More

    ಬಿಜೆಪಿ ನಾಯಕನಿಗೆ ಐದು ಡೋಸ್‌ ಕರೊನಾ ಲಸಿಕೆ! ಕೋಲಾಹಲ ಸೃಷ್ಟಿಸಿದ ಪ್ರಮಾಣಪತ್ರ

    ಲಖನೌ: ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆಯಲೇಬೇಕು ಎಂದು ಸರ್ಕಾರ ಘೋಷಿಸಿದೆ. ಮೂರನೇ ಡೋಸ್‌ ಔಷಧ ಇದುವರೆಗೂ ಯಾರೂ ಪಡೆದಿಲ್ಲ, ಆ ಬಗ್ಗೆ ಇನ್ನೂ ಲಸಿಕೆಯೂ ಬರಲಿಲ್ಲ.

    ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರಿಗೆ ಐದು ಡೋಸ್‌ ಲಸಿಕೆ ನೀಡಲಾಗಿದ್ದು, ಆರನೇ ಡೋಸ್‌ ಶೀಘ್ರದಲ್ಲಿ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ! ಇದೇನು ಹುಚ್ಚಾ ಎಂದು ಕೇಳಬಹುದು. ಆದರೆ ನಿಜವಾಗಿಯೂ ಐದು ಡೋಸ್‌ ಲಸಿಕೆ ನೀಡಿರುವುದು ಪ್ರಮಾಣ ಪತ್ರದಲ್ಲಿ ಉಲ್ಲೇಖವಾಗಿದೆ.

    ಈ ರೀತಿ ಐದನೇ ಡೋಸ್‌ ಪಡೆದಿರುವ ನಾಯಕ ಎಂದರೆ ಉತ್ತರ ಪ್ರದೇಶದ ಸರ್ದಾನಾ ಭಾಗದ ರಾಂಪಾಲ್​ ಸಿಂಗ್​! ಇದನ್ನು ನೋಡಿ ಖುದ್ದು ಸಿಂಗ್‌ ಅವರೇ ಹೌಹಾರಿ ಹೋಗಿದ್ದಾರೆ. ಏಕೆಂದರೆ, ಅಸಲಿಗೆ ಅವರು ಪಡೆದಿರುವುದು ಎರಡು ಡೋಸ್‌ ಮಾತ್ರ. ಮಾರ್ಚ್​ 16ರಂದು ಹಾಗೂ ಎರಡನೇ ಡೋಸ್​ನ್ನು ಮೇ 8ರಂದು ಪಡೆದಿದ್ದಾರೆ. ಆದರೆ ಲಸಿಕೆ ಪ್ರಮಾಣ ಪತ್ರದಲ್ಲಿ ಮಾತ್ರ ಐದು ಡೋಸ್‌ ಪಡೆದಿರುವುದು ದಾಖಲಾಗಿದೆ.

    73 ವರ್ಷದ ರಾಂಪಾಲ್​ ಸಿಂಗ್​ ಎಂಬವರು ಬೂತ್​ ಸಂಖ್ಯೆ 79ರ ಬಿಜೆಪಿ ಅಧ್ಯಕ್ಷರಾಗಿದ್ದರು. ಇವರು ಹಿಂದೂ ಯುವ ವಾಣಿಯ ಸದಸ್ಯರೂ ಸಹ ಹೌದು. ತಮಗೆ ಹಾಕಿರುವ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ವೇಳೆ ಈ ಎಡವಟ್ಟು ಗೊತ್ತಾಗಿದೆ. ಇದು ಆರೋಗ್ಯ ಇಲಾಖೆ ಮಾಡಿರುವ ಎಡವಟ್ಟು ಎಂದು ರಾಂಪಾಲ್‌ ಸಿಂಗ್‌ ಆರೋಪಿಸಿದರೆ, ಇದು ನಮ್ಮಿಂದಾಗಿರುವ ಎಡವಟ್ಟು ಅಲ್ಲ, ಬದಲಿಗೆ ಯಾರೋ ಕಿಡಿಗೇಡಿಗಳು ಮಾಡಿರುವುದು ಎಂದು ಆರೋಗ್ಯ ಇಲಾಖೆ ಹೇಳಿದೆ. ಒಟ್ಟಿನಲ್ಲಿ ಸತ್ಯಾಂಶ ತಿಳಿದುಬರಬೇಕಿದೆ ಅಷ್ಟೇ.

    ‘ಮೀ ಟೂ’ ಕೇಸ್‌ನಲ್ಲಿ ನೂತನ ಸಿಎಂ: ಐಎಎಸ್‌ ಅಧಿಕಾರಿಗೆ ಮೆಸೇಜ್‌ ಕಳುಹಿಸಿದ್ದ ಸಿಂಗ್‌ಗೆ ಬಂತು ಗ್ರಹಚಾರ

    ದ್ವಿತೀಯ ಪಿಯುಸಿ ರಿಸಲ್ಟ್‌- ಚಾಲೆಂಜ್ ಮಾಡಿ ಪರೀಕ್ಷೆ ತೆಗೆದುಕೊಂಡವರಲ್ಲಿ 36 ವಿದ್ಯಾರ್ಥಿಗಳು ಫೇಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts