More

    ಈತ ಸಾಮಾನ್ಯನಲ್ಲ… 5 ನಿಮಿಷದಲ್ಲಿ 102 ಕೆಜಿ ಗಾತ್ರದ ಗುಂಡುಕಲ್ಲನ್ನು 30 ಬಾರಿ ಎತ್ತಿದ ಬಲಭೀಮ!

    ವಿಜಯವಾಡ: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಪ್ರತಿಯೊಂದು ಗ್ರಾಮಗಳಲ್ಲೂ ಬಹಳ ವಿಭಿನ್ನವಾಗಿ ಆಚರಿಸುತ್ತಾರೆ. ಕೆಲವು ಗ್ರಾಮಗಳಲ್ಲಿ ಸಾಂಪ್ರದಾಯಿಕ ಸ್ಪರ್ಧೆಯನ್ನು ಸಹ ಆಯೋಜಿಸಲಾಗುತ್ತದೆ. ಅದರಲ್ಲಿ ಗುಂಡುಕಲ್ಲು ಎತ್ತುವ ಸ್ಪರ್ಧೆಯು ಒಂದು.

    ಸಂಕ್ರಾಂತಿ ವಿಶೇಷವಾಗಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಫಿರಂಗಿಪುರಂ ವಲಯದ ವೇಮುಲುರಿಪಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಗುಂಡು ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಬಲಶಾಲಿಯೊಬ್ಬ ಸ್ಪರ್ಧೆ ನೋಡಲು ನೆರದಿದ್ದವರನ್ನು ಚಕಿತಗೊಳಿಸಿದ್ದಾರೆ.

    ನರಸರಾವ್​ಪೇಟೆ ಮಂಡಲದ ಪಾಮಿಡಿಪಡು ಮೂಲದ ಮದ್ದಲಿ ವೀರಾಂಜನೆ ಎಂಬಾತ 102 ಕೆಜಿ ಕಲ್ಲು ಗುಂಡನ್ನು ಕೇವಲ 5 ನಿಮಿಷದಲ್ಲಿ 30 ಬಾರಿ ಎತ್ತುವ ಮೂಲಕ ಎಲ್ಲರನ್ನು ಬೆರುಗು ಮಾಡಿದ್ದಲ್ಲದೆ, ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ.

    ವೀರಾಂಜನೆ ಅವರು ಪ್ರಥಮ ಬಹುಮಾನವಾಗಿ 5,116 ರೂಪಾಯಿ ಗೆದ್ದು ಬೀಗಿದರು. 5 ನಿಮಿಷದಲ್ಲಿ 28 ಬಾರಿ ಗುಂಡು ಎತ್ತುವ ಮೂಲಕ ಮಚವಾರಮ್​ ಮಂಡಲದ ಪಿನ್ನಲ್ಲಿ ಮೂಲದ ಕ್ಯಾಟ್​ ಶೋಭನ್ ಎರಡನೇ ಸ್ಥಾನ ಪಡೆದರೆ, ಎನ್​ ರಾಮಾಂಜನೇಯು ಎಂಬಾತ 27 ಬಾರಿ ಎತ್ತುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

    ಸ್ಥಳೀಯರಾದ ಭೀಮನಾಥ ಆಂಜಮ್ಮ ಹಾಗೂ ವೆಂಕಟ ಸುಬ್ಬಯ್ಯ ಅವರ ಸ್ಮರಣಾರ್ಥ ಸತತ 9ನೇ ವರ್ಷ ಗುಂಡು ಕಲ್ಲು ಎತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. (ಏಜೆನ್ಸೀಸ್​)​

    ನಟಿ ಸಮಂತಾ, ನಾಗಚೈತನ್ಯ ಮತ್ತು ನಾಗಾರ್ಜುನರನ್ನು ನೋಡಿ ಈ ವಿಚಾರವನ್ನು ಕಲಿಯಬೇಕಂತೆ!

    ಪೈಲಟ್​ ದಿಗ್ಭ್ರಮೆ… ಸೇನಾ ಹೆಲಿಕಾಪ್ಟರ್​ ಪತನಕ್ಕೆ ನಿಖರ ಕಾರಣ ತಿಳಿಸಿದ ತನಿಖಾಧಿಕಾರಿಗಳು!

    ವಾಡಿಕೆಗಿಂತ ಮುನ್ನವೇ ಬೇಸಿಗೆ ಶುರು?: ಉತ್ತರಕರ್ನಾಟಕದಲ್ಲಿ ತಾಪಮಾನ ಹೆಚ್ಚಳ ಈ ವರ್ಷ ಬೇಸಿಗೆ ಅವಧಿ 4 ತಿಂಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts