More

    ಪಂಜಾಬ್: 16ನೇ ಸಿಎಂ ಆಗಿ ಚರಣ್​ಜೀತ್​ ಸಿಂಗ್​ ಚನ್ನಿ; ಜೊತೆಗೆ ಇಬ್ಬರು ಡೆಪ್ಯುಟಿ ಸಿಎಂಗಳ ಅಧಿಕಾರ ಸ್ವೀಕಾರ!

    ಚಂಡೀಗಢ: ಕಾಂಗ್ರೆಸ್​​ನ ಹಿರಿಯ ಶಾಸಕ ಚರಣಜೀತ್​ ಸಿಂಗ್ ಚನ್ನಿ ಅವರು ಇಂದು ಪಂಜಾಬ್​ನ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಚಂಡೀಗಢದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಬನ್​ವಾರಿಲಾಲ್ ಪುರೋಹಿತ್​ ಅವರು ಚನ್ನಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಿದರು.

    ಸಿಎಂ ಹುದ್ದೆ ಏರಿರುವ ಮೊದಲ ದಲಿತ ಸಿಖ್​ ಸಮುದಾಯದವರೆಂಬ ಹೆಗ್ಗಳಿಕೆ ಗಳಿಸಿರುವ 58 ವರ್ಷ ವಯಸ್ಸಿನ ಚನ್ನಿ, ಪಂಜಾಬಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ, ಪಂಜಾಬ್​ ಕಾಂಗ್ರೆಸ್​ ಉಸ್ತುವಾರಿ ಹರೀಶ್ ರಾವತ್ ಮತ್ತು ಪಿಪಿಸಿಸಿ ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ಸಮಾರಂಭದಲ್ಲಿ ಭಾಗವಹಿಸಿದರು. ನಿಕಟಪೂರ್ವ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.

    ಇದನ್ನೂ ಓದಿ: ಬಿಜೆಪಿ ನಾಯಕನಿಗೆ ಐದು ಡೋಸ್‌ ಕರೊನಾ ಲಸಿಕೆ! ಕೋಲಾಹಲ ಸೃಷ್ಟಿಸಿದ ಪ್ರಮಾಣಪತ್ರ

    ರಾಜ್ಯದ ರೂಪ್​ನಗರದ ಚಮ್​ಕೌರ್​ ಸಾಹಿಬ್​​ನಿಂದ ಮೂರನೇ ಬಾರಿ ಶಾಸಕರಾಗಿರುವ ಚರಣ್​ಜೀತ್​ ಸಿಂಗ್​​ ಚನ್ನಿ, ಕ್ಯಾಪ್ಟನ್​ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಟ್ಟು ಒಂಭತ್ತೂವರೆ ವರ್ಷಗಳ ಕಾಲ ಪಂಜಾಬ್​ ಸಿಎಂ ಆಗಿದ್ದ ಕ್ಯಾಪ್ಟನ್​ ವಿರುದ್ಧ ದನಿಯೆತ್ತಿದವರಲ್ಲಿ ಚನ್ನಿ ಕೂಡ ಒಬ್ಬರು.

    ಇಬ್ಬರು ಉಪಮುಖ್ಯಮಂತ್ರಿಗಳು: ಇದೇ ಸಂದರ್ಭದಲ್ಲಿ, ಸಿಎಂ ಉಮೇದುವಾರರಾಗಿದ್ದ ಹಿರಿಯ ಶಾಸಕ ಸುಖ್​ಜಿಂದರ್​ ಸಿಂಗ್​ ರಾಂಧವ ಮತ್ತು ಮತ್ತೊಬ್ಬ ಶಾಸಕರಾದ ಓ.ಪಿ.ಸೋನಿ ಅವರು ಸಚಿವ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದರು. ರಾಂಧವ ಮತ್ತು ಸೋನಿ ಅವರನ್ನು ರಾಜ್ಯದ ಡೆಪ್ಯುಟಿ ಸಿಎಂಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕಿ ಹಾಗೂ ಮಾಜಿ ಸಿಎಂ ರಾಜಿಂದರ್​ ಕೌರ್ ಭಟ್ಟಲ್​ ಹೇಳಿದ್ದಾರೆ. (ಏಜೆನ್ಸೀಸ್)

    ‘ಪ್ರತಿಯೊಂದು ರೂಪಾಯಿ ಸರತಿಯಲ್ಲಿ ಕಾಯುತ್ತಿದೆ!’ ಮೌನ ಮುರಿದ ನಟ ಸೋನು ಸೂದ್​, ಐಟಿ ಸಮೀಕ್ಷೆ ಬಗ್ಗೆ ಹೇಳಿದ್ದೇನು?

    “ಪ್ರತಿ ಮನೆಗೂ ಉದ್ಯೋಗ ಇಲ್ಲವೇ ತಿಂಗಳಿಗೆ 5,000 ರೂಪಾಯಿ”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts