More

    ‘ಪುಷ್ಪ’ ಟ್ರೈಲರ್​ನಲ್ಲಿ ಹೇಗಿದೆ ಡಾಲಿ ಧನಂಜಯ್, ರಶ್ಮಿಕಾ ಲುಕ್ ? ಟ್ರೈಲರ್​ಗೆ 20 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ!

    ಬೆಂಗಳೂರು: ಡಿ.2 ರಿಂದ ಟಾಲಿವುಡ್​​ನಲ್ಲಿ ‘ಅಖಂಡ’ ಸಿನಿಮಾದೇ ಸದ್ದು. ಆದರೆ, ಡಿ.6 ಸಂಜೆ 8 ಗಂಟೆಯಿಂದ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ‘ಪುಷ್ಪ’ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡಲು ಮುಂದಾಗಿದೆ. ಏಕೆಂದರೆ, ಡಿ.17 ರಂದು ತೆರೆ ಕಾಣಲಿರುವ ‘ಪುಷ್ಪ – ಭಗ1’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದ ಟ್ರೈಲರ್ ಕಂಡ ವೀಕ್ಷಕರು ಅಲ್ಲು ಅರ್ಜುನ್ ಮಾಸ್ ಲುಕ್​ಗೆ ಫಿದಾ ಆಗಿದ್ದಾರೆ. ಜೊತೆಗೆ, ಈ ಸಿನಿಮಾದ ಟ್ರೈಲರ್ ನಮ್ಮ ಕನ್ನಡಿಗರ ಮನಸ್ಸು ಗೆದ್ದಿದೆ. ಇದಕ್ಕೆ, ಕಾರಣ ಡಾಲಿ ಧನಂಜಯ್.

    'ಪುಷ್ಪ' ಟ್ರೈಲರ್​ನಲ್ಲಿ ಹೇಗಿದೆ ಡಾಲಿ ಧನಂಜಯ್, ರಶ್ಮಿಕಾ ಲುಕ್ ? ಟ್ರೈಲರ್​ಗೆ 20 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ!
    ಅಂದಹಾಗೆ, ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ‘ಪುಷ್ಪ’ದಲ್ಲಿ ನಟ ಡಾಲಿ ಧನಂಜಯ್ ಒಂದು ನೆಗೆಟಿವ್ ರೋಲ್​ನಲ್ಲಿ ಮಿಂಚಲಿದ್ದಾರೆ. ಧನಂಜಯ್ ಪಾತ್ರದ ಹೆಸರು ಜಾಲಿ ರೆಡ್ಡಿ. ಟ್ರೈಲರ್​​ನಲ್ಲಿ ಎರಡು ಕಡೆ ಧನಂಜಯ್ ಅವರ ಸಿನಿಮಾದಲ್ಲಿನ ಲುಕ್ ಕಾಣಿಸಿಕೊಂಡಿದೆ. ತುಂಬಾ ರಫ್ ಆ್ಯಂಡ್ ಟಫ್ ಆಗಿ ಕಾಣಿಸಿಕೊಂಡಿರುವ ಧನಂಜಯ್ ತಮ್ಮ ಮಾಸ್ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿಬಿಟ್ಟಿದ್ದಾರೆ. ಕೈಗೆ ಮಲ್ಲಿಗೆ ಹೂವಿನ ಮೊಳ ಕಟ್ಟಿಕೊಂಡು ಗುರಾಯಿಸುವ ನಟ ಧನಂಜಯ್ ನೋಟವನ್ನು ವರ್ಣಿಸಲು ಪದಗಳು ಹುಡುಕಬೇಕೆಂಬಂತಿದೆ.

    'ಪುಷ್ಪ' ಟ್ರೈಲರ್​ನಲ್ಲಿ ಹೇಗಿದೆ ಡಾಲಿ ಧನಂಜಯ್, ರಶ್ಮಿಕಾ ಲುಕ್ ? ಟ್ರೈಲರ್​ಗೆ 20 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ! 'ಪುಷ್ಪ' ಟ್ರೈಲರ್​ನಲ್ಲಿ ಹೇಗಿದೆ ಡಾಲಿ ಧನಂಜಯ್, ರಶ್ಮಿಕಾ ಲುಕ್ ? ಟ್ರೈಲರ್​ಗೆ 20 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ!
    ಮತ್ತೊಂದೆಡೆ, ಕೊಡಗಿನ ಕುವರಿ, ನಮ್ಮ ಕರುನಾಡ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಸಹ ಟ್ರೈಲರ್ ಮೂಲಕವೇ ಅಭಿಮಾನಿಗಳನ್ನು ಬಹಳಷ್ಟು ರಂಜಿಸಿದ್ದಾರೆ. ಹಳ್ಳಿ ಹುಡುಗಿಯ ಪಾತ್ರ ಮಾಡಿರುವ ನಟಿ ರಶ್ಮಿಕಾ ಈ 2.31 ಸೆಕೆಂಡ್ ಟ್ರೈಲರ್​ನಲ್ಲಿ ಒಂದು ಕಡೆ ತಮ್ಮ ಸೀರೆಯ ಸೆರಗನ್ನು ಬಿಚ್ಚಿ ಮತ್ತೆ ಕಟ್ಟಿಕೊಳ್ಳುವ ಸೀನ್ ಇದೀಗ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ. ರಶ್ಮಿಕಾ ತುಂಬಾ ಹಾಟ್ ಅವತಾರದಲ್ಲಿ ಗಾಡಿ ಚಲಾಯಿಸುವ ದೃಶ್ಯವೂ ಕೂಡ ಎಲ್ಲರ ಗಮನ ಸೆಳೆಯುತ್ತಿದೆ.

    'ಪುಷ್ಪ' ಟ್ರೈಲರ್​ನಲ್ಲಿ ಹೇಗಿದೆ ಡಾಲಿ ಧನಂಜಯ್, ರಶ್ಮಿಕಾ ಲುಕ್ ? ಟ್ರೈಲರ್​ಗೆ 20 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ!

    ಇನ್ನು, ಇಡೀ ಚಿತ್ರದ ಟ್ರೈಲರ್​ನ ಹೈಲೈಟ್ ಎಂದರೆ ಅದು ಒಂದು ಡೈಲಾಗ್ ಎಂದೇ ಹೇಳುಬೇಕು. ”ಪುಷ್ಪ, ಅಂದ್ರೆ ಹೂವು ಅಂದ್ಕೊಂಡಿದ್ದೀರಾ… ಬೆಂಕಿ” ಎಂಬ ಈ ಪಂಚ್ ಡೈಲಾಗ್ ಈಗ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ಪುಷ್ಪ’ ಟ್ರೈಲರ್ ಸದ್ಯ ರಿಲೀಸ್ ಆದ 20 ಗಂಟೆಯೊಳಗೆ ಐದೂ ಭಾಷೆಗಳಲ್ಲಿ ಒಟ್ಟು 25 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ತೆಲುಗು ಟ್ರೈಲರ್​ಗೆ 13 ಮಿಲಿಯನ್ ವೀಕ್ಷಣೆಗಳು ಲಭಿಸಿದ್ದರೆ, ಮತ್ತೊಂದೆಡೆ ಕನ್ನಡ ಟ್ರೈಲರ್​ 2 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ದಾಟಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಟ್ರೈಲರ್​​ನದ್ದೆ ಇಷ್ಟು ಹವಾ ಎಂದರೆ, ಚಿತ್ರ ಬಿಡುಗಡೆಯಾದರೆ ಚಿಂದಿ ಉಡಾಯಿಸುವುದರಲ್ಲಿ ಸಂಶಯವಿಲ್ಲ.

    ‘ಗಂಧದ ಗುಡಿ’ ಟೀಸರ್​​ಗೆ 25 ಗಂಟೆಗಳಲ್ಲಿ 3 ಮಿಲಿಯನ್ ವೀಕ್ಷಣೆ! ‘ಅಪ್ಪು’ ಕನಸನ್ನು ನೋಡಿ ಕಣ್ಣೀರಿಡುತ್ತಿದ್ದಾರೆ ಅಭಿಮಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts