More

    ಲಾಕ್​ಡೌನ್​ ದಾಟಿ ಬಂದ್ಳು… ಕುದುರೆ ಏರಿ ಬಂದ್ಳು… ಚೆಲುವೆ ಮಹಾರಾಣಿ….

    ಬ್ರಿಟನ್‌: ಇದೀಗ ವಿಶ್ವದ ಬಹುತೇಕ ದೇಶಗಳಲ್ಲಿ ಲಾಕ್​ಡೌನ್​ ಸಡಿಲಿಕೆ ಆಗುತ್ತಿದೆ. ಕರೊನಾ ವೈರಸ್​ ಭೀತಿಯ ನಡುವೆಯೂ ಲಾಕ್​ಡೌನ್​ ಸಡಿಲಿಕೆ ಮಾಡುವುದು ಅನಿವಾರ್ಯ ಆಗಿರುವ ಹಿನ್ನೆಲೆಯಲ್ಲಿ, ಕೆಲವೊಂದು ಷರತ್ತುಗಳನ್ನು ವಿಧಿಸುವ ಮೂಲಕ ಆಯಾ ಸರ್ಕಾರಗಳು ಜನರ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ.

    ಅದೇ ರೀತಿ ಲಂಡನ್​ನಲ್ಲಿ ಕೂಡ ಲಾಕ್​ಡೌನ್​ ನಿಯಮ ಸಡಿಲಿಕೆಗೊಳಿಸಲಾಗಿದೆ. ವಾಣಿಜ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಕೂಲವಾಗುವಂತೆ ಲಾಕ್‌ಡೌನ್ ನಿಯಮಾವಳಿಗಳಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ಅಳವಡಿಸುವ ಮೂಲಕ ಇಲ್ಲಿ ಲಾಕ್​ಡೌನ್​ ಸಡಿಲಗೊಳಿಸಲಾಗಿದೆ. ದ

    ಇದನ್ನೂ ಓದಿ:  ರಾಷ್ಟ್ರ ರಾಜಧಾನಿ ಗಡಿ ಕ್ಲೋಸ್​: ಸದ್ಯ ದೆಹಲಿಗೆ ಪ್ರವೇಶವಿಲ್ಲ ಎಂದ ಸಿಎಂ ಕೇಜ್ರಿವಾಲ್

    ಬಡವ, ಬಲ್ಲಿದನೆಂಬ ಭೇದವಿಲ್ಲದೇ ಕರೊನಾ ವೈರಸ್​ ಇಲ್ಲಿಯವರೆಗೆ ಎಲ್ಲರನ್ನೂ ಮನೆಯ ಒಳಗೆ ಕುಳ್ಳರಿಸುವಂತೆ ಮಾಡಿತ್ತು. ಅದೇ ರೀತಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ವೈರಸ್​ ಭೀತಿಯಂತೆ ಬ್ರಿಟನ್ ಮಹಾರಾಣಿ ಎಲಿಜಬೆತ್ ಕೂಡ ಅರಮನೆಯ ಒಳಗೇ ಇದ್ದರು. ಇವರಿಗೆ 94 ವರ್ಷ ವಯಸ್ಸಾಗಿರುವ ಹಿನ್ನೆಲೆಯಲ್ಲಿ, ವೃದ್ಧರಿಗೆ ವೈರಸ್​ ಸೋಂಕು ಬಹು ಬೇಗನೆ ತಗಲುವ ಸಾಧ್ಯತೆಯಿಂದ ಇನ್ನೂ ಕಠಿಣ ನಿಯಮಗಳನ್ನು ಅಲ್ಲಿಯ ಸರ್ಕಾರ ಸೂಚಿಸಿತ್ತು.

    ಇದೀಗ ಲಾಕ್​ಡೌನ್​ ಸಡಿಲಿಕೆ ಆಗಿರುವ ಕಾರಣ, ಮಹಾರಾಣಿ ಎಲಿಜಬೆತ್ ಕುದುರೆ ಸವಾರಿ ಮಾಡಲು ಎರಡು ತಿಂಗಳ ನಂತರ ಅರಮನೆಯಿಂದ ಹೊರಕ್ಕೆ ಬಂದಿದ್ದಾರೆ. ಇದರ ಫೋಟೋ ಭಾರಿ ವೈರಲ್​ ಆಗಿದೆ. 94 ವರ್ಷವಾಗಿದ್ದರೂ ಸಲೀಸಾಗಿ ಕುದುರೆಯ ಸವಾರಿ ಮಾಡುವುದು ನೆಟ್ಟಿಗರ ಗಮನ ಸೆಳೆದು, ಪ್ರಶಂಸೆ ವ್ಯಕ್ತವಾಗಿದೆ.

    ಇದನ್ನೂ ಓದಿ:  VIDEO: ಸೋನು ಅಂಕಲ್​… ಅಮ್ಮನನ್ನು ಅಜ್ಜಿ ಮನೆಗೆ ಕಳಿಸ್ತೀರಾ? ಪುಟಾಣಿ ಪ್ರಶ್ನೆಗೆ ನಟ ಕಂಗಾಲು

    ಇಲ್ಲಿನ ವಿಂಡ್ಸರ್ ಹೋಮ್ ಪಾರ್ಕ್‌ನಲ್ಲಿ 14 ವರ್ಷದ ಕುದುರೆಯನ್ನು ಏರಿ ರಾಣಿ ಎಲಿಜಬೆತ್ ಕೆಲಹೊತ್ತು ಸವಾರಿ ಮಾಡಿದರು.ವಿಂಡ್ಸರ್ ಕ್ಯಾಸಲ್‌ನಲ್ಲಿ ರಾಣಿ ಎಲಿಜಬೆತ್ ತಮ್ಮ ಪತಿ 98 ವರ್ಷದ ಪ್ರಿನ್ಸ್ ಫಿಲಿಪ್ ಅವರೊಂದಿಗೆ ವಾಸಿಸುತ್ತಿದ್ದಾರೆ.

    ಇಂಥವರೂ ಇದ್ದಾರೆ: ಲಾಕ್​ಡೌನ್​ ಸಂತ್ರಸ್ತರ ನೆರವಿಗಾಗಿ ಚಿನ್ನ ಮಾರಿದ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts