More

    16ರ ಹುಡುಗಿಗೆ ಅರಿವಿತ್ತು, ಆರೋಪಿಯು ಕಾಂಡೋಮ್​ ಬಳಸಿದ್ದ ಎಂದು ಬಾಂಬೈ ಹೈಕೋರ್ಟ್​ನಿಂದ ಜಾಮೀನು!

    ಮುಂಬೈ: ಲೈಂಗಿಕ ಕ್ರಿಯೆ ನಡೆಸುವಾಗ ಆರೋಪಿ ಕಾಂಡೋಮ್​ ಬಳಕೆ ಮಾಡಿದ್ದ ಮತ್ತು ಸಂತ್ರಸ್ತೆಗೆ ಕ್ರಿಯೆಯ ಪರಿಣಾಮದ ಬಗ್ಗೆ ಮೊದಲೇ ತಿಳಿದಿತ್ತು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಅತ್ಯಾಚಾರ ಆರೋಪಿಗೆ ಬಾಂಬೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಸೆಪ್ಟೆಂಬರ್​ 9ರಂದು ಕೊಲ್ಹಾಪುರ್​ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದರು. ಅಂದಿನಿಂದ ಆತ ಜೈಲಿನಲ್ಲಿ ಇದ್ದನು. ಇದೀಗ ಜಾಮೀನು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್​ನ ನ್ಯಾಯಮೂರ್ತಿ ಸಿವಿ ಭದಾಂಗ್​ ನೇತೃತ್ವದ ಏಕಸದಸ್ಯ ಪೀಠ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

    ಸಂತ್ರಸ್ತೆ 18 ವರ್ಷ ವಯಸ್ಸಿಗಿಂತ ಕೆಳಗಿದ್ದು, ಪೊಕ್ಸೊ ಕಾಯ್ದೆ ಅಡಿಯಲ್ಲಿ ಈ ಪ್ರಕರಣ ಬಂದರೂ ಕೂಡ 16 ವರ್ಷದ ಸಂತ್ರಸ್ತೆಗೆ ತನ್ನ ಕ್ರಿಯೆಯಿಂದ ಮುಂದಾಗುವ ಪರಿಣಾಮದ ಬಗ್ಗೆ ಅರಿವಿತ್ತು ಎಂದು ನ್ಯಾಯಮೂರ್ತಿ ಭದಾಂಗ್​ ತಿಳಿಸಿದ್ದಾರೆ.

    ದೈಹಿಕ ಸಂಪರ್ಕ ಬೆಳೆಸಲು ಯಾವುದೇ ಒತ್ತಾಯವಾಗಲಿ ಅಥವಾ ಬಲವಂತವಾಗಲಿ ಮಾಡಿಲ್ಲ ಎಂಬುದನ್ನು ಸಾಕ್ಷ್ಯಾಧಾರಗಳು ಸೂಚಿಸುತ್ತಿವೆ. ಅಲ್ಲದೆ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಆರೋಪಿಯು ಲೈಂಗಿಕ ಕ್ರಿಯೆಯ ಸಮಯದಲ್ಲಿ ರಕ್ಷಣೆಯನ್ನು (ಕಾಂಡೋಮ್) ಸಹ ಬಳಸಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸುತ್ತಿರುವುದು ಗಮನಾರ್ಹವಾಗಿದೆ ಎಂದು ನ್ಯಾಯಮೂರ್ತಿ ಭದಾಂಗ್ ಅವರು ತೀರ್ಪು ನೀಡುವಾಗ ಈ ಅಂಶಗಳನ್ನು ಉಲ್ಲೇಖಿಸಿದ್ದಾರೆ.

    ಇದಿಷ್ಟೇ ಅಲ್ಲದೆ, ಆರೋಪಿ ಈಗಾಗಲೇ 2 ವರ್ಷ ಪೊಲೀಸ್​ ಕಸ್ಟಡಿಯಲ್ಲಿ ಶಿಕ್ಷೆ ಅನುಭವಿಸಿದ್ದು, ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆರೋಪಿಗೆ 25 ಸಾವಿರ ರೂ. ಶ್ಯೂರಿಟಿಯೊಂದಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    ಆರೋಪಿಯು ಸಂತ್ರಸ್ತೆಯ ಸ್ನೇಹಿತನ ಸಹೋದರನಾಗಿದ್ದು, ಆಕೆಗೆ ಪರಿಚಯವಿದ್ದ. 2019ರ ಮೇ ತಿಂಗಳಲ್ಲಿ ಸಂತ್ರಸ್ತೆಯನ್ನು ಆರೋಪಿ ಮನೆಗೆ ಕರೆದಿದ್ದ. ಪ್ರೀತಿ ಮಾಡುತ್ತಿರುವುದಾಗಿ ಹೇಳಿ ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ನಡೆಸಿದ್ದ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಳು. ಅಲ್ಲದೆ, ಇಬ್ಬರ ನಡುವಿನ ಸಂಬಂಧ ಕೆಲವು ತಿಂಗಳುಗಳ ಕಾಲ ಹಾಗೇ ಮುಂದುವರೆದಿತ್ತು. ಅಂತಿಮವಾಗಿ, ಸಂತ್ರಸ್ತೆಯ ತಂದೆಗೆ ಸಂಬಂಧದ ಬಗ್ಗೆ ತಿಳಿದು, ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಿದರು. ಬಳಿಕ ಆರೋಪಿಯ ಬಂಧನವು ಆಗಿತ್ತು.

    ಆರೋಪಿ ಪರ ವಾದ ಮಂಡಿಸಿದ ವಕೀಲ ಪರಸ್ ಯಾದವ್, ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿದ್ದರೂ ಆಕೆಗೆ ವಯಸ್ಸಾಗಿರುವುದರಿಂದ ಆಕೆ ಕೃತ್ಯದ ಸ್ವರೂಪ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ವಾದಿಸಿದ್ದರು. ಇಬ್ಬರ ಸಂಬಂಧವು ಒಮ್ಮತದಿಂದ ಕೂಡಿದೆ ಎಂದು ವೈದ್ಯಕೀಯ ವರದಿ ಸೂಚಿಸುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಆರ್ ಕಪಾಡ್ನಿಸ್, ಸಂತ್ರಸ್ತೆಯು ಪೊಕ್ಸೊ ಕಾಯ್ದೆ ವ್ಯಾಪ್ತಿಯಲ್ಲಿ ಬರುತ್ತಾಳೆ. ಕಾನೂನಿನ ಪ್ರಕಾರ ಆಕೆ ಇನ್ನು ಮಗು ಎಂದು ವಾದಿಸಿದರು ಮತ್ತು ಆರೋಪಿಯು ಅನೇಕ ಸಂದರ್ಭಗಳಲ್ಲಿ ಅವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿದರು.

    ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಅಂತಿಮವಾಗಿ 16 ವರ್ಷದ ಸಂತ್ರಸ್ತೆಗೆ ತನ್ನ ಕ್ರಿಯೆಯಿಂದ ಮುಂದಾಗುವ ಪರಿಣಾಮದ ಬಗ್ಗೆ ಅರಿವಿತ್ತು ಮತ್ತು ಇದು ಪರಸ್ಪರ ಒಮ್ಮತದ ಸಂಬಂಧ ಹಾಗೂ ಆರೋಪಿಯು ಕಾಂಡೋಮ್​ ಬಳಸಿದ್ದ. ಅಲ್ಲದೆ, ಎರಡು ವರ್ಷ ಶಿಕ್ಷೆಯನ್ನು ಈಗಾಗಲೇ ಅನುಭವಿಸಿದ್ದಾನೆ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಮಂಜೂರು ಮಾಡಿದೆ. (ಏಜೆನ್ಸೀಸ್​)

    ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಿದ ಪ್ರಕರಣ: ಶ್ರೀರಾಮ ಸೇನೆ ಸಂಘಟನೆಯ ನಾಲ್ವರು ಕಾರ್ಯಕರ್ತರ ಬಂಧನ

    ಮಾಂಸಾಹಾರಕ್ಕೆ ತಡೆ ಆರೋಪ: ಜೆಎನ್​ಯುನಲ್ಲಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ

    ಶೆಹಬಾಜ್​ಗೆ ಪಾಕಿಸ್ತಾನ ಚುಕ್ಕಾಣಿ?: ಶಾಂತಿ ಮಂತ್ರದ ಜತೆಯಲ್ಲೇ ಕುತೂಹಲ ಕೆರಳಿಸಿದ ಕಾಶ್ಮೀರ ತಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts