More

    IPL 2024: ಗೆಲುವಿನ ಹಾದಿಗೆ ಮತ್ತೆ ಮರಳಲು ಪಂಜಾಬ್ ಕಿಂಗ್ಸ್​ ಮಾಡಲೇಬೇಕಾದ 3 ಬದಲಾವಣೆಗಳಿವು!

    ಚಂಡೀಗಢ: ನಿನ್ನೆ (ಏ.9) ಇಲ್ಲಿನ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ 2024ರ 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್​ ತಂಡದ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಉತ್ತಮ ಸ್ಟಾರ್ಟ್​ ಪಡೆಯಲಿಲ್ಲ.

    ಇದನ್ನೂ ಓದಿ: ನಿತೀಶ್​ ರೆಡ್ಡಿ ಆಲ್​ರೌಂಡರ್​ ಪ್ರದರ್ಶನ: ಸನ್​ರೈಸರ್ಸ್​ ಹೈದರಾಬಾದ್ ಎದುರು ಶರಣಾದ ಪಂಜಾಬ್​ ಕಿಂಗ್ಸ್​​

    ಓಪನರ್ಸ್​ ಆಗಿ ಬಂದ ಟ್ರಾವಿಸ್ ಹೆಡ್ (21) ಹಾಗೂ ಅಭಿಷೇಕ್ ಶರ್ಮಾ (16) ಹೆಚ್ಚು ಕಾಲ ಕ್ರೀಸ್​ನಲ್ಲಿ ನಿಲ್ಲದೆ ಬೇಗನೆ ಔಟ್​ ಆಗಿ ಪೆವಿಲಿಯನ್​ ಸೇರಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬಂದ ಐಡೆನ್ ಮಾರ್ಕ್ರಾಮ್ (0) ಡಕ್ ಔಟ್ ಆಗಿ ಹೋದರೆ, ನಂತರದಲ್ಲಿ ಕಣಕ್ಕಿಳಿದ ನಿತೀಶ್ ರೆಡ್ಡಿ ಬ್ಯಾಟಿಂಗ್ ಆರ್ಭಟದಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ಕಲೆಹಾಕುವಲ್ಲಿ ಎಸ್​ಆರ್​ಎಚ್​ ಯಶಸ್ವಿಯಾಯಿತು.

    37 ಎಸೆತಗಳನ್ನು ಎದುರಿಸಿದ ನಿತೀಶ್ ಐದು ಸಿಕ್ಸ್ ಹಾಗೂ 4 ಫೋರ್​ಗಳನ್ನು ಸಿಡಿಸುವ ಮೂಲಕ 64 ರನ್ ಗಳಿಸಿ, ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಿದರು. ಎಸ್​ಆರ್​ಎಚ್ ನೀಡಿದ 183 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಸಿಗಲಿಲ್ಲ. ಜಾನಿ ಬೈರ್​ಸ್ಟೋವ್ (0) ಶೂನ್ಯಕ್ಕೆ ಔಟ್​ ಆದರೆ, ಪ್ರಭ್​ಸಿಮ್ರಾನ್ ಸಿಂಗ್ (4) ರನ್​ಗೆ ಹೊರನಡೆದರು. ಇನ್ನು ನಾಯಕ ಶಿಖರ್ ಧವನ್ ಕೇವಲ 14 ರನ್​ಗಳಿಗೆ ಪೆವಿಲಿಯನ್​ಗೆ ಮರಳಿದರು. ಕಡೆಯ ಓವರ್​ವರೆಗೆ ತಲುಪಿದ ಈ ಪಂದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಪಂಜಾಬ್​ ವಿಫಲವಾಯಿತು. ಅದರಲ್ಲೂ ಕೇವಲ 2 ರನ್​ಗಳಿಂದ ಪಂದ್ಯ ಕೈಚೆಲ್ಲಿದ್ದು ಫ್ಯಾನ್ಸ್​ಗೆ ಅತೀವ ಬೇಸರ ತಂದಿತು.

    ಇದನ್ನೂ ಓದಿ: ನಿಷೇಧದ ಬೆನ್ನಲ್ಲೇ ಪೇಟಿಎಂಗೆ ಮತ್ತೊಂದು ಶಾಕ್‌: ​ಸಿಇಒ, ಎಂಡಿ ಹುದ್ದೆಗೆ ಸುರೀಂದರ್​ ಚಾವ್ಲಾ ರಾಜೀನಾಮೆ

    ಸತತ ಸೋಲಿನಿಂದ ತತ್ತರಿಸಿರುವ ಪಂಜಾಬ್​ ಕಿಂಗ್ಸ್​ ಮತ್ತೆ ಗೆಲುವಿನ ಹಾದಿಗೆ ಮರಳಲು ಮಾಡಬೇಕಾದ ಮೂರು ಬದಲಾವಣೆಗಳು ಹೀಗಿವೆ:
    1. ಹರ್‌ಪ್ರೀತ್ ಬ್ರಾರ್‌ ಬದಲಿಗೆ ರಾಹುಲ್ ಚಾಹರ್!
    2. ಪ್ರಭಾಸಿಮ್ರಾನ್ ಸಿಂಗ್ ಬದಲಿಗೆ ಅಥರ್ವ ಟೈಡೆಯಲ್ಲಿ ಸ್ಲಾಟ್
    3. ಶಿಖರ್ ಧವನ್ ಸ್ಟ್ರೈಕ್ ರೇಟ್​ನಲ್ಲಿ ಬೇಕಿದೆ ಸುಧಾರಣೆ,(ಏಜೆನ್ಸೀಸ್). 

    ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಬುದ್ದಿ ಕಲಿಸಲು ಮುಂದಾದ್ರು ಫ್ಯಾನ್ಸ್​! ಹೀಗೆ ಮಾಡೋದೇ ಸರಿ ಅಂತಿದ್ದಾರೆ…

    11 ವರ್ಷಗಳಲ್ಲಿ 15 ಫ್ಲಾಪ್, 4 ಹಿಟ್ ಸಿನಿಮಾ! ಇದೊಂದು ಕಾರಣಕ್ಕೆ ಚಿತ್ರರಂಗ ಬೇಡವೆಂದ ಸ್ಟಾರ್​ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts