More

    ಮುಳ್ಳು ಹಂದಿ ಮೀನು ಪತ್ತೆ

    ಕಾರವಾರ: ನೆಲದ ಮೇಲೆ ಓಡಾಡುವ ಮುಳ್ಳು ಹಂದಿಯ ಸ್ವರೂಪದ ಮೀನೊಂದು ನಗರದ ಕೋಡಿಬಾಗ ಸಾಗರದರ್ಶನ ಹಾಲ್ ಹಿಂಭಾಗದ ಸಮುದ್ರದಲ್ಲಿ ದೊರಕಿದೆ. ಲೋಂಗ್ ಪೊರ್ಕಪಿನ್ ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಈ ಮೀನುಗಳ ಮುಳ್ಳು ನಂಜಿನಿಂದ ಕೂಡಿರುತ್ತವೆ. ಮನುಷ್ಯರಿಗೆ ತಾಗಿದರೆ ತುರಿಕೆ ಪ್ರಾರಂಭವಾಗುತ್ತದೆ. ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಜಗನ್ನಾಥ ರಾಠೋಡ್, ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ಮೀನನ್ನು ಗುರುತಿಸಿದ್ದು, ಹವಳದ ದಂಡೆಗಳಿರುವ ಪ್ರದೇಶದಲ್ಲಿ ಬೆಳೆಯುವ ಈ ಮೀನು ಕಾರವಾರ ಭಾಗದಲ್ಲಿ ಅಪರೂಪವಾಗಿದೆ. ಸೇವನೆಗೆ ಬಾರದು. ಚೀನಾದಲ್ಲಿ ಈ ಮೀನನ್ನು ಔಷಧಗಾಗಿ ಬಳಸುತ್ತಾರೆ ಎಂದು ಡಾ.ಹರಗಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts