More

    ಮಳೆ ಹಾನಿ: ಮನೆ ಬಿದ್ದವರಿಗೆ, ರೈತರಿಗೆ ತಕ್ಷಣ ಪರಿಹಾರ; ನ.26 ರಿಂದ ಎಚ್ಚರಿಕೆ ವಹಿಸಲು ಸೂಚನೆ

    ಬೆಂಗಳೂರು: ಕಳೆದ ಕೆಲವು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆ ಬಿದ್ದವರಿಗೆ ತಕ್ಷಣ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆ ನೀರು ಮನೆಗೆ ನುಗ್ಗಿದವರಿಗೂ ಪರಿಹಾರ ವಿತರಿಸಲಾಗುತ್ತಿದೆ. ರೈತರಿಗೆ ಬೆಳೆ ನಷ್ಟ ಪರಿಹಾರ ಬೇಗ ಸಿಗುವಂತೆ ಸೂಚನೆ ನೀಡಲಾಗಿದ್ದು, ಕಾಫಿ ಸೇರಿದಂತೆ ಎಲ್ಲಾ ಬೆಳೆಗಳಿಗೂ ಪರಿಹಾರ ನೀಡಲಾಗುತ್ತೆ ಎಂದು ಕಂದಾಯ ಸಚಿವ ಆರ್​.ಅಶೋಕ್​​ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್​, ಕೇಂದ್ರಕ್ಕೆ 900 ಕೋಟಿ ರೂ. ಎಸ್ಟಿಮೇಷನ್ ಕಳಿಸಲಾಗಿದೆ. ಎನ್​ಡಿಆರ್​ಎಫ್​ ಹಣವನ್ನು ಮೂರು ಪಟ್ಟು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ. ಮುಖ್ಯ ಮಂತ್ರಿಗಳೂ ಪರಿಹಾರದ ವಿಚಾರವಾಗಿ ಸಭೆ ಮಾಡಿದ್ದಾರೆ ಎಂದು ವಿವರಿಸಿದರು.

    ಇದನ್ನೂ ಓದಿ: ಬೆಳೆಯೆಲ್ಲಾ ಮಳೆಗೆ ಕೊಚ್ಚಿ ಹೋಯ್ತು…: ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ರೈತರ ಅಳಲು

    ಎಚ್ಚರವಾಗಿರಲು ಸೂಚನೆ: ರಾಜ್ಯಕ್ಕೆ 26 ರಿಂದ ಮತ್ತೊಂದು ಸೈಕ್ಲೋನ್ ಬೀಸಲಿದೆ. ಆದ್ದರಿಂದ ಇದೇ ತಿಂಗಳ 26, 27, 28 ರಂದು ಅಗತ್ಯ ಎಚ್ಚರಿಕೆ ವಹಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಎಚ್ಚರವಾಗಿರುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಅಶೋಕ್ ಹೇಳಿದ್ದಾರೆ.

    ಬಿಬಿಎಂಪಿ ಅಧಿಕಾರಿಗಳು ಸೈಕ್ಲೋನ್​​ಗೆ ಅಗತ್ಯ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದ್ದೇವೆ ಎಂದ ಅಶೋಕ್​, ವಿಧಾನ ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಕೆ ಆಗಿದೆ. ಇನ್ನೇನಿದ್ರೂ ಮತದಾನ, ಹಾಗಾಗಿ ಸೈಕ್ಲೋನ್ ಕಡೆ ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಸಿಖ್ಖರ ಬಗ್ಗೆ ನಾಲಿಗೆ ಹರಿಬಿಟ್ಟ ಕಂಗನಾಗೆ ದೆಹಲಿ ಬುಲಾವ್​​

    VIDEO| ಬರ್ತ್​ಡೇ ಪಾರ್ಟಿಗೆ ಟ್ರ್ಯಾಕ್ಟರ್​ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಪೋರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts