೆ ಮೇರೆಗೆ ಆನಿ 2014ರಲ್ಲಿ ತಿರುವನಂತಪುರಂನಲ್ಲಿ ಕೋಚಿಂಗ್ ಸೆಂಟರ್​ಗೆ ಸೇರುತ್ತಾರೆ. ತರಬೇತಿಯ ಬಳಿಕ ಮಹಿಳಾ ಪೊಲೀಸ್​ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲಿ ಯಶಸ್ಸನ್ನು ಕಾಣುವ ಆನಿ 2016ರಲ್ಲಿ ಮಹಿಳಾ ಪೊಲೀಸ್​ ಪರೀಕ್ಷೆಯನ್ನು ಪಾಸ್​ ಮಾಡಿ 2019ರಲ್ಲಿ ಎಸ್​ಐ ಆಗಿ ನೇಮಕವಾಗುತ್ತಾರೆ. 2021ರ ಜೂನ್ 25ರಂದು ವರ್ಕಲಾ ಠಾಣೆಯಲ್ಲಿ ಆಕೆಯನ್ನು ಮೊದಲು ಎಸ್‌ಐ ಆಗಿ ನೇಮಿಸಲಾಯಿತು.

  ಫೇಸ್​ಬುಕ್​ನಲ್ಲಿ ತನ್ನ ಜೀವನವನ್ನು ವಿವರಿಸಿರುವ ಆನಿ, “ನಾನು ಯಾವುದೇ ಕಾರಣಕ್ಕೂ ಮಾನಸಿಕವಾಗಿ ಹಳಿ ತಪ್ಪಲು ಸಾಧ್ಯವಾಗಲಿಲ್ಲ. ಈ ಎಲ್ಲ ಹೋರಾಟಗಳು ಮತ್ತು ಕಷ್ಟಗಳ ನಂತರ, ಒಬ್ಬ ಮಹಿಳೆ ತನ್ನ ಜೀವನವನ್ನು ಮತ್ತೆ ಹಳಿಗೆ ತಂದಾಗ, ಜನರು ಕರುಣೆ ತೋರಿಸುತ್ತಾರೆ ಮತ್ತು ಅವರ ಬಗ್ಗೆ ಸುಳ್ಳು ಹರಡುತ್ತಾರೆ. ಆದ್ದರಿಂದ, ನನ್ನ ಮಗ ಮತ್ತು ನಾನು ಇಲ್ಲಿ ಹಿರಿಯ ಸಹೋದರ ಮತ್ತು ಕಿರಿಯ ಸಹೋದರನಾಗಿ ವಾಸಿಸುತ್ತಿದ್ದೇವೆ” ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

  ಗಡಿಯಲ್ಲಿ ಹೆಚ್ಚುತ್ತಿದೆ ಸೇನಾ ಚಟುವಟಿಕೆ; ಭಾರತದಿಂದ 50 ಸಾವಿರ ಹೆಚ್ಚುವರಿ ಟ್ರೂಪ್ ನಿಯೋಜನೆ

  ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

  ಸ್ಟಾರ್ಟ್ ಕ್ಯಾಮರಾ ಆ್ಯಕ್ಷನ್; ಜುಲೈನಲ್ಲಿ ಶೂಟಿಂಗ್ ಪರ್ವ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts