More

    ನನ್ನ ಬರ್ತ್​ಡೇಗೆ ಇದೇ ಗಿಫ್ಟ್​ ಕೊಡಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡ ಅಪ್ಪು

    ಬೆಂಗಳೂರು: ಚೀನಾದ ಕರೊನಾ ವೈರಸ್​ ರಾಜ್ಯದಲ್ಲಿಯೂ ಕಾಣಿಸಿಕೊಂಡಿದೆ. ರಾಜ್ಯದ ಆರು ಜನರಲ್ಲಿ ವೈರಸ್​ ಪತ್ತೆಯಾಗಿದ್ದು, ವೈರಸ್​ ಹರಡದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಆದೇಶಿಸಿದೆ. ಸಭೆ ಸಮಾರಂಭಗಳಿಗೆ ಬ್ರೇಕ್​ ಹಾಕಿದ್ದ ಸರ್ಕಾರ ಇಂದಿನಿಂದ ಒಂದು ವಾರದ ಕಾಲ ಬರ್ತ್​ಡೇ, ಮದುವೆ ಕಾರ್ಯಕ್ರಮಗಳನ್ನೂ ಸಹ ನಡೆಸದಿರುವಂತೆ ಆದೇಶಿಸಿದೆ.

    ಸ್ಯಾಂಡಲ್​ವುಡ್​ನ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮಾರ್ಚ್​ 17ರಂದು ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸರ್ಕಾರ ನಿರ್ಬಂಧ ಹೇರಿರುವ ಸಮಯದಲ್ಲಿ ಅಪ್ಪು ಬರ್ತ್​ಡೇ ಬಂದಿರುವುದು ಅಭಿಮಾನಿಗಳಿಗೆ ಭಾರೀ ಬೇಸರ ಉಂಟುಮಾಡಿದೆ. ತಮ್ಮ ಹುಟ್ಟುಹಬ್ಬದ ಕುರಿತಾಗಿ ಪುನೀತ್​ ಮಾತನಾಡಿದ್ದು, ಅಭಿಮಾನಿಗಳಿಂದ ಗಿಫ್ಟ್​ ಒಂದನ್ನು ಕೇಳಿದ್ದಾರೆ.

    ತಾನು ಈ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿರುವ ನಟ ಪುನೀತ್​ ರಾಜ್​ಕುಮಾರ್​, ನೀವು ಕರೊನಾ ಬರದಂತೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿದ್ದರೆ ಅದೇ ನನಗೆ ದೊಡ್ಡ ಉಡುಗೊರೆ ಎಂದು ತಿಳಿಸಿದ್ದಾರೆ. ಹುಟ್ಟುಹಬ್ಬದ ದಿನ ಯಾರೂ ನನ್ನ ಮನೆಯ ಬಳಿ ಬರಬೇಡಿ, ಅಂದು ನಾನು ಮನೆಯಲ್ಲಿರುವುದಿಲ್ಲ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಸರ್ಕಾರದ ಜತೆ ಕೈ ಜೋಡಿಸಬೇಕು. ಇಷ್ಟು ವರ್ಷ ಬೇರೆ ಬೇರೆ ಊರುಗಳಿಂದ ಬಂದು ನನಗೆ ಶುಭಹಾರೈಸಿ ಪ್ರೀತಿ ತೋರಿಸಿದ್ದೀರಿ. ಆ ಪ್ರೀತಿ ನನ್ನ ಮೇಲೆ ಸದಾ ಇರುತ್ತದೆ ಎಂದು ನಾನು ನಂಬಿದ್ದೇನೆ. ಎಲ್ಲರೂ ಹುಷಾರಾಗಿರಿ ಎಂದು ನಟ ತಿಳಿಸಿದ್ದಾರೆ. (ಏಜೆನ್ಸೀಸ್​)

    ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರೆಸ್ಸೆಸ್​ನ ಪ್ರತಿನಿಧಿ ಸಭೆ ರದ್ದು

    ಬೆಲೆ ಏರಿಕೆ ಶಾಕ್​ ನೀಡಿದ ಸರ್ಕಾರ: ಪೆಟ್ರೋಲ್​, ಡೀಸೆಲ್ ಬೆಲೆ 3 ರೂಪಾಯಿ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts