More

    ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ದಂಪತಿಗೆ 3 ವರ್ಷ ಜೈಲು; 70.25 ಲಕ್ಷ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

    ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಪ್ರಕರಣದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಮತ್ತು ಅವರ ಪತ್ನಿಗೆ 3 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಸಿಟಿ ಸಿವಿಲ್ ಸೆಷನ್ ಕೋರ್ಟ್ ತೀರ್ಪು ನೀಡಿದೆ. ಜತೆಗೆ ದಂಪತಿಯ 70.25 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲು ಸೂಚಿಸಿದೆ.

    ಮಂಡ್ಯ ಜಿಲ್ಲೆ ನಾಗಮಂಗಲ ಆರ್‌ಟಿಒ ಜೆ.ವಿ.ರಾಮಯ್ಯ ಮತ್ತು ಅವರ ಪತ್ನಿ ಎಂ.ಲಲಿತಾ ಶಿಕ್ಷೆಗೆ ಗುರಿಯಾದವರು ಎಂದು ಜಾರಿ ನಿರ್ದೇಶನಾಯಲಯ (ಇಡಿ) ಅಧಿಕಾರಿಗಳು ತಿಳಿಸಿದ್ದಾರೆ.

    ಆರ್‌ಟಿಒ ಆಗಿದ್ದ ರಾಮಯ್ಯ ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಆರೋಪದ ಮೇಲೆ 2009ರಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ 1.24 ಕೋಟಿ ರೂ. (ಶೇ.415) ಅಕ್ರಮ ಆಸ್ತಿ ಪತ್ತೆ ಆಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ತನಿಖೆ ಕೈಗೊಂಡಿತ್ತು. ಇದೇ ವೇಳೆ ಇ.ಡಿ. ಸಹ ಹಣಕಾಸಿನ ಅಕ್ರಮ ವಹಿವಾಟು ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ರಾಮಯ್ಯ ಮತ್ತು ಲಲಿತಾ ವಿರುದ್ಧ ತನಿಖೆ ಕೈಗೊಂಡು 70.25 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದರು.

    ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ದಂಪತಿ ಅಪರಾಧಿಗಳು ಎಂದು ಘೋಷಣೆ ಮಾಡಿತ್ತು. ಶುಕ್ರವಾರ ರಾಮಯ್ಯ ಮತ್ತು ಲಲಿತಾಗೆ 3 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಈಗಾಗಲೇ ಇ.ಡಿ. ವಶದಲ್ಲಿ ಇರುವ 70.25 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದೆ.

    ಆಭರಣದ ಅಂಗಡಿ ಮಾಲೀಕನ ಪತ್ನಿಯ ಕೊಲೆ; ಮನೆಯಲ್ಲಿ ಒಂಟಿಯಾಗಿದ್ದಾಗ ನಡೆಯಿತು ಹತ್ಯೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts