More

    ಬಾಲಕಿ ಕಾಪಾಡಲು ಹೋಗಿ ಬಾವಿಗೆ ಬಿದ್ದ ಗ್ರಾಮಸ್ಥರು: 11 ಮೃತದೇಹಗಳು ಹೊರಕ್ಕೆ, 19 ಮಂದಿಯ ರಕ್ಷಣೆ

    ವಿದಿಶಾ: ಬಾವಿಗೆ ಬಿದ್ದ ಬಾಲಕಿಯನ್ನು ಕಾಪಾಡಲು ಹೋಗಿ ಬಾವಿ ಪಾಲಾಗಿದ್ದ 30 ಮಂದಿಯಲ್ಲಿ 11 ಮಂದಿ ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ನಿನ್ನೆ 4 ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿತ್ತು. ಇದೀಗ 11 ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

    ಬಾವಿಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಗ್ರಾಮಸ್ಥರು ಪ್ರಯತ್ನ ಮಾಡುವಾಗ ಭಾರದಿಂದ ಬಾವಿಯ ಮೇಲ್ಛಾವಣಿ ಕುಸಿದು ಜನರು ಬಾವಿ ಒಳಗೆ ಬಿದ್ದಿದ್ದರು. ಘಟನೆ ವಿದಿಶಾ ಜಿಲ್ಲೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗಂಜ್​ ಬಸೋಡಾದಲ್ಲಿ ನಡೆದಿದೆ. 50 ಅಡಿ ಆಳದ ಬಾವಿಯಲ್ಲಿ 20 ಅಡಿ ನೀರಿದೆ.

    ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಇದೀಗ 11 ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದು, 19 ಮಂದಿಯನ್ನು ಈವರೆಗೆ ರಕ್ಷಣೆ ಮಾಡಲಾಗಿದೆ. ಬಾವಿ ಒಳಗಿನ ಅವಶೇಷಗಳ ಅಡಿಯಲ್ಲಿ ಯಾರಾದರೂ ಸಿಲುಕಿರುವ ಬಗ್ಗೆ ಸಂಶಯವಿಲ್ಲ. ಆದರೂ, ನೀರನೆಲ್ಲ ಖಾಲಿ ಮಾಡಿ ಅವಶೇಷಗಳನ್ನು ತೆಗೆದುಹಾಕುವ ಕೆಲಸ ನಡೆಯುತ್ತಿದೆ.

    ವಿದಿಶಾ ಉಸ್ತುವಾರಿ ಸಚಿವ ವಿಶ್ವಾಸ್​ ಸಾರಂಗ್​ ಮತ್ತು ಕಂದಾಯ ಸಚಿವ ಗೋವಿಂದ್​ ಸಿಂಗ್​ ರಜಪೂತ್​ ಸಹ ರಕ್ಷಣಾ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು. ಈ ಘಟನೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್​ ಗಮನಕ್ಕೂ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ಬಗ್ಗೆ ತಿಳಿದಿದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆಯಲ್ಲಿ ಸಂಪರ್ಕದಲ್ಲಿದ್ದೇನೆಂದು ತಿಳಿಸಿದ್ದಾರೆ.

    ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಸ್ಥಳೀಯರೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿವೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಗೆಗೂ ಸಿಎಂ ಆದೇಶ ಮಾಡಿದ್ದಾರೆ. ಅಲ್ಲದೆ, ಸಂತ್ರಸ್ತರಿಗೆ ಉತ್ತಮವಾದ ಚಿಕಿತ್ಸೆ ಕೊಡಿಸುವಂತೆಯೂ ಸೂಚನೆ ನೀಡಿದ್ದಾರೆ.

    ಘಟನೆ ಹಿನ್ನೆಲೆ ಏನು?
    ಗುರುವಾರ ಸಂಜೆ 6ರ ಸಮಯದಲ್ಲಿ ಬಾವಿಯೊಳಗೆ ಬಿದ್ದಿದ್ದ ಬಾಲಕಿಯನ್ನು ರಕ್ಷಿಸಲು ಗ್ರಾಮ ಕೆಲವು ಮಂದಿ ಒಳಗೆ ಇಳಿದಿದ್ದರು. ಈ ವೇಳೆ ಜನರು ಬಾವಿಯ ಸುತ್ತ ನಿಂತು ನೋಡುವಾಗ ಬಾವಿಯ ಮೇಲ್ಭಾಗ ಇದ್ದಕ್ಕಿದ್ದಂತೆ ಕುಸಿದು ಅನೇಕರು ನೀರಿನ ಒಳಗೆ ಸಿಲುಕಿದ್ದರು.

    5 ಲಕ್ಷ ಪರಿಹಾರ ಘೋಷಣೆ
    ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ 5 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೆ, ರಕ್ಷಣಾ ಸ್ಥಳದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

    ಪ್ರಿಯಕರನೊಂದಿಗೆ ಹೋಗಿದ್ದಾಕೆಯನ್ನು ಬೆತ್ತಲೆಗೊಳಿಸಿದ ಗಂಡ: ಆತನನ್ನು ಹೊತ್ತು ತಿರುಗುವಂತೆ ಹೇಳಿದ ಗ್ರಾಮಸ್ಥರು!

    ಮದ್ವೆಗೆ ಬರೋದಾದ್ರೆ ವಧು ಹತ್ರ ಮಾತನಾಡ್ಬಾರ್ದು, ಮೇಕಪ್​ ಮಾಡಿರಬಾರ್ದು, 6 ಸಾವಿರ ರೂ. ಗಿಫ್ಟ್​ ತರಬೇಕು!

    ಆ ಚಿತ್ರ ಒಪ್ಪಿಕೊಂಡಾಗ ಜೀವನದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ ಎಂದರು ಅಪ್ಪ… ಮನದಾಳ ಬಿಚ್ಚಿಟ್ಟ ಹೃತಿಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts