ಪ್ರಿಯಕರನೊಂದಿಗೆ ಹೋಗಿದ್ದಾಕೆಯನ್ನು ಬೆತ್ತಲೆಗೊಳಿಸಿದ ಗಂಡ: ಆತನನ್ನು ಹೊತ್ತು ತಿರುಗುವಂತೆ ಹೇಳಿದ ಗ್ರಾಮಸ್ಥರು!

ಅಹಮದಾಬಾದ್: ವಿವಾಹಿತೆಯೊಬ್ಬಳು ಪ್ರಿಯಕರನ ಜತೆ ಓಡಿಹೋಗಿದ್ದ ಕಾರಣಕ್ಕೆ ಆಕೆಯ ಗಂಡನೇ ಅತ್ಯಂತ ಹೇಯ ಎನಿಸುವ ಶಿಕ್ಷೆಯನ್ನು ನೀಡಿರುವ ಹೃದಯವಿದ್ರಾವಕ ಘಟನೆ ಗುಜರಾತ್​ನ ದಹೋಡ್​​ ಜಿಲ್ಲೆಯಲ್ಲಿ ನಡೆದಿದೆ. ಯುವತಿಯನ್ನು ಹುಡುಕಿ ಕರೆತಂದ ಗಂಡ ಗ್ರಾಮದ ಹಿರಿಯರೊಂದಿಗೆ ಸೇರಿ ಆಕೆಯನ್ನು ವಿವಸ್ತ್ರಳನ್ನಾಗಿ ಮಾಡಿ ಮೆರವಣಿಗೆ ಮಾಡಿದ್ದಾನೆ. ಮಾತ್ರವಲ್ಲದೇ ಈ ಘಟನೆಗೆ ವಿಡಿಯೋ ಕೂಡ ಮಾಡಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಗಮನಿಸಿದ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. 23 ವರ್ಷದ ವಿವಾಹಿತೆ ಕಳೆದ ತಿಂಗಳಲ್ಲಿ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. … Continue reading ಪ್ರಿಯಕರನೊಂದಿಗೆ ಹೋಗಿದ್ದಾಕೆಯನ್ನು ಬೆತ್ತಲೆಗೊಳಿಸಿದ ಗಂಡ: ಆತನನ್ನು ಹೊತ್ತು ತಿರುಗುವಂತೆ ಹೇಳಿದ ಗ್ರಾಮಸ್ಥರು!