More

    ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಪಿವಿ ಸಿಂಧು ವಿಫಲ

    ಹುಯೆವ್ (ಸ್ಪೇನ್): ಕಳೆದ 2 ವರ್ಷಗಳಿಂದ ವಿಶ್ವ ಚಾಂಪಿಯನ್ ಎನಿಸಿದ್ದ ಪಿವಿ ಸಿಂಧು 17-21, 13-21 ನೇರ ಗೇಮ್‌ಗಳಿಂದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಚೀನಾ ತೈಪೆಯ ತೈ ಜು ಯಿಂಗ್ ಎದುರು ನಿರಾಸೆ ಅನುಭವಿಸಿದರು. 42 ನಿಮಿಷಗಳ ಕಾಲ ನಡೆದ ಕದನದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಮೊದಲ ಗೇಮ್‌ನಲ್ಲಿ ಪ್ರಬಲ ನಿರ್ವಹಣೆ ತೋರಿದರೂ ಚೀನಾ ತೈಪೆ ಆಟಗಾರ್ತಿಯ ಆಕ್ರಮಣಕಾರಿ ನಿರ್ವಹಣೆ ಎದುರು ನಡೆಯಲಿಲ್ಲ. ಎರಡನೇ ಗೇಮ್ ಮೊದಲಾರ್ಧದವರೆಗೂ ಸಮಬಲದಿಂದ ಕೂಡಿದರೂ ಬಳಿಕ ಸಿಂಧು ಮಾಡಿಕೊಂಡ ಎಡವಟ್ಟಿನ ಲಾಭ ಪಡೆದ ವಿಶ್ವ ನಂ. 1 ತೈ ಜು ಯಿಂಗ್ ಭರ್ಜರಿ ಗೆಲುವಿನ ನಗೆ ಬೀರಿದರು.

    2019ರಲ್ಲಿ ಸ್ವಿಜರ್ಲೆಂಡ್‌ನಲ್ಲಿ ನಡೆದ ಟೂರ್ನಿಯಲ್ಲಿ ಸಿಂಧು ಚಾಂಪಿಯನ್ ಆಗಿದ್ದರು. ಆಗ ಕ್ವಾರ್ಟರ್ ಫೈನಲ್‌ನಲ್ಲೇ ತೈ ಜು ಯಿಂಗ್‌ಗೆ ಸಿಂಧು ಸೋಲುಣಿಸಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು 1 ಸ್ವರ್ಣ, ತಲಾ 2 ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದಾರೆ. ಮಾಜಿ ವಿಶ್ವ ನಂ.1 ಕಿಡಂಬಿ ಶ್ರೀಕಾಂತ್ ಹಾಗೂ ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ. ಇದರೊಂದಿಗೆ ಪ್ರತಿಷ್ಠಿತ ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಆವೃತ್ತಿಯಲ್ಲಿ ಭಾರತದ ಇಬ್ಬರು ಪುರುಷ ಷಟ್ಲರ್‌ಗಳು ಪದಕ ಜಯಿಸಿದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts