More

    ಅಂಧ ಮಕ್ಕಳನ್ನು ಸಂಗೀತ ವಿದ್ವಾಂಸರನ್ನಾಗಿಸಿದ ಪಂ. ಪುಟ್ಟರಾಜರು

    ಸವಣೂರ: ಅಂಧ ಮಕ್ಕಳಿಗೆ ಗಾನಲೋಕ ಪರಿಚಯಿಸಿದ ಮಹಾತ್ಮರಾದ ಪಂ. ಪುಟ್ಟರಾಜ ಕವಿ ಗವಾಯಿಗಳನ್ನು ನಿತ್ಯ ನೆನೆಯುವುದು ಅವಶ್ಯವಾಗಿದೆ ಎಂದು ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

    ತಾಲೂಕಿನ ತೊಂಡೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಕಲ್ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಪದ್ಮಭೂಷಣ ಪಂ. ಪುಟ್ಟರಾಜ ಕವಿ ಗವಾಯಿಗಳ 13ನೇ ಪುಣ್ಯಸ್ಮರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಅಂಧತ್ವವಿರುವ ಮಕ್ಕಳನ್ನು ಸಂಗೀತ ರಂಗದಲ್ಲಿ ವಿದ್ವಾಂಸರನ್ನಾಗಿಸಿದ ಕೀರ್ತಿಗುರು ಪುಟ್ಟರಾಜರಿಗೆ ಸಲ್ಲುತ್ತದೆ ಎಂದರು.
    ಪುರಾಣ ಪ್ರವಚನಕಾರ ಡಾ. ಗುರುಮಾಂತಯ್ಯನವರು ಆರಾಧ್ಯಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗಿರೀಶ ಅಂಗಡಿ, ಬಸವರಾಜ ಬಸಟ್ಟೆಪ್ಪನವರ, ಕೆ.ಎಸ್. ಆರಾಧ್ಯಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts