More

    ಪಂಜಾಬ್ ಮಾದರಿಯ ಕಾನೂನು ಜಾರಿಗೆ ಆಗ್ರಹ

    ಖಾನಾಪುರ: ರಾಜ್ಯದ ರೈತಾಪಿ ವರ್ಗದವರ ಸಂಕಷ್ಟಗಳನ್ನು ನಿವಾರಿಸುವಂತೆ ಆಗ್ರಹಿಸಿ ನೇಗಿಲಯೋಗಿ ರೈತ ಸೇವಾ ಸಂಘದ ಪದಾಧಿಕಾರಿಗಳು ಗುರುವಾರ ತಾಲೂಕಿನ ಬೀಡಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಬಳಿಕ ಉಪ ತಹಸೀಲ್ದಾರ್ ಚಿದಾನಂದ ಗೊಣಸಗಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

    ಸಂಘಟನೆ ಮುಖಂಡ ಸುಭಾಸ ಪೂಜೇರಿ, ಪಂಜಾಬ್ ರಾಜ್ಯ ಸರ್ಕಾರದ ಮಾದರಿಯಂತೆ ಕೃಷಿ ಉತ್ಪನ್ನಗಳನ್ನು ಎಂಎಸ್‌ಪಿ ಗಿಂತ ಕಡಿಮೆ ದರದಲ್ಲಿ ಖರೀದಿ ಮತ್ತು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವೆಂಬ ರೈತರ ಹಿತಾಸಕ್ತಿ ಕಾಪಾಡುವ ಕಾನೂನನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕು. ರೈತಾಪಿ ವರ್ಗದ ಪ್ರಮುಖ ಬೇಡಿಕೆಗಳಾದ ಕೇರಳ ಮಾದರಿಯಲ್ಲಿ ತರಕಾರಿ ಬೆಲೆಗಳಿಗೆ ಬೆಲೆ ನಿಗದಿ ಮಾಡುವುದು, ರಾಜ್ಯಾದ್ಯಂತ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಪ್ರಮುಖ ಬೆಳೆಗಳ ಖರೀದಿ ಕೇಂದ್ರಗಳನ್ನು ಸ್ಥಾಪಿಸುವುದು, ರೈತಾಪಿ ವರ್ಗದವರ ಕುಂದು ಕೊರತೆ ಆಲಿಸಿ ಆಯಾ ತಾಲೂಕುಗಳಲ್ಲಿ ರೈತರ ಸಂಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸುವುದು ಸೇರಿದಂತೆ ಕೃಷಿಕರು ಖುಷಿಯಿಂದ ಕೃಷಿಯಲ್ಲಿ ತೊಡಗುವ ವಾತಾವರಣ ನಿರ್ಮಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಆರ್.ಬಿ ಪಾಟೀಲ, ಪ್ರಸಾದ ಕುಲಕರ್ಣಿ, ನಾಗೇಂದ್ರ, ಆನಂದ ಬೇವಿನ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts