More

    ಮಹಾ ಸರ್ಕಾರಕ್ಕೆ ಮುಖಭಂಗ: ಸುಪ್ರೀಂನಿಂದ 12 ಬಿಜೆಪಿ ಶಾಸಕರ ಮೇಲಿನ 1 ವರ್ಷದ ಅಮಾನತು ರದ್ದು​

    ಮುಂಬೈ: ಅಸಭ್ಯ ವರ್ತನೆ ಆರೋಪದ ಮೇಲೆ ಬಿಜೆಪಿಯ 12 ಶಾಸಕರನ್ನು ಒಂದು ವರ್ಷದವರೆಗೆ ಅಮಾನತು ಮಾಡಿದ್ದ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್​ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ​ ರದ್ದುಗೊಳಿಸಿದೆ.

    ಅಧಿವೇಶನದ ನಂತರವೂ ಶಾಸಕರನ್ನು ಅಮಾನತು ಮಾಡುವುದು ಅಸಂವಿಧಾನಿಕ ಮತ್ತು ಅಕ್ರಮ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ. ಅಧಿವೇಶನಕ್ಕೆ ಮಾತ್ರ ಅಮಾನತುಗೊಳಿಸಬಹುದು ಎಂದು ನಿಯಮಗಳಿದ್ದರೂ, 12 ಶಾಸಕರನ್ನು ಮಾತ್ರ ಅಧಿವೇಶನದ ನಂತರವೂ ಒಂದು ವರ್ಷದವರೆಗೆ ಅಮಾನತುಗೊಳಿಸಲಾಗಿತ್ತು.

    ಕಳೆದ ಜುಲೈ 5 ರಂದು ವಿಧಾನಸಭೆಯ ಅಧಿವೇಶನದಲ್ಲಿ ನಡೆದ ಹೈಡ್ರಾಮದ ಬಳಿಕ 12 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿತ್ತು. ಸಭಾಧ್ಯಕ್ಷರ ಸಭಾಂಗಣದಲ್ಲಿ ಸ್ಪೀಕರ್​ ಭಾಸ್ಕರ್ ಜಾಧವ್ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಮಹಾರಾಷ್ಟ್ರ ಸರ್ಕಾರ ಆರೋಪ ಮಾಡಿತ್ತು.

    12 ಶಾಸಕರುಗಳಾದ ಸಂಜಯ್​ ಕುಟೆ, ಆಶೀಶ್​ ಶೆಲಾರ್​, ಅಭಿಮನ್ಯು ಪವಾರ್​, ಗಿರೀಶ್​ ಮಹಾಜನ್​, ಅತುಲ್​ ಭಟ್ಖಳ್ಖರ್​, ಪರಾಗ್​ ಅಲವಾನಿ, ಹರೀಶ್​ ಪಿಂಪಲೆ, ಯೋಗೇಶ್​ ಸಾಗರ್​, ಜಯ್​ ಕುಮಾರ್​ ರಾವತ್​, ನಾರಾಯಣ್​ ಕುಚೆ, ರಾಮ್​ ಸತ್ಪುಟೆ ಮತ್ತು ಬಂಟಿ ಭಂಗ್ಡಿಯಾ ಅವರನ್ನು ಅಮಾನತು ಮಾಡಲಾಗಿತ್ತು. ಶಾಸಕರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಮಂಡಿಸಿದರು ಮತ್ತು ಧ್ವನಿ ಮತದಿಂದ ಸ್ಪೀಕರ್​ ಅಂಗೀಕರಿಸಿದ್ದರು.

    ಇದಾದ ಬಳಿಕ ಈ ಆರೋಪ ಸುಳ್ಳು ಎಂದು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನಾವೀಸ್​ ಪ್ರತಿಪಾದಿಸಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ (ಇತರೆ ಹಿಂದುಳಿದ ವರ್ಗಗಳ) ಕೋಟಾದಲ್ಲಿ ಸರ್ಕಾರದ ಸುಳ್ಳನ್ನು ನಾವು ಬಹಿರಂಗಪಡಿಸಿದ್ದರಿಂದ ಸುಳ್ಳು ಆರೋಪ ಮಾಡಲಾಗಿದೆ. ಅಲ್ಲದೆ, ಪ್ರತಿಪಕ್ಷದ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ ಎಂದು ಫಡ್ನವಿಸ್ ಆರೋಪಿಸಿದ್ದರು.

    ಅಮಾನತಾಗಿದ್ದ ಶಾಸಕರು ತಮ್ಮ ಮೇಲಿನ ಅಮಾನತನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಇದೀಗ ತೀರ್ಪು ನೀಡಿರುವ ನ್ಯಾಯಾಲಯ ವಿಧಾನಸಭೆಯಿಂದಾಚೆಗೆ ಶಾಸಕರನ್ನು ಅಮಾನತು ಮಾಡುವುದು ಅಸಂವಿಧಾನಿಕ ಎಂದು ಹೇಳಿ, ಅಮಾನತನ್ನು ರದ್ದು ಮಾಡಿದೆ. ಕೋರ್ಟ್​ನ ಈ ತೀರ್ಪು ಮಹಾ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ. (ಏಜೆನ್ಸೀಸ್​)

    ಯುಎಸ್​/ಕೆನಡಾ ಗಡಿಯಲ್ಲಿ ಕೊರೆಯುವ ಚಳಿಗೆ ದುರಂತ ಸಾವಿಗೀಡಾದ ಭಾರತೀಯ ಕುಟುಂಬದ ಗುರುತು ಪತ್ತೆ

    Republic Day: ಏರ್​ಫೋರ್ಸ್​ ರೆಜಿಮೆಂಟ್​ ಮುನ್ನಡೆಸಿದ ತುಮಕೂರಿನ ಇಂಪನಾಶ್ರೀ! ಪ್ರಥಮಕ್ಕೆ ಮುನ್ನುಡಿ ಬರೆದ ವೈದ್ಯೆ

    ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಹುಟ್ಟುಹಬ್ಬದಂದು ಸಿಎಂ ಬಸವರಾಜ ಬೊಮ್ಮಾಯಿ ಸಂಕಲ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts