More

    ಪಂಜಾಬ್ ಗೆಲುವಿನ ಓಟಕ್ಕೆ ಬ್ರೇಕ್, ರಾಯಲ್ಸ್ ಪ್ಲೇಆಫ್ ಹೋರಾಟ ಜೀವಂತ

    ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸತತ ಐದು ಗೆಲುವಿನ ನಾಗಾಲೋಟಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಬ್ರೇಕ್ ಹಾಕಿತು. ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ (99 ರನ್, 63 ಎಸೆತ, 6 ಬೌಂಡರಿ, 8ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನಡುವೆಯೂ ಕೆಎಲ್ ರಾಹುಲ್ ಬಳಗ ಐಪಿಎಲ್-13ರ ತನ್ನ 13ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 7 ವಿಕೆಟ್‌ಗಳಿಂದ ಶರಣಾಯಿತು. ಈ ಗೆಲುವಿನೊಂದಿಗೆ ರಾಯಲ್ಸ್ ತಂಡ ಪ್ಲೇಆಫ್ ಹೋರಾಟ ಉಳಿಸಿಕೊಂಡಿತು. ಗೇಲ್ ಆಗಮನದ ಬಳಿಕ ಪಂಜಾಬ್ ಅನುಭವಿಸಿದ ಮೊದಲ ಸೋಲು ಇದಾಗಿದೆ.
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್, ಗೇಲ್ ಅಬ್ಬರದ ಜತೆಗೆ ನಾಯಕ ಕೆಎಲ್ ರಾಹುಲ್ (46) ಬಿರುಸಿನ ಬ್ಯಾಟಿಂಗ್ ಲವಾಗಿ 4 ವಿಕೆಟ್‌ಗೆ 185 ರನ್ ಪೇರಿಸಿತು. ಪ್ರತಿಯಾಗಿ ಬೆನ್ ಸ್ಟೋಕ್ಸ್ (50 ರನ್, 26 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್ (48 ರನ್, 25 ಎಸೆತ, 4 ಬೌಂಡರಿ, 3 ಸಿಕ್ಸರ್) ಅಬ್ಬರದ ನೆರವಿನಿಂದ ರಾಯಲ್ 17.3 ಓವರ್‌ಗಳಲ್ಲಿ 3 ವಿಕೆಟ್‌ಗೆ 186 ರನ್ ಗಳಿಸಿ ಜಯದ ನಗೆ ಬೀರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts