More

    ಹಳೇ ಗಾಡಿ ಗುಜರಿಗೆ ಬಿಡಿ!; ವಾಹನ ಸ್ಕ್ರ್ಯಾಪಿಂಗ್ ಪ್ರಕ್ರಿಯೆ ಆರಂಭ;15 ವರ್ಷ ಮೀರಿದ 14.3 ಲಕ್ಷ ವಾಹನಗಳು

    ಕೀರ್ತಿನಾರಾಯಣ ಸಿ. ಬೆಂಗಳೂರು

    ಹದಿನೈದು ವರ್ಷ ತುಂಬಿರುವ ಖಾಸಗಿ ಹಾಗೂ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದೆ. ಪ್ರಸ್ತುತ 14.3 ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಇಂತಹ ವಾಹನಗಳನ್ನು ನಾಶಪಡಿಸಲು ಅಗತ್ಯವಿರುವ ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳನ್ನು (ಆರ್​ವಿಎಸ್​ಪಿ) ಸ್ಥಾಪಿಸಲು ಸಲ್ಲಿಸಿದ್ದ ಕರ್ನಾಟಕ ಗುಜರಿ ನೀತಿ-2022 ಕರಡು ಯೋಜನೆ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ಸಾರಿಗೆ ಇಲಾಖೆ ಅರ್ಜಿಗಳನ್ನು ಆಹ್ವಾನಿಸಲಿದೆ.

    ಹಳೇ ವಾಹನಗಳನ್ನು ಗುಜರಿಗೆ ಹಾಕಿದರೆ ವಾಹನ ಮಾಲೀಕರಿಗೆ ಠೇವಣಿ ಪ್ರಮಾಣಪತ್ರ (ಸಿಒಡಿ) ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಆ ಪ್ರಮಾಣಪತ್ರ ತೋರಿಸಿದರೆ ಸಾರಿಗೇತರ ವಾಹನಕ್ಕೆ ಶೇ.25ರಷ್ಟು, ಸಾರಿಗೆ ವಾಹನಕ್ಕೆ ಶೇ.15ರಷ್ಟು ತೆರಿಗೆ ವಿನಾಯಿತಿ ಸಿಗಲಿದೆ. ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ ಹಾಗೂ ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಲಭ್ಯವಿರುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಾಹಿತಿಯಂತೆ ದೇಶಾದ್ಯಂತ ಸೂಕ್ತ ನೋಂದಣಿ ಪತ್ರ ಮತ್ತು ಫಿಟ್​ನೆಸ್ ಸರ್ಟಿಫಿಕೇಟ್ ಇಲ್ಲದೆ ಗುಜರಿಗೆ ಹೋಗಲು ಅರ್ಹ ವಾಗಿರುವ 1.2 ಕೋಟಿ ವಾಹನಗಳಿವೆ.

    ಈ ಪೈಕಿ ಕರ್ನಾಟಕದಲ್ಲಿ ಅಂದಾಜು 14.3 ಲಕ್ಷ ವಾಹನಗಳು ಗುಜರಿಗೆ ಹೋಗುವಂತಿವೆ. ರಾಜ್ಯದಲ್ಲಿರುವ ಒಟ್ಟಾರೆ ವಾಹನಗಳ ಪೈಕಿ ಶೇ.14ರಷ್ಟು ವಾಹನಗಳು ಈ ವರ್ಗೀಕರಣಕ್ಕೆ ಸೇರುತ್ತವೆ. ಮುಂದಿನ 5 ವರ್ಷದಲ್ಲಿ ಬರೋಬ್ಬರಿ 66 ಲಕ್ಷ ವಾಹನಗಳು 15 ವರ್ಷ ಪೂರೈಸಲಿವೆ ಎಂದು ಕರಡು ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.

    ಸಾರಿಗೆ ಇಲಾಖೆಯಿಂದ ಅನುಮತಿ ಪಡೆದು ಸ್ಥಾಪಿಸಿದ ಗುಜರಿ ಕೇಂದ್ರಗಳಲ್ಲಿ ಹಳೇ ವಾಹನಗಳನ್ನು ಸ್ಕ್ರಾ್ಯ್ ಮಾಡಲಾಗುತ್ತದೆ. ಆದರೆ, ಗುಜರಿಗೆ ಹಾಕಲು ವಾಹನಗಳನ್ನು ಕೊಡುವ ಮುನ್ನ ವಾಹನದ ಮೇಲೆ ಯಾವುದೇ ಕ್ರಿಮಿನಲ್ ಹಿನ್ನೆಲೆ, ಕೇಸ್ ಹಾಗೂ ದಂಡ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡಿಲ್ಲ ಎಂದು ಮಾಲೀಕ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಕೇಂದ್ರದ ಮಾಲೀಕರು, ಗುಜರಿಗೆ ಹಾಕಿದ ವಾಹನದ ಚಾಸ್ಸಿ ನಂಬರನ್ನು ಜೋಪಾನವಾಗಿ 6 ತಿಂಗಳು ಇಟ್ಟಿರಬೇಕು. ವಾಹನದ ಎಲ್ಲ ಭೌತಿಕ ದಾಖಲೆಗಳನ್ನು 2 ವರ್ಷದವರೆಗೆ ಹಾಗೂ ಸ್ಕಾ್ಯನ್ ದಾಖಲಾತಿಗಳನ್ನು 10 ವರ್ಷಗಳವರೆಗೆ ಸುರಕ್ಷಿತವಾಗಿ ಇಟ್ಟಿರಬೇಕು. ಅಧಿಕಾರಿಗಳು ಪರಿಶೀಲನೆ ಬಂದ ಸಂದರ್ಭದಲ್ಲಿ ದಾಖಲಾತಿಗಳನ್ನು ತೋರಿಸಬೇಕಾಗುತ್ತದೆ ಎಂದು ಷರತ್ತುಗಳನ್ನು ವಿಧಿಸಲಾಗಿದೆ.

    ಎಟಿಎಸ್​ನಲ್ಲೇ ಎಫ್​ಸಿ ಆಗಬೇಕು: ಎಲ್ಲ ವಾಹನಗಳು ಫಿಟ್​ನೆಸ್ ಸರ್ಟಿಫಿಕೇಟ್ ಹೊಂದಿರುವುದು ಕಡ್ಡಾಯ. ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್​ಗಳಲ್ಲೇ (ಎಟಿಎಸ್) ಎಫ್​ಸಿ ಮಾಡಿಸಬೇಕು. ಆರ್​ಸಿ ನವೀಕರಣದ ಸಂದರ್ಭದಲ್ಲಿ ಎಫ್​ಸಿಯಲ್ಲಿ ಅರ್ಹತೆ ಪಡೆಯದ ಅಥವಾ ಎಟಿಎಸ್​ನಿಂದ ಸರ್ಟಿಫಿಕೇಟ್ ಪಡೆಯದ ಸಾರಿಗೇತರ ಹಾಗೂ ಸಾರಿಗೆ ವಾಹನಗಳನ್ನು ಗುಜರಿಗೆ ಒಪ್ಪಿಸಬೇಕು.

    ತೆರಿಗೆ ವಿನಾಯಿತಿ ಹೇಗೆ?

    • – ಹಳೇ ವಾಹನ ಗುಜರಿಗೆ ಕೊಟ್ಟಾಗ ಸರ್ಟಿಫಿಕೇಟ್ ಆಫ್ ಡೆಪಾಸಿಟ್ (ಸಿಒಡಿ) ಕೊಡಲಾಗುತ್ತೆ
    • – ಹೊಸ ವಾಹನ ಖರೀದಿಸುವಾಗ ಈ ಸರ್ಟಿಫಿಕೇಟ್ ಕೊಟ್ಟರೆ ಶೇ.25 ತೆರಿಗೆ ವಿನಾಯಿತಿ ಸಿಗುತ್ತದೆ
    • – 1986ಕ್ಕಿಂತ ಮುನ್ನ ನೋಂದಣಿಯಾಗಿರುವ ದ್ವಿಚಕ್ರ ವಾಹನಕ್ಕೆ 500 ರೂ. ತೆರಿಗೆ ವಿನಾಯಿತಿ
    • – 1995ರ ಮುನ್ನ ನೋಂದಣಿಯಾದ ಲಘು ಮೋಟಾರು ವಾಹನಕ್ಕೆ (ಕಾರು) 3,000 ರೂ.
    • – ಈ ತೆರಿಗೆ ವಿನಾಯಿತಿ ಸೌಲಭ್ಯ 2023ರ ಏ.1ರಿಂದ ನಂತರದ 5 ವರ್ಷಗಳವರೆಗೆ ಇರುತ್ತದೆ

    ಗುಜರಿ ನೀತಿ ಉದ್ದೇಶವೇನು?

    • – ಮಿತಿಮೀರುತ್ತಿರುವ ವಾಯುಮಾಲಿನ್ಯ ಪ್ರಮಾಣ ನಿಯಂತ್ರಣ
    • – ರಸ್ತೆ, ಪ್ರಯಾಣಿಕರು ಹಾಗೂ ವಾಹನ ಸುರಕ್ಷತೆಗೆ ಹೆಚ್ಚು ಆದ್ಯತೆ
    • – ಆಟೋಮೊಬೈಲ್ ಕ್ಷೇತ್ರ ಉತ್ತೇಜನದ ಜತೆ ಉದ್ಯೋಗ ಸೃಷ್ಟಿ
    • – ಇಂಧನ ಮೈಲೇಜ್ ಹೆಚ್ಚಿಸಿ, ಮಾಲೀಕರಿಗೆ ನಿರ್ವಹಣೆ ವೆಚ್ಚ ಕಡಿಮೆ
    • – ಈಗಿರುವ ಸ್ಕ್ರಾ್ಯಂಗ್ ನೀತಿಯನ್ನು ರಾಜ್ಯದಲ್ಲಿ ಅಧಿಕೃತಗೊಳಿಸುವುದು
    • – ವೈಜ್ಞಾನಿಕ ರೀತಿಯಲ್ಲಿ ಹಳೇ ವಾಹನ ನಾಶಪಡಿಸಿ ಪುನರ್ಬಳಕೆಗೆ ಒತ್ತು

    ಯಾವ ವಾಹನ ಗುಜರಿಗೆ?

    • ನೋಂದಣಿಯಾಗಿ 15 ವರ್ಷ ಪೂರೈಸಿದ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವಾಹನ
    • ನೋಂದಣಿ (ಆರ್​ಸಿ) ನವೀಕರಣ ಮಾಡಿರದ/ಫಿಟ್​ನೆಸ್ ಸರ್ಟಿಫಿಕೇಟ್​ಗೆ ಸಿಗದ ವಾಹನ
    • ಕೇಂದ್ರ/ರಾಜ್ಯ ನಿಗದಿಪಡಿಸಿರುವ ಆರ್ಥಿಕ ವೆಚ್ಚ ಕ್ಕಿಂತ ರಿಪೇರಿಗೆ ಹೆಚ್ಚು ತಗಲುವ ವಾಹನಗಳು
    • ಗಣಿಗಾರಿಕೆ, ಹೆದ್ದಾರಿ, ಇಂಧನ, ಫಾಮ್ರ್ ಯೋಜನೆಗಳಲ್ಲಿ ಬಳಕೆಯಾಗಿರುವಂಥವು
    • ಉತ್ಪಾದನಾ ಕಂಪನಿಗಳ ತಿರಸ್ಕೃತ, ಟೆಸ್ಟ್ ಡ್ರೖೆವ್, ಸಾಗಾಟ ವೇಳೆ ಡ್ಯಾಮೇಜ್ ಆದ ವಾಹನಗಳು
    • ಡೀಲರ್​ಗಳಿಂದ ಮಾರಾಟವಾಗದ, ನೋಂದಣಿಯಾಗದ ವಾಹನಗಳು
    • ಸರ್ಕಾರಿ ಏಜೆನ್ಸಿಗಳು ಜಪ್ತಿ ಮಾಡಿಕೊಂಡ ಅಥವಾ ಹರಾಜು ಹಾಕಿರುವ ವಾಹನಗಳು
    • ಮಾಲೀಕರೇ ಸ್ವ ಇಚ್ಛೆಯಿಂದ ಗುಜರಿಗೆ ಹಾಕುವಂತಹ ನೋಂದಣಿಯಾದ ವಾಹನಗಳು

    ರಾಜ್ಯದಲ್ಲಿ ಗುಜರಿ ನೀತಿ ಜಾರಿಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಳೇ ವಾಹನಗಳನ್ನು ನಾಶಪಡಿಸಲು ಅಗತ್ಯವಿರುವಂತಹ ನೋಂದಾಯಿತ ವಾಹನಗಳ ಗುಜರಿ ಕೇಂದ್ರಗಳನ್ನು (ಆರ್​ವಿಎಸ್​ಪಿ) ಸ್ಥಾಪಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು.

    | ಎಸ್.ಎನ್.ಸಿದ್ದರಾಮಪ್ಪ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ

    ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪನೆ ಹೇಗೆ?

    • ಯಾವುದೇ ವ್ಯಕ್ತಿ, ಸಂಸ್ಥೆ, ಸೊಸೈಟಿ ಕಾನೂನುಬದ್ಧವಾಗಿ ಸ್ಕ್ರಾ್ಯಂಗ್ ಕೇಂದ್ರ ಸ್ಥಾಪಿಸಬಹುದು
    • ಸಾರಿಗೆ ಆಯುಕ್ತರಿಗೆ ಫಾಮ್ರ್ 1ರಲ್ಲಿ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ
    • ಅರ್ಜಿ ಸಲ್ಲಿಸಿದ 60 ದಿನದಲ್ಲಿ -ಠಿ;1 ಲಕ್ಷ ಪ್ರೊಸೆಸಿಂಗ್ ಶುಲ್ಕ ಹಾಗೂ -ಠಿ;10 ಲಕ್ಷ ಠೇವಣಿ ಇಡಬೇಕು
    • 10 ವರ್ಷ ಅವಧಿಗೆ ನೋಂದಣಿ ಮಾಡಲಾಗುತ್ತದೆ. ಮತ್ತೆ 10 ವರ್ಷ ನವೀಕರಣಕ್ಕೆ ಅವಕಾಶ
    • ಕರ್ನಾಟಕದಲ್ಲಿ ಕೇಂದ್ರ ಸ್ಥಾಪಿಸಿ, ರಾಜ್ಯ/ಕೇಂದ್ರಾಡಳಿತ ಪ್ರದೇಶದ ವಾಹನ ಸ್ಕ್ರಾ್ಯ್ಗೆ ಅವಕಾಶ

    ಹಳೇ ವಾಹನಗಳಿಗೆ ಹಸಿರು ತೆರಿಗೆ

    • 15 ವರ್ಷ ಮೇಲ್ಪಟ್ಟ ಸಾರಿಗೇತರ ವಾಹನ 7 ವರ್ಷ ಪೂರೈಸಿದ ಸಾರಿಗೆ ವಾಹನಗಳ ಆರ್​ಸಿ ನವೀಕರಣ ವೇಳೆ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯನ್ವಯ ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತಿದೆ.
    • ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸಲು ನೋಂದಣಿ ಶುಲ್ಕ, ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
    • ಹಳೇ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿಸಲು ಸಾರಿಗೇತರ ವಾಹನಕ್ಕೆ ಶೇ.25ರಷ್ಟು ಹಾಗೂ ಸಾರಿಗೆ ವಾಹನಕ್ಕೆ ಶೇ.15ರಷ್ಟು ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts