More

    ಬರೋಬ್ಬರಿ 10 ವರ್ಷ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸರ್ಕಾರಿ ಸಂಬಳ ಗಿಟ್ಟಿಸಿದ ಈತ ಸಿಕ್ಕಿಬಿದ್ದಿದ್ದೇ ರೋಚಕ!

    ಪಟನಾ: ನಕಲಿ ಅಂಕಪಟ್ಟಿ ಅಥವಾ ಪ್ರಮಾಣ ಪತ್ರದ ಮೂಲಕ ಸರ್ಕಾರಕ್ಕೆ ಮೋಸ ಮಾಡಿ ವಿವಿಧ ವಿಭಾಗಗಳಲ್ಲಿ ಕೆಲಸ ಗಿಟ್ಟಿಸಿದ ವಂಚಕರನ್ನು ಪತ್ತೆಹಚ್ಚಿ ಕೆಲಸದಿಂದ ವಜಾಗೊಳಿಸಿದ ಸಾಕಷ್ಟು ಘಟನೆಗಳನ್ನು ನೋಡಿದ್ದೇವೆ. ಅದೇ ರೀತಿ ಬಿಹಾರದಲ್ಲಿ ವ್ಯಕ್ತಿಯೊಬ್ಬನನ್ನು ಕೆಲಸದಿಂದ ತೆಗೆಯಲಾಗಿದೆ. ಆದರೆ, ಈತ ಒಂದಲ್ಲ ಎರಡಲ್ಲ ಬರೋಬ್ಬರಿ 10 ವರ್ಷ ಸರ್ಕಾರಕ್ಕೆ ಮಂಕುಬೂದಿ ಎರಚಿರುವುದು ಬಯಲಾಗಿದೆ.

    ಬಿಹಾರದ ಕಥಿರಾದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ನಕಲಿ ಪ್ರಮಾಣ ಪತ್ರದ ಮೂಲಕ ಪಪ್ಪು ಮಂಡಲ್​ ಎಂಬಾತ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ. ತೇಲಿ ತೋಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಈತನ ವಿರುದ್ಧ ಪ್ರಣಾಪುರ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಲಿಖಿತ ದೂರಿನ ಆಧಾರದ ಮೇಲೆ ಮೇಲ್ವಿಚಾರಣಾ ಸಮಿತಿಯು ತನಿಖೆ ನಡೆಸಿದಾಗ ಪಪ್ಪು ಮಂಡಲ್​ ಮುಖವಾಡ ಕಳಚಿಬಿದ್ದಿದೆ.

    ಪಪ್ಪು ಮಂಡಲ್​ 2000ನೇ ಇಸವಿಯಲ್ಲಿ ಹತ್ತನೇ ತರಗತಿ ಮುಗಿಸಿದ್ದಾನೆ. ಅಂಕಪಟ್ಟಿಯಲ್ಲಿರುವಂತೆ ಆತ ಒಟ್ಟು 337 ಅಂಕ ಗಳಿಸಿದ್ದು, ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ. ಈತ 2012ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದ. ಆದರೆ, ಪಟನಾದಲ್ಲಿರುವ ಬಿಹಾರದ ಶಾಲಾ ಪರೀಕ್ಷಾ ಸಮಿತಿ ಪರಿಶೀಲಿಸಲು ಕೋರಿದ ವರದಿಯಲ್ಲಿ, ಪಪ್ಪು ಮಂಡಲ್​ 285 ಅಂಕಗಳನ್ನು ಗಳಿಸಿದ್ದು, ಅನುತ್ತೀರ್ಣರಾಗಿದ್ದಾರೆ ಎಂಬ ವರದಿ ನೀಡಲಾಗಿತ್ತು.

    ಬಳಿಕ ಈ ಬಗ್ಗೆ ದೂರು ದಾಖಲಾಗಿ ಸಂಪೂರ್ಣ ತನಿಖೆ ನಡೆಸಿದಾಗ ಆತನ ಪ್ರಮಾಣ ಪತ್ರವೆಲ್ಲ ಸಂಪೂರ್ಣ ನಕಲಿ ಎಂದು ತಿಳಿದುಬಂದಿದೆ. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡಿರುವುದು ಬಯಲಾಗಿದೆ. ಇದೀಗ ಆರೋಪಿ ವಿರುದ್ಧ ಪ್ರಣಾಪುರ್​ ಪೊಲೀಸ್​ ಠಾಣೆಯಲ್ಲಿ ಸೂಕ್ತ ಸೆಕ್ಷನ್​ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಆದರೆ, ಆರೋಪಿ ಪಪ್ಪು ಮಂಡಲ್ ಶಾಲೆಗೆ ರಜೆ ಕೋರಿ​ ತಲೆಮರೆಸಿಕೊಂಡಿದ್ದಾರೆ.

    ಈ ಪ್ರಕರಣದ ಬಗ್ಗೆ ಕಥಿರಾ ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ್​ ಪ್ರಸಾದ್​ ಗುಪ್ತ ಮಾತನಾಡಿದ್ದು, ಇದುವರೆಗೂ ಅಂತಹ ಯಾವುದೇ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಮೇಲ್ವಿಚಾರಣಾ ಸಮಿತಿಯಿಂದ ಪತ್ರವನ್ನು ಸ್ವೀಕರಿಸಿದ ನಂತರ, ಪಪ್ಪು ಮಂಡಲ್​ ಕೆಲಸವನ್ನು ರದ್ದು ಮಾಡಿ, ಆತನಿಂದ ಹಣದ ವಸೂಲಿಗಾಗಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಐಎನ್​ಎಸ್​ ರಣವೀರ್​ ನೌಕೆಯಲ್ಲಿ ಸ್ಫೋಟ: ಮೂವರು ನೌಕಾಪಡೆಯ ನಾವಿಕರ ಸಾವು

    ಇಂದು ಭಾರತ-ದ.ಆಫ್ರಿಕಾ ಮೊದಲ ಏಕದಿನ ಕದನ ; ಎಲ್ಲರ ಚಿತ್ತ ವಿರಾಟ್ ಕೊಹ್ಲಿಯತ್ತ

    ಅಭ್ಯರ್ಥಿಗಳ ಕ್ರಿಮಿನಲ್ ಮಾಹಿತಿ, ಅರ್ಜಿ ವಿಚಾರಣೆಗೆ ಒಪ್ಪಿಗೆ: ವೆಬ್​ಸೈಟ್​ನಲ್ಲಿ ಪ್ರಕಟಿಸುವುದನ್ನು ಖಾತ್ರಿಪಡಿಸಿಕೊಳ್ಳಲು ನಿರ್ದೇಶನ ನೀಡುವಂತೆ ಸುಪ್ರೀಂಗೆ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts