More

    ಶುದ್ಧ ನೀರಿನಿಂದ ಫ್ಲೋರೋಸಿಸ್ ದೂರ

    ಮಸ್ಕಿ: ಫ್ಲೋರೈಡ್ ಅಂಶ ಹೆಚ್ಚಿರುವ ಬೋರ್‌ವೆಲ್ ನೀರು ಕುಡಿದರೆ ಫ್ಲೋರೋಸಿಸ್ ರೋಗ ಬರುತ್ತದೆ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸಲಹೆಗಾರ ಗುರುಪ್ರಸಾದ ಹಿರೇಮಠ ಹೇಳಿದರು.

    ಉಸ್ಕಿಹಾಳ ಗ್ರಾಮದಲ್ಲಿ ಫ್ಲೋರೋಸಿಸ್ ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ನೀರಿನಲ್ಲಿ ಫ್ಲೋರೈಡ್ ಅಂಶ ಇದ್ದರೆ ಹಲ್ಲಿನಲ್ಲಿ ಹಳದಿ ಪಾಚಿ ಕಟ್ಟುವುದು, ಹಲ್ಲು ಅಥವಾ ಮೂಳೆ ಸವೆತವಾಗುವುದು ಕಂಡುಬರುತ್ತದೆ. ಇದು ಫ್ಲೋರೋಸಿಸ್ ಲಕ್ಷಣವಾಗಿದೆ. ಈ ರೋಗ ತಡೆಗಟ್ಟಲು ಶುದ್ಧ ನೀರು ಕುಡಿಯಬೇಕು, ಹಾಲು, ಬೆಲ್ಲ, ಹಸಿ ತರಕಾರಿ ಸೇವಿಸಬೇಕು ಎಂದರು.

    ಉಸ್ಕಿಹಾಳ ಗ್ರಾಮದಲ್ಲಿನ ಬೋರವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಕಂಡು ಬಂದಿದ್ದು, ಎಲ್ಲರೂ ಶುದ್ಧ ನೀರಿನ ಘಟಕದಿಂದ ನೀರು ತಂದು ಕುಡಿಯಬೇಕು. ಬಹುತೇಕ ಜನರು ಮದ್ಯಪಾನ ಹಾಗೂ ಧೂಮಪಾನಕ್ಕೆ ಹಣ ಖರ್ಚು ಮಾಡುತ್ತಾರೆ. ಆದರೆ, ಶುದ್ದ ಕುಡಿಯುವ ನೀರು ಖರೀದಿಸಲು ಯೋಚನೆ ಮಾಡುತ್ತಾರೆ ಎಂದು ಗುರುಪ್ರಸಾದ ಹಿರೇಮಠ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts